ಶಿವಮೊಗ್ಗ: ಸಾಗರದ ಡಿಎಫ್ಓ ಮೋಹನ್ ವಿನಾಕಾರಣ ನಮ್ಮ ಹೆಸರನ್ನು ಹೇಳುತ್ತಿದ್ದಾರೆ. ಈ ಮೂಲಕ ಒಬ್ಬರನ್ನೊಬ್ಬರನ್ನು ಎತ್ತಿ ಕಟ್ಟುವಂತ ಕೆಲಸ ಮಾಡುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು. ಒಂದು ವಾರದ ಒಳಗಾಗಿ ಸ್ಪಷ್ಟ ಪಡಿಸಿ, ಬಹಿರಂಗವಾಗಿ ಕ್ಷಮೆ ಕೇಳದೇ ಹೋದರೇ, ಎಸಿ, ಡಿಸಿ ಕಚೇರಿಯ ಮುಂದೆ ಪಕ್ಷಾತೀತವಾಗಿ ಪ್ರತಿಭಟನೆ ಮಾಡಲಾಗುತ್ತದೆ. ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು ಅಂತ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೂಡು ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಅಧಿಕಾರಿಗಳನ್ನು ಬಿಟ್ಟು ಕಿರುಕುಳ, ಅನೇಕ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಆದರೇ ಬಿಜೆಪಿಯವರು ಇದಕ್ಕೆಲ್ಲ ಬಗ್ಗಲಿಲ್ಲ. ಈಗ ಹೊಸ ರೀತಿಯಲ್ಲಿ ಕಿರುಕುಳ ಶುರು ಮಾಡಿದ್ದಾರೆ. ಆನಂದಪುರ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಸಾಗುವಾನಿ ಮರಗಳನ್ನು ಕಡಿದುಕೊಂಡು ಹೋಗಿದ್ದಾರೆ. ಗಾಡಿಯನ್ನು ಸೀಜ್ ಮಾಡಲಾಗಿದೆ. ಊರಿನ ಗ್ರಾಮಸ್ಥರು, ಕಾಂಗ್ರೆಸ್ ಮುಖಂಡರು ಆರ್ ಎಫ್ ಓ, ಡಿಎಫ್ಓ ಬಳಿಯಲ್ಲಿ ಹೋಗಿ ಮಾತುಕತೆ ನಡೆಸಿದ್ದಾರೆ. ಶಾಸಕರಿಂದಲೂ ಕರೆ ಮಾಡಿಸಿ ಈ ಬಗ್ಗೆ ಹೇಳಿದ್ದಾರೆ ಎಂದರು.
ನವೆಂಬರ್ 7ನೇ ತಾರೀಕಿನಂದು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 8ನೇ ತಾರೀಕಿನಂದು ಎಫ್ಐಆರ್ ಮಾಡಿದ್ದಾರೆ. ಎಂಟು ದಿನಗಳ ಕಾಲ ಇವತ್ತು ಬಿಡ್ತೀನಿ, ಇವತ್ತು ಬಿಡ್ತೀನಿ ಅಂತ ಹೇಳಿ ಮೊನ್ನೆ ಬಿಟ್ಟು ಕಳಿಸಿದ್ದಾರೆ. ಆದರೇ ಮೊನ್ನೆ ಬುಧವಾರ ಹೋಗಿ ಗಾಡಿಯನ್ನು ಯಾವಾಗ ಬಿಡ್ತೀರಿ ಹೇಳಿ ಅಂದಾಗ ಡಿಎಫ್ಓ ಮೋಹನ್ ಎನ್ನುವಂತ ಐಎಫ್ಎಸ್ ಅಧಿಕಾರಿ ರತ್ನಾಕರ ಹೊನಗೂಡು ಮತ್ತು ಬಿಜೆಪಿಯವರು ಬಹಳ ಒತ್ತಡ ಹಾಕುತ್ತಾರೆ. ನೀವು ಗಾಡಿ ಬಿಟ್ಟರೇ ಪ್ರತಿಭಟನೆ ಮಾಡುವುದಾಗಿ ಹತ್ತರಿಂದ ಹನ್ನೆಡರು ಜನರಿದ್ದಂತವರಿಗೆ ತಿಳಿಸಿದ್ದಾರೆ ಎಂದು ಹೇಳಿದರು.
