Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಲ್ಪಸಂಖ್ಯಾತರ ಕುರಿತು ಟೀಕೆ: ಭಾರತದಿಂದ ಸ್ವಿಟ್ಜರ್ಲ್ಯಾಂಡ್‌ಗೆ ತೀಕ್ಷ್ಣ ಪ್ರತಿಕ್ರಿಯೆ

11/09/2025 8:08 AM

BREAKING : ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅರೆಸ್ಟ್ : ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ

11/09/2025 8:08 AM

ಸಾರ್ವಜನಿಕರೇ ಗಮನಿಸಿ : ಆನ್ ಲೈನ್ ನಲ್ಲಿ `ಆದಾಯ ಪ್ರಮಾಣ’ಪತ್ರ ಪಡೆಯಲು ಜಸ್ಟ್ ಹೀಗೆ ಮಾಡಿ

11/09/2025 7:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘ಚಾಂಮುಂಡೇಶ್ವರಿ ದೇವಿಗೆ ಚಿನ್ನದ ರಥ’ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ‘ಸಿಎಂ ಸಿದ್ಧರಾಮಯ್ಯ’ ಸೂಚನೆ
KARNATAKA

BIG NEWS: ‘ಚಾಂಮುಂಡೇಶ್ವರಿ ದೇವಿಗೆ ಚಿನ್ನದ ರಥ’ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ‘ಸಿಎಂ ಸಿದ್ಧರಾಮಯ್ಯ’ ಸೂಚನೆ

By kannadanewsnow0924/11/2024 4:59 PM

ಬೆಂಗಳೂರು: ನಾಡದೇವಿ ಮೈಸೂರಿನ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸುವ ಸಂಬಂಧ ಪರಿಶೀಲಿಸಿ, ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂದಾಯ ಇಲಾಖೆ ಧಾರ್ಮಿಕ ದತ್ತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಅವರಿಗೆ ಆದೇಶಿಸಿದ್ದಾರೆ. ಶಾಸಕ ದಿನೇಶ್ ಗೂಳಿಗೌಡ ಅವರ ಮನವಿ ಮೇಲೆ ಈ ಆದೇಶ ಮಾಡಲಾಗಿದೆ.

ನಾಡದೇವಿಗೆ ಚಿನ್ನದ ರಥ ನಿರ್ಮಿಸಬೇಕು ಎಂಬ ಭಕ್ತರ, ಬೇಡಿಕೆಯನ್ನು ಅರಿತು, ಸಂಕಲ್ಪ ಮಾಡಿಕೊಂಡು ಪ್ರಯತ್ನಿಸಲಾಗಿತ್ತು. ಸಿಎಂ ಆದೇಶದಿಂದ ಈಗ ಆ ಪ್ರಯತ್ನದಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಂತಾಗಿದೆ.

