ಮಂಗಳೂರು: ಇಲ್ಲಿನ ಉಳ್ಳಾಲ ಸಮೀಪದ ಖಾಸಗಿ ರೆಸಾರ್ಟ್ ಒಂದರಲ್ಲಿನ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಲು ಇಳಿದಿದ್ದಂತ ಮೈಸೂರು ಮೂಲದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ಮುಳುಗಿ ಸಾವನ್ನಪ್ಪಿದ್ದರು. ಈ ಸಂಬಂಧ ರೆಸಾರ್ಟ್ ಮಾಲೀಕ ಸೇರಿದಂತೆ ಇಬ್ಬರನ್ನು ಉಳ್ಳಾರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನ ಉಳ್ಳಾಲ ಸಮೀಪದ ಸಾಯಿರಾಂ ವಾಝ್ಕೋ ರೆಸಾರ್ಟ್ ಗೆ ಮೈಸೂರಿನಿಂದ ಪ್ರವಾಸಕ್ಕೆಂದು ಶನಿವಾರದಂದು ಮೂವರು ಯುವತಿಯರಿ ತೆರಳಿದ್ದರು. ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಮೂವರು ಯುವತಿಯರು ಕೊಠಡಿಯಲ್ಲಿ ಉಳಿದುಕೊಂಡು, ಆ ಬಳಿಕ ಈಜು ಕೊಳದಲ್ಲಿ ಈಜಲು ತೆರಳಿದ್ದರು.
ಈವೇಳೆ ಅವೈಜ್ಞಾನಿಕತೆಯಿಂದ ಕೂಡಿದ್ದಂತ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ಆಳ ತಿಳಿಯದೇ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿದ್ದರು. ಈ ಸಂಬಂಧ ಉಳ್ಳಾಲ ಠಾಣೆಯ ಪೊಲೀಸರು ಮಾಲೀಕ ಮನೋಹರ್ ಹಾಗೂ ಪುತ್ರನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಇನ್ನೂ ಮಂಗಳೂರು ನಗರ ಎಸಿ ಹರ್ಷವರ್ಧನ್ ಅವರು ತಾತ್ಕಾಲಿಕವಾಗಿ ರೆಸಾರ್ಟ್ ಪರವಾನಗಿಯನ್ನು ರದ್ದುಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.
BIG NEWS : ಅನರ್ಹರ `BPL’ ಕಾರ್ಡ್ ಗಳು ಮಾತ್ರ ವಾಪಸ್ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಹೆಚ್ಚು ನೀರು ಕುಡಿಯುವುದು ಅಪಾಯಕಾರಿ.! ಮಾರಣಾಂತಿಕವಾಗಬಹುದು: ವೈದ್ಯರು | Drinking Water