ಬೆಂಗಳೂರು : ಪ್ರಸ್ತುತ ನಡೆಯುತ್ತಿರುವ ಕೆ.ಪಿ.ಎಸ್ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ದ್ವಿಭಾಷಾ ಮಾಧ್ಯಮ ತರಗತಿಗಳ ಜೊತೆಗೆ ಹೆಚ್ಚುವರಿಯಾಗಿ ಆಂಗ್ಲ ಮಾಧ್ಯಮದ ವಿಭಾಗಗಳನ್ನು ಪ್ರಾರಂಭಿಸುವ ಬಗ್ಗೆ ರಾಜ್ಯ ಶಿಕ್ಷಣ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ.
ವಿಷಯಾನ್ವಯವಾಗಿ ಉಲ್ಲೇಖ-1ರನ್ವಯ ಸರ್ಕಾರಿ ಶಾಲೆಗಳ ಬಲವರ್ಧನೆ ಸಂಬಂಧ ಪ್ರಸ್ತುತ ನಡೆಯುತ್ತಿರುವ 286 ಕೆ.ಪಿ.ಎಸ್ ಶಾಲೆಗಳ ಪೈಕಿ ಮಕ್ಕಳ ದಾಖಲಾತಿ ಹೆಚ್ಚಿರುವ ಕೆಲವು ಆಯ್ದ ಶಾಲೆಗಳಲ್ಲಿ 42 ಪೂರ್ವ ಪ್ರಾಥಮಿಕ (ಎಲ್.ಕೆ.ಜಿ) ಮತ್ತು 51 ಒಂದನೇ ತರಗತಿ ಶಾಲೆಗಳಲ್ಲಿ ಹಾಲಿ ನಡೆಯುತ್ತಿರುವ ಮಾಧ್ಯಮದಲ್ಲಿ ಹೆಚ್ಚುವರಿಯಾಗಿ ಅಂಗ್ಲ ಮಾಧ್ಯಮದ ವಿಭಾಗಗಳನ್ನು ಪ್ರಾರಂಭಿಸುವ ಕುರಿತು ಸರ್ಕಾರದ ಅನುಮೋದನೆ ಕೋರಲಾಗಿರುತ್ತದೆ.
ಉಲ್ಲೇಖ-2ರನ್ವಯ ಸರ್ಕಾರವು ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಒಟ್ಟು 286 ಕರ್ನಾಟಕ ಪಬ್ಲಿಕ್ ಶಾಲೆಗಳ ಪೈಕಿ ಈ ಆದೇಶದ ಅನುಬಂಧ-1ರಲ್ಲಿನ 42 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಹೆಚ್ಚುವರಿಯಾಗಿ ಎಲ್.ಕೆ.ಜಿ ತರಗತಿಗಳನ್ನು ಪ್ರಾರಂಭಿಸಲು ಮತ್ತು ಅನುಬಂಧ. 2ರಲ್ಲಿನ 51 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ 1ನೇ ತರಗತಿಯ ಅಂಗ್ಲ ಮಾಧ್ಯಮದಲ್ಲಿ ಹೆಚ್ಚುವರಿ ವಿಭಾಗವನ್ನು 2024-25ನೇ ಸಾಲಿನಿಂದ ಪ್ರಾರಂಭಿಸಲು ಕೆಳಕಂಡ ಷರತ್ನುಗಳಿಗೊಳಪಟ್ಟು ಸರ್ಕಾರವು ಅನುಮೋದನೆ ನೀಡಲಾಗಿರುತ್ತದೆ
ಷರತ್ತುಗಳು
1. ಇದರಿಂದ ಉಂಟಾಗುವ ಹೆಚ್ಚುವರಿ ವೆಚ್ಚಗಳನ್ನು 2024-25ನೇ ಸಾಲಿನ ಆಯವ್ಯಯದಲ್ಲಿ ಕೆ.ಪಿ.ಎಸ್. ಶಾಲೆಗಳಿಗೆ ನಿಗಧಿಪಡಿಸಲಾದ ಅನುದಾನದಲ್ಲಿ ಭರಿಸುವುದು.
2. ಪ್ರಸ್ತಾಪಿತ 51 ಕೆ.ಪಿ.ಎಸ್‌ಗಳಲ್ಲಿ 1ನೇ ತರಗತಿಯ ಹೆಚ್ಚುವರಿ ವಿಭಾಗವನ್ನು ಪ್ರಾರಂಭಿಸಲು ಅವಶ್ಯವಿರುವ ಶಿಕ್ಷಕರನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಮರು ನಿಯೋಜನೆ ಮೂಲಕ ಬಳಸಿಕೊಳ್ಳುವುದಾಗಿ ಸರ್ಕಾರವು ಆದೇಶಿಸಿರುತ್ತದೆ.
ಸದರಿ ಆದೇಶದಲ್ಲಿನ ಅಂಶಗಳನ್ನಯ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕೂಡಲೇ ನಿಯಮಾನುಸಾರ ಅಗತ್ಯ ಕ್ರಮಗಳನ್ನು ವಹಿಸುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಈ ಮೂಲಕ ತಿಳಿಸಲಾಗಿದೆ. ಸರ್ಕಾದ ಆದೇಶ ಪ್ರತಿ ಮತ್ತು ಅನುಬಂಧ-1 ಮತ್ತು 2ನ್ನು ಇದರೊಂದಿಗೆ ಲಗತ್ತಿಸಿದೆ.