ಬೆಂಗಳೂರು: ನಾಡಕಚೇರಿ, ತಹಶೀಲ್ದಾರರ ಕಚೇರಿಗಳಿಗೆ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ನಂತ್ರ, ಕೆಲವು ಸಂದರ್ಭದಲ್ಲಿ ರಿಜೆಕ್ಟ್ ಕೂಡ ಆಗುತ್ತವೆ. ಅದಕ್ಕೆ ಇಲಾಖೆಯ ಅಧಿಕಾರಿಗಳು ಸಕಾರಣ ಕೊಟ್ಟಿದ್ದರೇ, ಕೆಲವು ಸಂದರ್ಭದಲ್ಲಿ ಸರಿಯಾದ ಮಾಹಿತಿ ನೀಡಿರೋದಿಲ್ಲ. ಒಂದು ವೇಳೆ ನೀವು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡಿದ್ದರೇ ಏನು ಮಾಡಬೇಕು ಅಂತ ಮುಂದೆ ಓದಿ.
ಈ ಕುರಿತಂತೆ ಸಕಾಲ ಕರ್ನಾಟಕ ಇಲಾಖೆಯಿಂದ ಮಾಹಿತಿ ಹಂಚಿಕೊಂಡಿದ್ದು, ಸಕಾಲ ಕಾಯ್ದೆಯಡಿ ಅಧಿಸೂಚನೆಗೊಂಡಿರುವ, ಎಲ್ಲಾ ವಿಧದ ಆದಾಯ ಪ್ರಮಾಣ ಪತ್ರಗಳು ಸೇವಾ ವಿಲೇವಾರಿಯಲ್ಲಿ ವಿಳಂಬ ಅಥವಾ ತಿರಸ್ಕೃತ ವಾದಲ್ಲಿ ಪ್ರಥಮ ಮೇಲ್ಮನವಿಯನ್ನು ಸಕ್ಷಮ ಅಧಿಕಾರಿಯವರದ ಉಪವಿಭಾಗಾಧಿಕಾರಿಯವರು ಇತ್ಯರ್ಥ ಪಡಿಸುತ್ತಾರೆ ಎಂದಿದೆ.
ಇನ್ನೂ ಸಕಾಲ ಮಿಷನ್ ಅಡಿಯಲ್ಲಿ ಎಲ್ಲಾ ವಿಧದ ಆದಾಯ ಪ್ರಮಾಣ ಪತ್ರಗಳು ಸೇವಾ ವಿಲೇವಾರಿಯಲ್ಲಿ ವಿಳಂಬ ಅಥವಾ ತಿರಸ್ಕೃತವಾಗಿದ್ದಲೇ ಪ್ರಥಮ ಮೇಲ್ಮನವಿಯನ್ನು ಸಕ್ಷಮ ಪ್ರಾಧಿಕಾರಿಯವರಾದ ಉಪ ವಿಭಾಗಾಧಿಕಾರಿಯವರು ಇತ್ಯರ್ಥ ಪಡಿಸುತ್ತಾರೆ. ಪ್ರಥಮ ಮೇಲ್ಮನವಿಯನ್ನು ಉಪ ವಿಭಾಗಾಧಿಕಾರಿಗಯವರಿಗೆ ಸಲ್ಲಿಸುವಂತೆ ತಿಳಿಸಿದೆ.
ನೀವು ಸಕ್ಷಮ ಪ್ರಾಧಿಕಾರಿಯವರಾದ ಉಪ ವಿಭಾಗಾಧಿಕಾರಿಯವರಿಗೆ ನಿಮ್ಮ ಆದಾಯ ಪ್ರಮಾಣ ಪತ್ರಕ್ಕಾಗಿ ಸಲ್ಲಿಸಿದಂತ ಅರ್ಜಿ ತಿರಸ್ಕೃತಗೊಂಡ ಬಗ್ಗೆ ಪ್ರಥಮ ಮೇಲ್ಮನವಿ ಸಲ್ಲಿಸಿದ ನಂತ್ರ, ಅದನ್ನು ಇತ್ಯರ್ಥ ಮಾಡಲು ತಗಲುವ ಕಾಲ ಮಿತಿ 15 ಕೆಲಸದ ದಿನಗಳು ಆಗಿರುತ್ತವೆ.
ಪ್ರಥಮ ಮೇಲ್ಮನವಿಯನ್ನು ಸಲ್ಲಿಸಲು https://sakala.kar.nic.in/Online_Appeal/Online/Appeal-I.aspx ಲಿಂಕ್ ನಲ್ಲಿ ಆನ್ ಲೈನ್ ಮೂಲಕ ಸಲ್ಲಿಸಬಹುದಾಗಿದೆ.
ಸಕಾಲ ಕಾಯ್ದೆಯಡಿ ಅಧಿಸೂಚನೆಗೊಂಡಿರುವ,
ಎಲ್ಲಾ ವಿಧದ ಆದಾಯ ಪ್ರಮಾಣ ಪತ್ರಗಳು
ಸೇವಾ ವಿಲೇವಾರಿಯಲ್ಲಿ ವಿಳಂಬ ಅಥವಾ ತಿರಸ್ಕೃತ ವಾದಲ್ಲಿ ಪ್ರಥಮ ಮೇಲ್ಮನವಿಯನ್ನು ಸಕ್ಷಮ ಅಧಿಕಾರಿಯವರದ ಉಪವಿಭಾಗಾಧಿಕಾರಿಯವರು ಇತ್ಯರ್ಥ ಪಡಿಸುತ್ತಾರೆ.
ಪ್ರಥಮ ಮೇಲ್ಮನವಿ ಇತ್ಯರ್ಥ ಮಾಡಲು ತಗಲುವ ಕಾಲಮಿತಿ 15 ಕೆಲಸದ ದಿನಗಳಲ್ಲಿ .#karnataka #sakalamission… pic.twitter.com/6mcABlvprw— SAKALA- Government of Karnataka (@SakalaMission) November 19, 2024
ಐಪಿಎಲ್ 2025ರ ಮೆಗಾ ಹರಾಜಿನ ಮೊದಲ ದಿನದಂದು ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ | IPL Mega Auction 2025
ಚಳಿಗಾಲದಲ್ಲಿ ‘ನೆಲ್ಲಿಕಾಯಿ’ಯನ್ನು ಹೆಚ್ಚಾಗಿ ಸೇವಿಸಿ, ಈ ಪ್ರಯೋಜನ ಪಡೆಯಿರಿ | Amla Eating Benefits