ಶಿವಮೊಗ್ಗ: ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ (ರಿ)ಯ ಶಿವಮೊಗ್ಗ ಜಿಲ್ಲಾಧ್ಯಕ್ಷರನ್ನಾಗಿ ಸಾಗರದ ಪತ್ರಕರ್ತ ರಾಘವೇಂದ್ರ ತಾಳಗುಪ್ಪ ಅವರನ್ನು ನೇಮಕ ಮಾಡಲಾಗಿದೆ.
ಇಂದು ಶಿವಮೊಗ್ಗ ನಗರದ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ರಾಜ್ಯಾಧ್ಯಕ್ಷ ಹೇಮಂತ್ ನಾಗರಾಜ್ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಸರ್ವ ಸದಸ್ಯರ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾಧ್ಯಕ್ಷರನ್ನಾಗಿ ಪತ್ರಕರ್ತ ರಾಘವೇಂದ್ರ ತಾಳಗುಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಡಿಸೆಂಬರ್.15, 2024ರಂದು ಬೆಂಗಳೂರಿನ ಗಾಂಧಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ನೂತನ ಪದಾಧಿಕಾರಿಗಳು ಪದಗ್ರಹಣ, ಅಧಿಕಾರ ಸ್ವೀಕಾರವನ್ನು ಮಾಡಲಿದ್ದಾರೆ.
ಇಂದು ನಡೆದಂತ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಪರಶುರಾಮ್ ಬಗಲಿ ಅವರು ಪಾಲ್ಗೊಂಡಿದ್ದರು. ಈ ಸರ್ವ ಸದಸ್ಯರ ಸಭೆಯಲ್ಲೇ ಪತ್ರಕರ್ತ ರಾಘವೇಂದ್ರ ತಾಳಗುಪ್ಪ ಅವರನ್ನು ಶಿವಮೊಗ್ಗ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ರಾಘವೇಂದ್ರ ತಾಳಗುಪ್ಪ ಯಾರು.?
ಸಾಗರ ಸೇರಿದಂತೆ ಶಿವಮೊಗ್ಗದಲ್ಲಿ ರಾಘವೇಂದ್ರ ತಾಳಗುಪ್ಪ ಹೆಸರು ಬಲು ಪರಿಚಿತ. ಸಾಗರ ತಾಲ್ಲೂಕಿನ ತಾಳಗುಪ್ಪದ ರಾಘವೇಂದ್ರ ಹತ್ತಾರು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ದುಡಿಯುತ್ತಿರುವವರು, ತೊಡಗಿಸಿಕೊಂಡಿರುವವರು.
ಸದ್ಯ ಮುಂಜಾನೆ ವಾರ್ತೆಯ ವರದಿಗಾರರಾಗಿ, ಸುದ್ದಿ ಸಹ್ಯಾದ್ರಿ ಆನ್ ಲೈನ್ ಮಾಧ್ಯಮದ ಸಂಪಾದಕರಾಗಿದ್ದಾರೆ. ಸಾಗರವನ್ನು ಕಾರ್ಯಕ್ಷೇತ್ರವಾಗಿಸಿಕೊಂಡು ಕೆಲಸ ಮಾಡುತ್ತಿದ್ದಂತ ರಾಘವೇಂದ್ರ ತಾಳಗುಪ್ಪ, ಈಗ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ಜಿಲ್ಲಾಧ್ಯಕ್ಷರಾಗುವ ಮೂಲಕ ಜಿಲ್ಲಾ ಕೇಂದ್ರಕ್ಕೆ ಕಾಲಿಟ್ಟಿದ್ದಾರೆ. ಅವರ ಮುಂದಿನ ಹಾದಿ ಸುಗಮವಾಗಿರಲಿ. ರಾಘವೇಂದ್ರ ತಾಳಗುಪ್ಪ ಅವರಿಂದ ಉತ್ತಮ ಸಾಮಾಜಿಕ ಸೇವೆ ಮುಂದುವರೆಯಲಿ ಅಂತ ಕನ್ನಡ ನ್ಯೂಸ್ ನೌ ಹಾರೈಸಿ, ಅಭಿನಂದಿಸುತ್ತದೆ.
ನಮ್ಮ ಗೃಹಲಕ್ಷ್ಮಿ ಯೋಜನೆ ನಕಲು ಮಾಡಿದ ಪರಿಣಾಮ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಗೆಲುವು: DCM ಡಿಕೆಶಿ
ಚಳಿಗಾಲದಲ್ಲಿ ‘ನೆಲ್ಲಿಕಾಯಿ’ಯನ್ನು ಹೆಚ್ಚಾಗಿ ಸೇವಿಸಿ, ಈ ಪ್ರಯೋಜನ ಪಡೆಯಿರಿ | Amla Eating Benefits