ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾದಂತ ಗ್ಲುಕೋಸ್ ಬಾಟಲಿಯಲ್ಲಿ ಕೊಳೆತ ನಾರಿನಾಂಶ ಪತ್ತೆಯಾಗಿದೆಯಂತೆ. ಅಲ್ಲದೇ ಬಾಟಲಿಯ ಮೇಲೆ ಫಂಗಸ್ ಬೆಳೆದಿರೋದು ಪತ್ತೆಯಾಗಿದೆ. ಈ ಕಾರಣದಿಂದ ಒಂದು ಫಾರ್ಮಸಿ ಕಂಪನಿಯಿಂದ ಸರಬರಾಜು ಮಾಡಲಾದಂತ ಗ್ಲುಕೋಸ್ ಬಾಟಲಿಯನ್ನು ಸರಬರಾಜು ಮಾಡದಂತೆ ಆರೋಗ್ಯ ಇಲಾಖೆಯ ಸರ್ಕಾರಿ ಆಸ್ಪತ್ರೆಗಳಿಗೆ ಸೂಚಿಸಿದೆ.
ಈ ಸಂಬಂಧ ಕೆ ಎಸ್ ಎಂ ಎಸ್ ಸಿ ಎಲ್ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಸಿದ್ದು, M/s Paschim Banga Pharmaceuticals ಸಂಸ್ಥೆಯು ತಯಾರಿಸಿ ಸರಬರಾಜು ಮಾಡಿರುವ 26.29 Ringer Lactate Infusion FFS As per TP Lx500ml ನ ಬಗ್ಗೆ ದೂರು ಬಂದಿರುವುದರಿಂದ ಈ ಪಕ್ರದೊಂದಿಗೆ ಲಗತ್ತಿಸಿರುವ ಎಲ್ಲಾ ಬ್ಯಾಚ್ ಗಳನ್ನು ekushadi ತಂತ್ರಾಂಶದಲ್ಲಿ ಫ್ರೀಜ್ ಮಾಡಲಾಗಿರುತ್ತದೆ, ತಮ್ಮಲ್ಲಿ ಲಭ್ಯವಿರುವ ಸದರಿ ಸಂಸ್ಥೆಯು ಸರಾಟರಜು ಮಾಡಿರುವ Ringe Lactate Infusion ಔಷದವನ್ನು ಬಳಕೆ ಮಾಡದಂತೆ ಸೂಚಿಸಿದ್ದಾರೆ.
ಎಲ್ಲಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮತ್ತು ಎಲ್ಲಾ ಆರೋಗ, ಸಂಸೆಗಳ ಪ್ರದ್ಯಾಧಿಕಾರಿಗಳಿಗೆ ಈಗಾಗಲೆ ಸರಬರಾಜಾಗಿರುವ ಬ್ಯಾಚ್ ಸಂಖ್ಯೆಗಳ 26.29 Ringer Lactate Influsion FFS As per IP Ix500ml ಉಪಯೋಗವನ್ನು ಈ ಕೂಡಲೇ ನಿಲ್ಲಿಸಬೇಕೆಂದು ಸೂಚಿಸುವುದು, ಸದರಿ ದಾಸ್ತಾನನ್ನು ಪ್ರತ್ಯೇಕವಾಗಿ ರಕ್ಷಿಸಿಡುವುದು ಹಾಗು ಜಿಲ್ಲಾ ಔಷದ ಉಗ್ರಾಣ ಗಳಿಗೆ ಹಿಂತಿರುಗಿಸಲು ಸೂಚಿಸಿದ್ದಾರೆ.
ಚಳಿಗಾಲದಲ್ಲಿ ‘ನೆಲ್ಲಿಕಾಯಿ’ಯನ್ನು ಹೆಚ್ಚಾಗಿ ಸೇವಿಸಿ, ಈ ಪ್ರಯೋಜನ ಪಡೆಯಿರಿ | Amla Eating Benefits