ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದೆ. ಅದೇ ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿನ ಸರ್ಕಾರಿ ನೌಕರನ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಇರುವ ಉಳಿಕೆ ಮೊತ್ತದ ಗರಿಷ್ಠ 90% ಅನ್ನು ಮಂಜೂರಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಶೇ.90ರಷ್ಟು GPF ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಅದರಲ್ಲಿ ಭವಿಷ್ಯ ನಿಧಿಗಳ ಅಧಿನಿಯಮ, 1925 (1925 ರ ಕೇಂದ್ರ ಅಧಿನಿಯಮ XIX) ರ 8 ನೇ ಪ್ರಕರಣವನ್ನು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ 8 ರೊಂದಿಗೆ ಓದಿಕೊಂಡು ಅದೇ ಅಧಿನಿಯಮದ (3)ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ 2016 ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಈ ಮುಂದಿನ ಕರಡನ್ನು ರಚಿಸಲು ಉದ್ದೇಶಿಸಿದ್ದು, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ (ಎ) ಖಂಡದ ಮೂಲಕ ಅಗತ್ಯ ಪಡಿಸಿರುವಂತೆ ಅಧಿಸೂಚನೆ ಸಂಖ್ಯೆ: ಆಇ 03 ಮುಭನಿ 2023, ದಿನಾಂಕ:31.07.2024 ಅನ್ನು ದಿನಾಂಕ:7 ನೇ ಆಗಸ್ಟ್, 2024ರ ಅಧಿಕೃತ ರಾಜ್ಯ ಪತ್ರದ ಭಾಗ-IV-A ರಲ್ಲಿ ಪ್ರಕಟಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಇದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಲಾಗಿದ್ದುದರಿಂದ;
ಮತ್ತು ಸದರಿ ರಾಜ್ಯ ಪತ್ರವನ್ನು ದಿನಾಂಕ: 7 ನೇ ಆಗಸ್ಟ್ 2024 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ ಯಾವುದೇ ಆಕ್ಷೇಪಣೆಗಳು ಮತ್ತು ಸ್ವೀಕೃತವಾಗಿಲ್ಲದಿರುವುದರಿಂದ ಸಲಹೆಗಳು ಹಾಗೂ ರಾಜ್ಯ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ, 1978 (1990 ರ ಕರ್ನಾಟಕ ಅಧಿನಿಯಮ 14) ರ (3)ನೇ ಪ್ರಕರಣದ (1)ನೇ ಉಪ-ಪ್ರಕರಣವನ್ನು ಅದೇ ಅಧಿನಿಯಮದ ಪ್ರಕರಣ 8 ರೊಂದಿಗೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಭವಿಷ್ಯ ನಿಧಿಗಳ ಅಧಿನಿಯಮ, 1925 (1925 ರ ಕೇಂದ್ರ ಅಧಿನಿಯಮ XIX)ದ 8ನೇ ಪ್ರಕರಣವನ್ನು ಓದಿಕೊಂಡು, ಕರ್ನಾಟಕ ಸರ್ಕಾರವು ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016 ನ್ನು ಮತ್ತಷ್ಟು ತಿದ್ದುಪಡಿ ಮಾಡಿ ಈ ಮೂಲಕ ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ:-
ನಿಯಮಗಳು
1. ಹೆಸರು ಮತ್ತು ಪ್ರಾರಂಭ: (1) ಈ ನಿಯಮಗಳನ್ನು ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ (ತಿದ್ದುಪಡಿ) ನಿಯಮಗಳು, 2024.
