ಗ್ವಾಲಿಯರ್ : ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಘೋರ ದುರಂತವೊಂದು ನಡೆದಿದ್ದು, ವೇಗವಾಗಿ ಬಂದ ಬಸ್ಸೊಂದು ಸೈಕಲ್‌ಗೆ ಡಿಕ್ಕಿ ಹೊಡೆದು ಸುಮಾರು 10 ಮೀಟರ್‌ವರೆಗೆ ಎಳೆದೊಯ್ದ ಪರಿಣಾಮ 14 ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದಿದೆ.
ಈ ಇಡೀ ಘಟನೆ ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಗಾಯಾಳುವನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಡಿಕ್ಕಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಬಾಲಕ ಹರಸಾಹಸ ಪಡುತ್ತಿದ್ದರೂ ಬಸ್ ನಿಲ್ಲದೆ ಮುಂದೆ ಸಾಗಿ ವಿದ್ಯಾರ್ಥಿಯ ಮೆಲೆ ಹರಿದಿರುವುದು ದೃಶ್ಯಾವಳಿಗಳಿಂದ ತಿಳಿದುಬಂದಿದೆ.
ವೀಡಿಯೊವನ್ನು ವೀಕ್ಷಿಸಿ:-
#WATCH | Gwalior: 14-Year-Old Boy Dies After
School Bus Runs Over Him#MPNews #MadhyaPradesh #GwaliorNews pic.twitter.com/ysADqlOzwy— Free Press Madhya Pradesh (@FreePressMP) November 24, 2024
ವಿದ್ಯಾರ್ಥಿಯನ್ನು ಗ್ವಾಲಿಯರ್‌ನ ಹಾಜಿರಾ ಜಟಿ ಲೈನ್‌ನ ನಿವಾಸಿ ನಂದ್ರಂ ವರ್ಮಾ ಎಂಬವರ ಪುತ್ರ ಭವಿಷ್ಯ (14) ಎಂದು ಗುರುತಿಸಲಾಗಿದೆ. ಈತ ಬಿಟಿಐ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದ. ಚಿಕಿತ್ಸೆ ಪಡೆಯುತ್ತಿದ್ದಾಗ ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ಪದಾವ್ ಪೊಲೀಸ್ ಠಾಣೆಯ ಉಸ್ತುವಾರಿ ಸಂತೋಷ್ ಸಿಂಗ್ ಭದೌರಿಯಾ ತಿಳಿಸಿದ್ದಾರೆ.