ಚಾಮುಂಡೇಶ್ವರಿ ದೇವಿ ಕನ್ನಡ ನಾಡಿನ ಅಸ್ಮಿತೆಯಾಗಿದ್ದಾಳೆ. ಕನ್ನಡಿಗರ ಧಾರ್ಮಿಕ ಪ್ರತಿನಿಧಿಯಾಗಿದ್ದಾಳೆ, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ, ದೇವಸ್ಥಾನಕ್ಕೆ, ದೇವಿಗೆ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಅದಕ್ಕಾಗಿಯೇ ಮೈಸೂರಿನಲ್ಲಿ ನಡೆಯುವ ದಸರಾವನ್ನು ನಾಡ ಹಬ್ಬ ಎಂದು ಕರೆಯಲಾಗುತ್ತದೆ. ಈ ನಾಡದೇವಿಯನ್ನು ಚಿನ್ನದ ರಥದಲ್ಲಿ ಕೂರಿಸಿ ಮೆರೆಸಬೇಕು ಎಂಬುದು ಭಕ್ತ ಕೋಟಿಯ ಬೇಡಿಕೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿಯಾಗಿ ಬೇಡಿಕೆ ಸಲ್ಲಿಸಿ, ಕೆಲವು ಸಲಹೆ ನೀಡಿದ್ದೆ. ಚಿನ್ನದ ರಥ ನಿರ್ಮಿಸುವ ವೆಚ್ಚವನ್ನು ಸರ್ಕಾರಪಾಲು .ಮತ್ತು ಚಿನ್ನದ ರಥ ನಿರ್ಮಾಣಕ್ಕೆ ಬೇಕಾದ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರ ತಯಾರಿಸಬೇಕು. ದೇವಸ್ಥಾನದಲ್ಲಿ ಈ ಉದ್ದೇಶಕ್ಕೋಸ್ಕರ ಪ್ರತ್ಯೇಕ ಹುಂಡಿಯೊಂದನ್ನು ಇಡಬೇಕು. ಭಕ್ತರು ಅದರಲ್ಲಿ ಹಣ ಹಾಗೂ ಚಿನ್ನವನ್ನು ಹಾಕಲು ಅವಕಾಶ ನೀಡಬೇಕು. ಸಂಗ್ರಹಿತ ಕಾಣಿಕೆ ಹಣಕ್ಕಿಂತ ಹೆಚ್ಚಿಗೆ ಬೇಕಾಗುವ ಹಣವನ್ನು ಸರ್ಕಾರ ಭರಿಸಬೇಕು ಎಂದು ಮನವಿ ನೀಡಿದ್ದೆ. ಅದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಆದೇಶ ನೀಡಿರುವುದು ಸಂತಸ ತಂದಿದೆ ಎಂದಿದ್ದಾರೆ.

ಮನವಿಯಲ್ಲೇನಿತ್ತು ..?

ಪುರಾಣದ ‘ದೇವಿ ಮಹಾತ್ಮೆ’ಯಲ್ಲಿ ತಾಯಿ ಚಾಮುಂಡಿಯ ಪ್ರಸ್ತಾಪವಿದೆ. ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂಬ ಕಥೆ ‘ದೇವಿ ಮಹಾತ್ಮೆ’ ಯಲ್ಲಿ ವರ್ಣಿತವಾಗಿದೆ. ಶ್ರೀ ಚಾಮುಂಡೇಶ್ವರಿಯಿಂದಲೇ ಈ ಬೆಟ್ಟಕ್ಕೆ ಚಾಮುಂಡಿಬೆಟ್ಟವೆಂಬ ಹೆಸರು ಬಂದಿದೆ. ಸ್ಕಂದ ಪುರಾಣದಲ್ಲಿ ಎಂಟು ಬೆಟ್ಟಗಳಿಂದ ಸುತ್ತುವರಿದ ತ್ರಿಮುಕುಟ ಕ್ಷೇತ್ರ ವೆಂಬ ಪವಿತ್ರ ಕ್ಷೇತ್ರ ಉಲ್ಲೇಖಿತವಾಗಿದೆ. ಅವುಗಳಲ್ಲಿ ಪಶ್ಚಿಮ ಭಾಗದಲ್ಲಿರುವ ಚಾಮುಂಡಿಬೆಟ್ಟವೂ ಒಂದಾಗಿದೆ. ಚಾಮುಂಡಿಬೆಟ್ಟದಲ್ಲಿರುವ ಶ್ರೀ ಮಹಾಬಲೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನವಾದುದು. ಹಿಂದೆ ಬೆಟ್ಟವನ್ನು ಮಹಾಬಲಾದ್ರಿ ಎಂದೂ ಸಹ ಕರೆಯಲಾಗುತ್ತಿತ್ತು. ಮುಖ್ಯ ದೇಗುಲದ ಗರ್ಭಗುಡಿಯಲ್ಲಿ ಮಹಿಷಮರ್ಧಿನಿಯಾದ ಚಾಮುಂಡೇಶ್ವರಿಯ ವಿಗ್ರಹವು ವಿರಾಜಮಾನವಾಗಿದೆ. ಎಂಟು ಭುಜಗಳನ್ನು ಹೊಂದಿರುವ ಚಾಮುಂಡೇಶ್ವರಿ ಇಲ್ಲಿ ಆಸೀನಳಾಗಿದ್ದಾಳೆ. ಈ ವಿಗ್ರಹವು ಬಹಳಷ್ಟು ಪುರಾತನವಾದದ್ದು. ಈ ಶಿಲಾಮೂರ್ತಿಯನ್ನು ಮಾರ್ಖಂಡೇಯ ಋಷಿಗಳು ಸ್ಥಾಪಿಸಿದರೆಂದು ಸ್ಥಳ ಪುರಾಣ ಹೇಳುತ್ತದೆ.

