ಬೆಂಗಳೂರು: ನಗರದ ರಾಜ್ ಕುಮಾರ್ ರಸ್ತೆಯಲ್ಲಿರುವಂತ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ಒಂದರಲ್ಲಿ ಅಗ್ನಿ ಅವಘಟ ಉಂಟಾಗಿದೆ. ಈ ಬೆಂಕಿ ಅವಘಡದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಹೊತ್ತಿ ಉರಿಯುತ್ತಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ಓರ್ವ ಯುವತಿ ಸಜೀವ ದಹನವಾಗಿರೋದಾಗಿ ಹೇಳಲಾಗುತ್ತಿದೆ.
ಬೆಂಗಳೂರಿನ ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿರುವಂತ ಎಲೆಕ್ಟ್ರಿಕ್ ಸ್ಕೂಟರ್ ಶೋ ರೂಂನಲ್ಲಿ ಅಗ್ನಿ ಅವಘಡ ಉಂಟಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.
ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾವೆ. ಬೆಂಕಿ ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿದ್ದಾರೆ. ಈ ಬೆಂಕಿಯಲ್ಲಿ ಓರ್ವ ಯುವತಿ ಸಜೀವ ದಹನವಾಗಿರೋದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಜನತೆಗೆ ಮತ್ತೊಂದು ಗುಡ್ ನ್ಯೂಸ್: ಇನ್ಮುಂದೆ ರಾಜ್ಯ ಸರ್ಕಾರದಿಂದ ಕ್ಲಿಸ್ಟಕರ ಶಸ್ತ್ರಚಿಕಿತ್ಸೆ ಉಚಿತ
ಕಾಂಗ್ರೆಸ್ ನಲ್ಲೂ ‘ಕಿಂಡರ್ ಗಾರ್ಡನ್’ ಪದ್ಧತಿ ಇದೆ : ಸಚಿವ ಸ್ಥಾನದ ಕುರಿತು ಶಾಸಕ ನರೇಂದ್ರ ಸ್ವಾಮಿ ಅಸಮಾಧಾನ