(2) ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
2. ಅನುಸೂಚಿಯ ಪ್ರತಿಸ್ಥಾಪನೆ:- ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016 ರ ಅನುಸೂಚಿಯಲ್ಲಿ ಈ ಕೆಳಕಂಡಂತೆ ಸೇರಿಸತಕ್ಕದ್ದು, ಅಂದರೆ:-
ಅನುಸೂಚಿ
(ನಿಯಮ 16 ಮತ್ತು 17 ಕ್ಕೆ)
ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016 ರ ಅಡಿಯಲ್ಲಿ ತಾತ್ಕಾಲಿಕ ಮುಂಗಡಗಳನ್ನು ಮತ್ತು ಭಾಗಶಃ ಅಂತಿಮ ಹಿಂಪಡೆಯುವಿಕೆಗಳನ್ನು ಮಂಜೂರು ಮಾಡಲು ಸಕ್ಷಮವಾಗಿರುವ ಪ್ರಾಧಿಕಾರಗಳು.
I. ತಾತ್ಕಾಲಿಕ ಮುಂಗಡಗಳು: ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016 ರ ನಿಯಮ-16 ಮತ್ತು ನಿಯಮ-17ರ ಅಡಿಯಲ್ಲಿ ದಿನಾಂಕ:21.10.1994 ರ ಸರ್ಕಾರಿ ಆದೇಶ ಸಂಖ್ಯೆ:ಎಫ್‌ಡಿ 48 ಮಕಮು 1994 ರಲ್ಲಿ ನಿಗದಿಪಡಿಸಲಾಗಿರುವ Take Home Salary ಯ ಮಿತಿ ಹಾಗೂ ಚಂದಾದಾರರ ಲಭ್ಯವಿರುವ ಸೇವೆಯ ಅವಧಿಯನ್ನು ಗಣನೆಗೆ ತೆಗೆದುಕೊಂಡು ತಾತ್ಕಾಲಿಕ ಮುಂಗಡಗಳನ್ನು ಮಂಜೂರು ಮಾಡುವ ಪ್ರಾಧಿಕಾರಗಳು ಈ ಕೆಳಗಿನಂತಿರುತ್ತವೆ.
ಇಲಾಖಾ ಮುಖ್ಯಸ್ಥರ ಕಚೇರಿಯಲ್ಲಿ ಜಂಟಿ ನಿರ್ದೇಶಕರು ಅಥವಾ ನಿಯಂತ್ರಣಾಧಿಕಾರಿಗಳು
ಮುಖ್ಯಸ್ಥರ ಇಲಾಖಾ ಮುಖ್ಯಸ್ಥರ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಜಂಟಿ | ನೌಕರರಿಗೆ ಸದರಿ ನಿಯಮಗಳ ನಿಯಮ 16 ಮತ್ತು 17ರ ಅಡಿಯಲ್ಲಿ ಅಥವಾ ತಾತ್ಕಾಲಿಕ ಮುಂಗಡಗಳನ್ನು ಅದರಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಗಳಿಗೆ ಮಂಜೂರು ಮಾಡುವ ದಿನಾಂಕದಂದು ಸರ್ಕಾರಿ ನೌಕರನ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಇರುವ ಉಳಿಕ ಮೊತ್ತದ ಗರಿಷ್ಠ 80% (ಎಂಭತ್ತು ಪ್ರತಿಶತ) ನ್ನು ಮಂಜೂರು ಮಾಡುವುದು.
ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು
ಇಲಾಖಾ ಮುಖ್ಯಸ್ಥರ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನು ಹೊರತುಪಡಿಸಿ ಇತರೆ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸದರಿ ನಿಯಮಗಳ ನಿಯಮ 16 ಮತ್ತು 17 ರಡಿಯಲ್ಲಿ ತಾತ್ಕಾಲಿಕ ಮುಂಗಡಗಳನ್ನು ಅದರಲ್ಲಿ ನಿರ್ಧಿಷ್ಟಪಡಿಸಿದ ಉದ್ದೇಶಗಳಿಗೆ ಮಂಜೂರು ಮಾಡುವ ದಿನಾಂಕದಂದು ಸರ್ಕಾರಿ ನೌಕರನ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಇರುವ ಉಳಿಕೆ ಮೊತ್ತದ ಗರಿಷ್ಠ 80% (ಎಂಭತ್ತು ಪ್ರತಿಶತ) ನ್ನು ಮಂಜೂರು ಮಾಡುವುದು.