ಐತಿಹಾಸಿಕ ಹಿನ್ನೆಲೆ

ಚಾಮುಂಡೇಶ್ವರಿ ದೇವಸ್ಥಾನಕ್ಕೆ 500 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಚಾಮುಂಡಿ ಬೆಟ್ಟದಲ್ಲಿ ಹಿಂದೆ ದೇವಿಯ ಚಿಕ್ಕದೊಂದು ದೇವಸ್ಥಾನವಿದ್ದು, ಕ್ರಮೇಣ ಅಭಿವೃದ್ಧಿ ಹೊಂದಿ, ಹೆಚ್ಚಿನ ಪ್ರಾಮುಖ್ಯತೆ ಗಳಿಸಿ, ಶ್ರೀ ಚಾಮುಂಡೇಶ್ವರಿ ಕ್ಷೇತ್ರವೆಂಬ ದೊಡ್ಡ ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿಯಾಗಿದೆ ಎಂದು ತಿಳಿದುಬರುತ್ತದೆ. ಹಾಗೂ ದೇವಾಲಯವನ್ನು ಮುನ್ನೆಲೆಗೆ ತಂದಿದ್ದಾರೆ. ಚಾಮುಂಡಿ ಬೆಟ್ಟ ಅಭಿವೃದ್ಧಿಯಲ್ಲಿ ಹೊಯ್ಸಳ, ವಿಜಯನಗರ ಅರಸರ ಕೊಡುಗೆಯಿದೆ. 12ನೇ ಶತಮಾನದ ಹೊಯ್ಸಳ ದೊರೆ ವಿಷ್ಣುವರ್ಧನ ಹಾಗೂ 17ನೇ ಶತಮಾನದ ವಿಜಯನಗರದ ಅರಸರ ಹಿನ್ನೆಲೆಯನ್ನು ಗುರುತಿಸಲಾಗಿದೆ.

