ಮೈಸೂರು: ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದಂತ ಜಾನಪದ ಶ್ರೀ ಪ್ರಶಸ್ತಿಯನ್ನು ಪಡೆದಿದ್ದಂತ ಕಂಸಾಳೆ ಮೂಲಕ ತಮ್ಮ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿ, ಗುರ್ತಿಸಿಕೊಂಡಿದ್ದಂತ ಮೈಸೂರಿನ ಕುಮಾರಸ್ವಾಮಿ ಅವರು ಇಂದು ನಿಧನರಾಗಿದ್ದಾರೆ. ಈ ಮೂಲಕ ಇನ್ನಿಲ್ಲವಾಗಿದ್ದಾರೆ.
ಮೈಸೂರಿನ ಕಂಸಾಳೆ ಮಹಾದೇವಯ್ಯ ಅವರ ಪುತ್ರರಾಗಿ, ಅಪ್ಪನಂತೆ ಮಗನೂ ಕಂಸಾಳೆ ಕಲೆಗಾರಿಕೆಯಲ್ಲಿ ಗುರ್ತಿಸಿಕೊಂಡಿದ್ದವರು ಕಂಸಾಳೆ ಕಲಾವಿದ ಕುಮಾರಸ್ವಾಮಿ ಅವರು. ಬಾಲ್ಯದಿಂದಲೂ ತಂದೆಯ ಜೊತೆಗೆ ಜಾನಪದ ಕಲೆಯಾಗಿದ್ದಂತ ಕಂಸಾಳೆಯನ್ನು ತಾನು ಕಲಿತು, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ತಂಡ ಕಟ್ಟಿ ಪ್ರದರ್ಶನ ನೀಡಿದದ್ರು.
1951ರಲ್ಲಿ ಮೈಸೂರಿನ ಬಂಡಿಕೇರಿಯಲ್ಲಿ ಜನಿಸಿದ್ದಂತ ಕುಮಾರಸ್ವಾಮಿ ಅವರು, ನಟ ಶಿವರಾಜ್ ಕುಮಾರ್ ಅಭಿನಯದ ಜನುಮದ ಜೋಡಿ ಚಿತ್ರದ ಕೋಲು ಮಂಡೆ ಹಾಡಿನಲ್ಲಿ ಕಂಸಾಳೆ ಸಂಗೀತದ ನೃತ್ಯ ಸಂಯೋಜನೆ ಮಾಡಿದ್ದರು. ಈ ಕಾರಣಕ್ಕೆ ಡಾ.ರಾಜ್ ಕುಮಾರ್ ಹಾಗೂ ಶಇವರಾಜ್ ಕುಮಾರ್ ಅವರಿಂದ ಸೈ ಎನಿಸಿಕೊಂಡಿದ್ದರು.
ರಾಜ್ಯದ ಪ್ರತಿಷ್ಠಿತ ಜಾನಪದ ಶ್ರೀ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಯನ್ನು ಪುರಸ್ಕೃತರಾಗಿದ್ದಂತ ಕುಮಾರಸ್ವಾಮಿ ಅವರು, ಇಂದು ವಿಧಿವಶರಾಗಿದ್ದಾರೆ. ಈ ಮೂಲಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ಇನ್ನಿಲ್ಲವಾಗಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವಂತ ಚಿತಾಗಾರದಲ್ಲಿ ನೆರವೇರಿಸುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಮದ್ಯಪಾನ ಮಾಡಿ ವಾಹನ ಚಲಾಯಿಸಿದವರಿಗೆ ಬೆಂಗಳೂರು ಪೊಲೀಸರ ಶಾಕ್: 177 ಕೇಸ್ ದಾಖಲು