ಡಿಎಫ್ಓ ಬಳಿಗೆ ತೆರಳಿದ್ದಂತ ಜನರು ಅಲ್ಲೇ ಅವರು ಆತರದ ವ್ಯಕ್ತಿಯಲ್ಲ. ನಮಗೆ ಗೊತ್ತಿರುವವರು ಎಂದಿದ್ದಾರೆ. ಹಾಗಾದ್ರೆ ಒಬ್ಬ ಐಎಎಫ್ ಅಧಿಕಾರಿ ಹೇಳಿದ್ದೇಕೆ? ಇದನ್ನು ಹೇಳಿಸಿದ್ದು ಯಾರು ಎನ್ನುವುದನ್ನು ಬಹಿರಂಗ ಪಡಿಸಬೇಕು. ಯಾರೋ ಒಬ್ಬ ಲೀಡರ್ ಹೆಸರು ಹೇಳಿ, ಅಶಾಂತಿ ಸೃಷ್ಠಿಸುವಂತ ಕೆಲಸ ಮಾಡಬಾರದು. ಐಎಫ್ಎಸ್ ಅಧಿಕಾರಿ ಅಂದ್ರೆ ಅವರಿಗೇ ಆದಂತ ಘಟನೆ ಗೌರವವಿರುತ್ತದೆ ಎಂಬುದಾಗಿ ಕಿಡಿಕಾರಿದರು.
ನನಗೂ ಅವರಿಗೂ ಪರಿಚಯನೇ ಇಲ್ಲ. ಈಗ ಯಾವುದೋ ಒಂದು ಮೂರು ತಿಂಗಳ ಹಿಂದೆ ಬೆಳ್ಳಂದೂರಲ್ಲಿ ಅರಣ್ಯ ಇಲಾಖೆಯವರು ನೋಟಿಸ್ ಕೊಟ್ಟಿದ್ದಾರೆ ಎಂದಾಗ ಮಂಡಗಳಲೆ ಹುಚ್ಚಪ್ಪ ಮತ್ತು ನಾವು ಕರೆದುಕೊಂಡು ಹೋಗಿ ಅವರ ಹತ್ತಿರ ಅದರ ಬಗ್ಗೆ ವಿಷಯ ಚರ್ಚೆ ಮಾಡಿ ಬಂದಿದ್ದೆವು. ಆಮೇಲೆ ಇವತ್ತಿನವರೆಗೂ ಅವರ ಆಫೀಸಿಗೆ ಹೋಗಿಲ್ಲ. ಅವರ ಪೋನ್ ನಂಬರ್ ಕೂಡ ನನ್ನ ಹತ್ತಿರ ಇಲ್ಲ ಎಂಬುದಾಗಿ ತಿಳಿಸಿದರು.
ಏನೋ ಒಂದಷ್ಟು ಬಡವರಿಗೆ ಸಹಕಾರ ಮಾಡಿ ಅಂತ ಹೇಳಿದ್ದೇನೆ. ಅದರ ಹೊರತಾಗಿ ತೊಂದರೆ ಕೊಡಿ ಅಂತ ಹೇಳಿಲ್ಲ. ನನ್ನ 20 ವರ್ಷದ ರಾಜಕೀಯ ಜೀನವದಲ್ಲಿ ಯಾವತ್ತೂ ಆ ಕೆಲಸ ಮಾಡಿಲ್ಲ. ಡಿಎಫ್ಓ ಅವರು ಯಾಕೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟ ಪಡಿಸಬೇಕು. ಒಂದು ವಾರ ಸಮಯ ನೀಡಲಾಗುತ್ತದೆ. ಅವರು ಯಾಕೆ ಈ ರೀತಿ ಹೇಳಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸದೇ ಹೋದರೇ ಎಸಿ, ಡಿಸಿ ಕಚೇರಿಯ ಬಳಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಐಎಸ್ಎಫ್ ಮೇಲಧಿಕಾರಿಗಳು ಯಾರು ಬರುತ್ತಾರೋ ಅವರಿಗೆ ಇವರ ವಿರುದ್ಧ ದೂರು ನೀಡಲಾಗುತ್ತದೆ. ಈ ಸಂಬಂಧ ಪತ್ರ ಬರೆಯಲಾಗುತ್ತದೆ ಎಂದರು.
ಕೇವಲ ನನ್ನೊಬ್ಬನ ಹೆಸರು ಮಾತ್ರ ಹೇಳುತ್ತಿಲ್ಲ. ಇನ್ನೂ ಅನೇಕರ ಹೆಸರು ಹೇಳುತ್ತಿದ್ದಾರೆ. ಈ ರೀತಿಯ ಹೇಳಿಕೆಯ ಮೂಲಕ ವಿರೋಧ ಪಕ್ಷದವರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತದೆ. ಇದಕ್ಕೆ ನಾವು ಮಣಿಯುವುದಿಲ್ಲ ಎಂದು ಗುಡುಗಿದರು.
ಈ ವೇಳೆ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ, ನಟರಾಜ್ ಗೇರುಬಿಸ್, ರವಿ ಬಸರಾಣಿ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಧರ್ಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