ಪ್ರಮುಖವಾಗಿ 1399 ರಲ್ಲಿ ಅಧಿಕಾರಕ್ಕೆ ಬಂದ ಮೈಸೂರು ಅರಸರು ಈ ದೇವಿ ಅರಾಧಕರಾಗಿದ್ದು, ಶ್ರದ್ಧಾ ಭಕ್ತಿಯಿಂದ ದೇವಸ್ಥಾನವನ್ನು, ಲೋಕ ಕಲ್ಯಾಣಾರ್ಥವಾಗಿ ಅಭಿವೃದ್ಧಿಪಡಿಸಿ ಅದನ್ನು ದೊಡ್ಡದಾದ ದೇವಾಲಯವನ್ನಾಗಿಸಿದ್ದಾರೆ. 1827 ರಲ್ಲಿ ಮುಮ್ಮಡಿ ಕೃಷ್ಣರಾಜಒಡೆಯರು ಸಾವಿರ ವರ್ಷಕ್ಕೂ ಹಿಂದಿನ ಹಿನ್ನಲೆಯಿರುವ ದೇವಸ್ಥಾನದ ಜೀರ್ಣೋಧ್ದಾರ ಮಾಡಿ ಮಹಾದ್ವಾರದ ಮೇಲೆ ಈ ದೊಡ್ಡ ಗೋಪುರವನ್ನು ಕಟ್ಟಿಸಿದರು ಎಂಬ ಇತಿಹಾಸವಿದೆ. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಬರುವುದಕ್ಕೂ ಮೊದಲು ಮೈಸೂರು ರಾಜ್ಯ ಎಂಬ ಹೆಸರಿತ್ತು. ಮೈಸೂರಿನ ಅಧಿದೇವತೆ ಚಾಮುಂಡಿ ನಾಡದೇವಿಯಾಗಿದ್ದಳು. ಮೈಸೂರಿನ ದಸರಾ ನಾಡ ಹಬ್ಬವಾಗಿತ್ತು. ಹಾಗಾಗಿ ಕನ್ನಡ ನಾಡಿಗೂ ಮೈಸೂರಿನ ಚಾಮುಂಡಿಗೂ ಅವಿನಾಭಾವ ಸಂಬಂಧವಿದೆ. ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಮಾತ್ರವಲ್ಲದೇ ಜನರು ಭಾವನಾತ್ಮಕವಾಗಿಯೂ, ಆಧ್ಯಾತ್ಮಿಕವಾಗಿಯೂ ಚಾಂಮುಂಡಿ ಬೆಟ್ಟದ ಜತೆ ಸಂಬಂಧವನ್ನು ಹೊಂದಿದ್ದಾರೆ. ಈ ದೇವಿಯ ದರ್ಶನಕ್ಕಾಗಿ ಬಹುದೂರದಿಂದ, ದೇಶವಿದೇಶಗಳಿಂದ ಭಕ್ತಾಧಿಗಳು ಬಂದು ತಮ್ಮ ಹರಕೆಗಳನ್ನು ಸಲ್ಲಿಸಿ ಇಷ್ಟಾರ್ಥಗಳನ್ನು ಹೊಂದುತ್ತಿರುತ್ತಾರೆ. ಈ ದೇವಿಯು ಹರಕೆದೇವತೆಯಾಗಿ ಆಗಮೋಕ್ತ ಪೂಜಾದಿ ಉತ್ಸವಗಳನ್ನು ಕೈಗೊಳ್ಳುತ್ತಾ ಪರ್ವತಾಗ್ರದಲ್ಲಿ ಕುಳಿತು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಸರ್ವರನ್ನು ರಕ್ಷಿಸುತ್ತಿರುತ್ತಾಳೆ ಎಂಬುದು ಜನರ ನಂಬಿಕೆ.

