ಬೆಂಗಳೂರು: ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿದ್ಯಾರ್ಥಿಗಳ ಜೊತೆಗಿನ ಕಾರ್ಯಕ್ರಮವೊಂದರಲ್ಲಿ, ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂಬುದಾಗಿ ಹೇಳಿದ್ದರು. ಅಂತಹ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ ಕಾರ್ಯಕ್ರಮದಲ್ಲೇ ಸೂಚಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು. ಈಗ ನಾನು ಹಾಗೆ ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಸೂಚಿಸಿಲ್ಲ ಎಂಬುದಾಗಿ ಸಚಿವ ಮಧು ಬಂಗಾರಪ್ಪ ಉಲ್ಟಾ ಹೊಡೆದಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ವಿದ್ಯಾರ್ಥಿ ಮೇಲೆ ಕ್ರಮಕ್ಕೆಸೂಚನೆ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ನಾನು ಅಲ್ಲಿ ಕ್ರಮದ ಬಗ್ಗೆ ಎಲ್ಲು ಮಾತನಾಡಿಲ್ಲ. ಮಕ್ಕಳ ಮೇಲೆ ಪ್ರಾಂಶುಪಾಲರು ಹತೋಟಿ ಇರಬೇಕು. ಅದಕ್ಕೆ ಪ್ರಾಂಶುಪಾಲರಿಗೆ ನಾನು ಹೇಳಿದ್ದು. ಮಕ್ಕಳನ್ನ ಹತೋಟಿಯಲ್ಲಿಡಬೇಕು. 50 ಸಾವಿರ ಮಕ್ಕಳು ಲೈವ್ ನೋಡ್ತಿದ್ದಾರೆ. ಅವರ ಭವಿಷ್ಯಕ್ಕೆಯೋಜನೆ ರೂಪಿಸ್ತಿದ್ದೇವೆ. ಕ್ಲಾಸ್ ನಲ್ಲಿ ಡಿಸಿಪ್ಲೀನ್ ಇರಬೇಕಲ್ಲ. ನಾನು ಒಬ್ಬ ತಂದೆಯಾಗಿ ಅದನ್ನ ಹೇಳ್ತೇನೆ. ನೀವು ಟ್ರೋಲ್‌ಮಾಡಿದ್ರೆ ನನಗೇನು. ಅದಕ್ಕೆಲ್ಲ ನಾನುತಲೆ ಕೆಡಿಸಿಕೊಳ್ಳಲ್ಲ ಎಂದರು.
ನಾಗೇಶ್ ನನ್ನನ್ನ ದಡ್ಡ ಅಂದ್ರು. ಈ ದಡ್ಡನನ್ನ ಜನ ಗೆಲ್ಲಿಸಿದ್ರು, ಬುದ್ಧಿವಂತರನ್ನ ಸೋಲಿಸಿದ್ರು. ನಿಮ್ಮ ಮಕ್ಕಳು ಈ ರೀತಿ ಮಾಡೋದು ಸರಿಯೇ. ನನ್ನ ಸ್ವಂತ ಮಕ್ಕಳಂಗೆ ಶಾಲಾ ಮಕ್ಕಳನ್ಮನೋಡ್ತೇನೆ. ಸಿಇಟಿ ಕಾರ್ಯಕ್ರಮ ಎಂತ ದೊಡ್ಡದು. ಅಂತದ್ದನ್ನ ನೀವು ತೋರಿಸಿ. ಟ್ರೋಲ್ ಮಾಡಿ ನನ್ನನ್ನ ಬಗ್ಗಿಸೋಕೆ ಸಾಧ್ಯವಿಲ್ಲ. ನಾನು ಅಂತದ್ದಕ್ಕೆಲ್ಲ ಬಗ್ಗುವವನೂ ನಾನಲ್ಲ ಎಂಬುದಾಗಿ ಸಚಿವ ಮಧು ಬಂಗಾರಪ್ಪ ಮಾಧ್ಯಮಗಳ ವಿರುದ್ಧ ಹರಿ ಹಾಯ್ದರು.
ವಿದ್ಯುತ್ ಚಾಲಿತ ಸಂಚಾರ ವ್ಯವಸ್ಥೆ; ಕಾಪ್ 29 ಶೃಂಗಸಭೆಯಲ್ಲಿ ಭರವಸೆ ಮೂಡಿಸಿದ ಭಾರತ