ಹಾವೇರಿ: ಇಲ್ಲಿನ ಎಪಿಎಂಸಿಯೊಂದರ ಗೋದಾಮಿನಲ್ಲಿ ಇರಿಸಿದ್ದಂತ ಹಳೆಯ ಬ್ಯಾಲೆಟ್ ಬಾಕ್ಸ್ ಗಳನ್ನು ಕದ್ದಿದ್ದಂತ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನವೆಂಬರ್.13ರಂದು ಶಿಗ್ಗಾವಿ ಕ್ಷೇತ್ರದ ಯತ್ನಿನಹಳ್ಳಿ ಬಳಿಯ ಕಾಲುವೆಯಲ್ಲಿ ಹಳೆಯ ಬ್ಯಾಲೆಟ್ ಬಾಕ್ಸ್ ಗಳು ಪತ್ತೆಯಾಗಿದ್ದವು. ಹಾವೇರಿಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಸಂದರ್ಭದಲ್ಲೇ ಪತ್ತೆಯಾದಂತ ಬ್ಯಾಲೆಟ್ ಬಾಕ್ಸ್ ಗಳಿಂದಾಗಿ ಹಲವು ಅನುಮಾನಗಳಿಗೂ ಕಾರಣವಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತ ಹಾವೇರಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದರು. ಹಾವೇರಿಯ ಎಪಿಎಂಸಿ ಗೋದಾಮಿನಲ್ಲಿ ಸಂಗ್ರಹಿಸಿ ಇರಿಸಲಾಗಿದ್ದಂತ ಹಳೆಯ ಬ್ಯಾಲೆಟ್ ಬಾಕ್ಸ್ ಗಳು ಎಂಬುದಾಗಿ ಪತ್ತೆಯಾಗಿತ್ತು. ಈ ಬಳಿಕ ಆರೋಪಿಗಳ ಪತ್ತೆಗೆ ಇಳಿದಿದ್ದರು.
ಇಂದು ಪ್ರಕರಣ ಸಂಬಂಧ ಆರೋಪಿಗಳಾದಂತ ಸಂತೋಷ್ ಮಾಳಗಿ, ಮುತಪ್ಪ ದೇವಿ ಹೊಸೂರು, ಗಣೇಶ್ ಹರಿಜನ, ಕೃಷ್ಣ ಹರಿಜನ ಹಾಗೂ ಮೊಹಮ್ಮದ್ ಜಾವೆದ್ ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತ ಐವರು ಆರೋಪಿಗಳಿಂದ 27 ಬ್ಯಾಲೆಟ್ ಬಾಕ್ಸ್, ಕೃತ್ಯಕ್ಕೆ ಬಳಸಿದಂತ 1 ಆಟೋವನ್ನು ಜಪ್ತಿ ಮಾಡಿದ್ದಾರೆ.
BREAKING: ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಪುತ್ರನಿಂದಲೇ ಹಿಟ್ & ರನ್: ಸ್ಥಳದಲ್ಲೇ ವ್ಯಕ್ತಿ ಸಾವು
BIG NEWS : ಹೆಂಡತಿಯನ್ನು ಕೆಲಸ ಬಿಡುವಂತೆ ಒತ್ತಾಯಿಸುವುದು ಕ್ರೌರ್ಯಕ್ಕೆ ಸಮ : ಹೈಕೋರ್ಟ್ ಮಹತ್ವದ ತೀರ್ಪು