ಚಾಮುಂಡಿ ರಥ

1827 ರಲ್ಲಿ ಮುಮ್ಮಡಿ ಕೃಷ್ಣರಾಜಒಡೆಯರು . ‘ಸಿಂಹವಾಹನ’ ರಥವನ್ನು ಒಂದನ್ನು ಮರದಲ್ಲಿ ನಿರ್ಮಿಸಿ ಕೊಡುಗೆ ನೀಡಿದರು. ‘ಸಿಂಹ ವಾಹನ’ ವನ್ನು ರಥೋತ್ಸವ ಸಂದರ್ಭದಲ್ಲಿ ಬಳಸಲಾಗುತ್ತಿದ್ದು, ಅದರಲ್ಲಿ ದೇವಿಯ ಉತ್ಸವ ಮೂರ್ತಿಯನ್ನಿಟ್ಟು ರಥವನ್ನು ಎಳೆಯಲಾಗುತ್ತದೆ. ಮುಮ್ಮಡಿ ಕೃಷ್ಣರಾಜಒಡೆಯರೇ ಮೂಲ ಮೂರ್ತಿಗೆ ಅನುಗುಣವಾಗಿ ಉತ್ಸವ ಮೂರ್ತಿಯನ್ನೂ ತಯಾರಿಸಿ ಶೈವಾಗಮದಲ್ಲಿ ನುರಿತ ದೀಕ್ಷಿತರನ್ನು ಕಂಚಿ ಕ್ಷೇತ್ರದಿಂದ ಕರೆ ತಂದು ಆಗಮೋಕ್ತವಾಗಿ ಪೂಜೆ ಸಲ್ಲಿಸುವಂತೆ ಮಾಡಿದರು ಎನ್ನುತ್ತದೆ ಇತಿಹಾಸ. 1928 ರಿಂದ ರಥೋತ್ಸವ ನಡೆಯುತ್ತ ಬಂತು ಎಂಬ ಇತಿಹಾಸವಿದೆ. ಆಶ್ವಯುಜ ಶುಕ್ಲ ಪೂರ್ಣಿಮೆಯ ಸಂದರ್ಭದಲ್ಲಿ ಪ್ರತಿ ವರ್ಷ ದೇವಿಯ ರಥಾರೋಹಣ ಮಾಡಿ, ರಥೋತ್ಸವ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಮಂಟಪೋತ್ಸವ, ಸಿಂಹವಾಹನೋತ್ಸವ, ಹಂಸವಾಹನೋತ್ಸವ ಮುಂತಾದ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಹಾಗೂ ಬಹು ವಿಜೃಂಭಣೆಯಿಂದ ದೇವಸ್ಥಾನದ ಆವರಣದಲ್ಲಿ ಜರುಗುತ್ತವೆ.

ಸುವರ್ಣ ರಥ ಸಂಕಲ್ಪ

ನಮ್ಮ ಶರೀರದ ಒಳಗಡೆ ಹೇಗೆ ಪರಮಾತ್ಮನಿರುತ್ತಾನೋ ಹಾಗೇ 24 ತತ್ವಗಳಿರುವ ರಥದಲ್ಲೂ ಪರಮಾತ್ಮ ನೆಲೆಸಿರುತ್ತಾನೆ ಎಂಬುದು ಹಿಂದು ಶ್ರದ್ಧಾಳುಗಳ ನಂಬಿಕೆಯಾಗಿದೆ. 1982 ಕೊಯಮುತ್ತೂರಿನ ಭಕ್ತಾದಿಗಳು ಈಗಿನ ಮರದ ರಥವನ್ನು ಮಾಡಿಸಿದರು ಎನ್ನಲಾಗುತ್ತದೆ. ಹಾಲಿ ರಥವೂ ಶಿಥಿಲವಾಗುತ್ತ ಬಂದಿವೆ. ಹಾಗಾಗಿ ಹೊಸ ಚಿನ್ನದ ರಥ ನಿರ್ಮಿಸಿ ಚಾಮುಂಡಿ ದೇವಿಯ ರಥೋತ್ಸವ ಮಾಡಬೇಕು ಎಂಬುದು ಭಕ್ತರ ಸಂಕಲ್ಪ. ದೇವಿಗೆ ಹೊಸ ಚಿನ್ನದ ರಥ ನಿರ್ಮಿಸುವ ಪ್ರಸ್ತಾವ ಈ ಹಿಂದೆಯೇ ಬಂದಿತ್ತು. ಅದಕ್ಕೆ ಸುಮಾರು 100 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದ ಅದು ಈಡೇರಿಲ್ಲ. ಚಿನ್ನದ ರಥ ಮಾಡಲು ಸರ್ಕಾರ ಹಣ ಹಣದ ಅವಶ್ಯಕತೆ ಜೊತೆಗೆ . ಭಕ್ತಾದಿಗಳು ದುಡ್ಡು ಮತ್ತು ಚಿನ್ನವನ್ನು ಹಾಕುತ್ತಾರೆ. ಅದಕ್ಕಾಗಿ ಹುಂಡಿಗಳನ್ನು ಪ್ರತಿಷ್ಠಾಪಿಸಬೇಕು. ಮುಂದಿನ ದಸರಾದ ಒಳಗಡೆ ರಥ ನಿರ್ಮಿಸಿ ದೇವಸ್ಥಾನದ ಒಳಗಡೆ ಆಕೆಯನ್ನು ಮೆರವಣಿಗೆ ಮಾಡಬೇಕು ಎಂಬುದು ಭಕ್ತರ ಬೇಡಿಕೆಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿತ್ತು.