II. ಹಿಂಪಡೆಯುವಿಕೆಗಳು:- ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016 ರ ನಿಯಮ 26ರ ಜೊತೆಗೆ ಓದಲಾದ ನಿಯಮ-27 ರ ಅಡಿಯಲ್ಲಿ ಭಾಗಶಃ ಅಂತಿಮ ಹಿಂಪಡೆಯುವಿಕೆಗಳನ್ನು ಮಂಜೂರು ಮಾಡುವ ಪ್ರಾಧಿಕಾರಗಳು ಈ ಕೆಳಗಿನಂತಿರುತ್ತವೆ.
ಇಲಾಖಾ ಕಛೇರಿಯಲ್ಲಿ ರ್ವಹಿಸುತ್ತಿರುವ ನಿರ್ದೇಶಕರು ನಿಯಂತ್ರಣ ಅಧಿಕಾರಿಗಳು
ಇಲಾಖಾ ಮುಖ್ಯಸ್ಥರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಹೊರತುಪಡಿಸಿ ಇತರೆ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ, ಸದರಿ ನಿಯಮಗಳ ನಿಯಮ 26 (1)ನೇ ಉಪ ನಿಯಮದ ಅಂಶ(a)ರಲ್ಲಿ ನಿರ್ಧಿಷ್ಟ ಪಡಿಸಿದ ಕಾರಣಕ್ಕಾಗಿ ಅದರೊಂದಿಗೆ ಓದಲಾದ ನಿಯಮ 27ರಡಿಯಲ್ಲಿ ಭಾಗಶಃ ಅಂತಿಮ ಹಿಂತೆಗೆದುಕೊಳ್ಳುವಿಕೆಯನ್ನು ಅದರಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಗಳಿಗೆ ಮಂಜೂರು ಮಾಡುವ ದಿನಾಂಕದಂದು ಸರ್ಕಾರಿ ನೌಕರನ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಇರುವ ಉಳಿಕೆ ಮೊತ್ತದ ಗರಿಷ್ಠ ಶೇ.90% ಅನ್ನು ಮಂಜೂರು ಮಾಡುವುದು.
ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು
ಇಲಾಖಾ ಮುಖ್ಯಸ್ಥರ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ್ನು ಹೊರತುಪಡಿಸಿ ಇತರೆ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ, ಸದರಿ ನಿಯಮಗಳ ನಿಯಮ 26(1)ನೇ ಉಪನಿಯಮದ ಅಂಶ(a)ರಲ್ಲಿ ನಿರ್ದಿಷ್ಟ ಪಡಿಸಿದ ಕಾರಣಕ್ಕಾಗಿ ಅದರೊಂದಿಗೆ ಓದಲಾದ ನಿಯಮ 27ರಡಿಯಲ್ಲಿ ಭಾಗಶಃ ಅಂತಿಮ ಹಿಂತೆಗೆದುಕೊಳ್ಳುವಿಕೆಯನ್ನು ಅದರಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಗಳಿಗೆ ಮಂಜೂರು ಮಾಡುವ ದಿನಾಂಕದಂದು ಸರ್ಕಾರಿ ನೌಕರನ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಇರುವ ಉಳಿಕೆ ಮೊತ್ತದ ಗರಿಷ್ಠ 90% ಅನ್ನು ಮಂಜೂರು ಮಾಡುವುದು ಎಂದಿದ್ದಾರೆ.
BIG NEWS : ಅನರ್ಹರ `BPL’ ಕಾರ್ಡ್ ಗಳು ಮಾತ್ರ ವಾಪಸ್ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಹೆಚ್ಚು ನೀರು ಕುಡಿಯುವುದು ಅಪಾಯಕಾರಿ.! ಮಾರಣಾಂತಿಕವಾಗಬಹುದು: ವೈದ್ಯರು | Drinking Water