ಮಂಗಳೂರು : ಹಿರಿಯ ಪತ್ರಕರ್ತ, ಬರಹಗಾರ, ಚಿಂತಕ, ದಲಿತ ವಾಯ್ಸ್ ಪತ್ರಿಕೆಯ ಸ್ಥಾಪಕ ಸಂಪಾದಕ ವಿ.ಟಿ.ರಾಜಶೇಖರ್ ವೈ (82) ಅವರು ಇಂದು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ರಾಜಶೇಖರ್ ಅವರು ಮಂಗಳೂರಿನ ಶಿವಭಾಗ್ ನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದರು. ದಲಿತರ ಹಕ್ಕುಗಳಿಗಾಗಿ ವಾದಿಸಲು 1981 ರಲ್ಲಿ ದಲಿತ್ ವಾಯ್ಸ್ ಅನ್ನು ಪ್ರಾರಂಭಿಸಿದರು.ಇದಕ್ಕೂ ಮೊದಲು ದಿ ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದರು. ನಿಯತಕಾಲಿಕದಲ್ಲಿ ಅವರ ಬರಹಗಳು ದೇಶಾದ್ಯಂತ ವ್ಯಾಪಕ ಚರ್ಚೆಗಳನ್ನು ಹುಟ್ಟುಹಾಕಿದವು.