JOB ALERT: ‘ಉದ್ಯೋಗಾಕಾಂಕ್ಷಿ’ಗಳ ಗಮನಕ್ಕೆ: ‘ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್’ನಿಂದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಚಳಿಗಾಲದಲ್ಲಿ ‘ನೆಲ್ಲಿಕಾಯಿ’ಯನ್ನು ಹೆಚ್ಚಾಗಿ ಸೇವಿಸಿ, ಈ ಪ್ರಯೋಜನ ಪಡೆಯಿರಿ | Amla Eating Benefits

Share. Facebook Twitter LinkedIn WhatsApp Email

Related Posts

BREAKING : ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅರೆಸ್ಟ್ : ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ

11/09/2025 8:08 AM1 Min Read

ಸಾರ್ವಜನಿಕರೇ ಗಮನಿಸಿ : ಆನ್ ಲೈನ್ ನಲ್ಲಿ `ಆದಾಯ ಪ್ರಮಾಣ’ಪತ್ರ ಪಡೆಯಲು ಜಸ್ಟ್ ಹೀಗೆ ಮಾಡಿ

11/09/2025 7:58 AM3 Mins Read

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

11/09/2025 7:50 AM1 Min Read
Recent News

ಅಲ್ಪಸಂಖ್ಯಾತರ ಕುರಿತು ಟೀಕೆ: ಭಾರತದಿಂದ ಸ್ವಿಟ್ಜರ್ಲ್ಯಾಂಡ್‌ಗೆ ತೀಕ್ಷ್ಣ ಪ್ರತಿಕ್ರಿಯೆ

11/09/2025 8:08 AM

BREAKING : ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅರೆಸ್ಟ್ : ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ

11/09/2025 8:08 AM

ಸಾರ್ವಜನಿಕರೇ ಗಮನಿಸಿ : ಆನ್ ಲೈನ್ ನಲ್ಲಿ `ಆದಾಯ ಪ್ರಮಾಣ’ಪತ್ರ ಪಡೆಯಲು ಜಸ್ಟ್ ಹೀಗೆ ಮಾಡಿ

11/09/2025 7:58 AM

ನೇಪಾಳ ಹಿಂಸಾಚಾರದ ಭಯಾನಕತೆ ಬಿಚ್ಚಿಟ್ಟ ಭಾರತೀಯ ಮಹಿಳೆ | WATCH VIDEO

11/09/2025 7:56 AM
State News
KARNATAKA

BREAKING : ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅರೆಸ್ಟ್ : ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ

By kannadanewsnow5711/09/2025 8:08 AM KARNATAKA 1 Min Read

ಬೆಂಗಳೂರು: ಮಂಡ್ಯದ ಮದ್ದೂರಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಘಟನೆ ನಡೆದಿತ್ತು. ಈ ಕಲ್ಲು ತೂರಾಟ…

ಸಾರ್ವಜನಿಕರೇ ಗಮನಿಸಿ : ಆನ್ ಲೈನ್ ನಲ್ಲಿ `ಆದಾಯ ಪ್ರಮಾಣ’ಪತ್ರ ಪಡೆಯಲು ಜಸ್ಟ್ ಹೀಗೆ ಮಾಡಿ

11/09/2025 7:58 AM

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

11/09/2025 7:50 AM

ವರ್ಗಾವಣೆ ನಿರೀಕ್ಷೆಯಲ್ಲಿರುವ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : ಇಂದು,ನಾಳೆ ಕೌನ್ಸೆಲಿಂಗ್

11/09/2025 7:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.