ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪಾಕಿಸ್ತಾನದ ಗುಜ್ರಾನ್ವಾಲಾದಲ್ಲಿ ಭಿಕ್ಷುಕ ಕುಟುಂಬವೊಂದು ಭಿಕ್ಷಾಟನೆಯಿಂದ ಬದುಕುವುದಾಗಿ ಹೇಳಿಕೊಂಡು ಸುಮಾರು 20,000 ಜನರಿಗೆ ಅತಿರಂಜಿತ ಔತಣಕೂಟವನ್ನ ಆಯೋಜಿಸುವ ಮೂಲಕ ಅಚ್ಚರಿಯನ್ನ ಹುಟ್ಟುಹಾಕಿದೆ. ಕುಟುಂಬದ ಅಜ್ಜಿಯ ಸಾವಿನ 40ನೇ ದಿನದ ಅಂಗವಾಗಿ ಆಯೋಜಿಸಲಾದ ಈ ಅದ್ದೂರಿ ಕಾರ್ಯಕ್ರಮಕ್ಕೆ 1.25 ಕೋಟಿ ಪಾಕಿಸ್ತಾನಿ ರೂಪಾಯಿ (ಸುಮಾರು 38 ಲಕ್ಷ ರೂ.) ವೆಚ್ಚವಾಗಿದೆ. ಕುಟುಂಬವು ಭವ್ಯವಾದ ಅತಿಥ್ಯ ಒದಗಿಸಿದ್ದಲ್ಲದೆ, ಅತಿಥಿಗಳನ್ನ ರಹ್ವಾಲಿ ರೈಲ್ವೆ ನಿಲ್ದಾಣದ ಬಳಿಯ ಸ್ಥಳಕ್ಕೆ ಸಾಗಿಸಲು 2,000 ವಾಹನಗಳನ್ನ ವ್ಯವಸ್ಥೆ ಮಾಡಿತ್ತು. ಸಧ್ಯ ಇದು ಭಿಕ್ಷಾಟನೆ ಅವಲಂಬಿಸಿರುವವರ ನಿಜವಾದ ಆರ್ಥಿಕ ಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನ ಹುಟ್ಟುಹಾಕಿದೆ.
ಸಿರಿ ಪಾಯೆ, ಮುರಬ್ಬಾ, ಮಟನ್, ನಾನ್ ಮಾತರ್ ಗಂಜ್ (ಸಿಹಿ ಅನ್ನ) ಮತ್ತು ವಿವಿಧ ಸಿಹಿತಿಂಡಿಗಳಂತಹ ಸಾಂಪ್ರದಾಯಿಕ ಭಕ್ಷ್ಯಗಳ ವ್ಯಾಪಕ ಆಯ್ಕೆಯನ್ನು ಒಳಗೊಂಡ ಈ ಔತಣಕೂಟವು ನೋಡಬೇಕಾದ ದೃಶ್ಯವಾಗಿತ್ತು. ಬೃಹತ್ ಜನಸಮೂಹವನ್ನ ಪೂರೈಸುವ ಸಲುವಾಗಿ, ಸುಮಾರು 250 ಮೇಕೆಗಳನ್ನ ಕಡಿಯಲಾಗಿದೆ. ಈ ಭವ್ಯ ಕಾರ್ಯಕ್ರಮದ ವೀಡಿಯೊಗಳು ಹೊರಬಂದಿದ್ದು, ತ್ವರಿತವಾಗಿ ವೈರಲ್ ಆಗಿವೆ.
ಭಿಕ್ಷುಕನ ಭರ್ಜರಿ ಔತಣಕೂಟಕ್ಕೆ ನೆಟ್ಟಿಗರ ಪ್ರತಿಕ್ರಿಯೆ.!
ಕೆಲವರು ಕುಟುಂಬದ ಔದಾರ್ಯವನ್ನು ಶ್ಲಾಘಿಸಿದರೆ, ಇನ್ನೂ ಅನೇಕರು ಭಿಕ್ಷಾಟನೆಯಿಂದ ಬದುಕುತ್ತಿರುವ ಕುಟುಂಬವು ಇಂತಹ ಅದ್ದೂರಿ ಸಮಾರಂಭ ಆಯೋಜಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು, ಇನ್ನೀದು ಅವರ ಸಂಪತ್ತಿನ ಮೂಲದ ಬಗ್ಗೆ ವ್ಯಾಪಕ ಊಹಾಪೋಹಗಳಿಗೆ ಕಾರಣವಾಯಿದೆ.
Ye bhikari to mjh se zyada ameer ha
— Zara 🍓 (@Ghumnaam72) November 17, 2024
Meko begger community join karni hi paregi ab 😭
— Asad khan (@Rio_k50) November 17, 2024
Wahh kia baat h yaqeen nae aa rha
— Muhammad Usman Nisar (@m_usman_rao) November 17, 2024
BREAKING : ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಕ್ರಿಕೇಟರ್ ಸೂರ್ಯ ಕುಮಾರ ಯಾದವ್ ಭೇಟಿ, ಪೂಜೆ ಸಲ್ಲಿಕೆ
ರಾಜ್ಯದಲ್ಲಿ ನವೆಂಬರ್ ಅಂತ್ಯದಿಂದ ಡಿಸೆಂಬರ್ ತಿಂಗಳವರೆಗೆ ಅಧಿಕ ಚಳಿ : ಹವಾಮಾನ ಇಲಾಖೆ ಮಾಹಿತಿ