ಉಡುಪಿ: ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ ಕಾರನ್ನು ವೇಗವಾಗಿ ಚಲಾಯಿಸಿ ವ್ಯಕ್ತಿಯೊಬ್ಬರಿಗೆ ಗುದ್ದಿ ಪರಾರಿಯಾಗಿರುವಂತ ಘಟನೆ ನಡೆದಿದೆ. ಕಾರು ಹಿಟ್ ಅಂಡ್ ರನ್ ಗೆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಉಡುಪಿಯ ಕಾಂಗ್ರೆಸ್ ಮುಖಂಡ ಬೆಳಪು ದೇವಿ ಪ್ರಸಾದ್ ಶೆಟ್ಟಿ ಅವರ ಪುತ್ರ ಪ್ರಜ್ವಲ್ ಶೆಟ್ಟಿ ಎಂಬುವರೇ ಕಾರನ್ನು ವೇಗವಾಗಿ ಚಲಾಯಿಸಿ, ವ್ಯಕ್ತಿಯೊಬ್ಬರಿಗೆ ಗುದ್ದಿ, ಸಾವಿಗೆ ಕಾರಣವಾಗಿರುವಂತವರು ಎಂಬುದಾಗಿ ತಿಳಿದು ಬಂದಿದೆ.
ಬೆಳಪು ಮಿಲಿಟರಿ ಕಾಲೋನಿ ಬಳಿಯಲ್ಲಿ ಮುಂಜಾನೆ ಕೆಲಸಕ್ಕೆ ಹೋಗುತ್ತಿದ್ದಂತ ಮೊಹಮ್ಮದ್ ಹುಸೇನ್ ಎಂಬುವರಿಗೆ ಡಿಕ್ಕಿ ಹೊಡೆದಿದ್ದಾರೆ. ಕಾರು ಡಿಕ್ಕಿಯ ರಬಸಕ್ಕೆ ಮೂರು ಪಲ್ಟಿಯಾಗಿ ಚರಂಡಿಯಲ್ಲಿ ಬಿದ್ದಿದ್ದಾರೆ.
ಅಪಘಾತದ ಬಳಿಕ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಿದ್ದರೇ ಪುತ್ರ ಮೊಹಮ್ಮದ್ ಹುಸೇನ್ ಸಾವನ್ನಪ್ಪುತ್ತಿರಲಿಲ್ಲ ಎಂಬುದಾಗಿ ಅವರ ತಂದೆ ಉಮರಬ್ಬ ಆರೋಪಿಸಿದ್ದಾರೆ. ಒಂದು ಗಂಟೆಗಳ ಕಾಲ ರಕ್ತದ ಮಡುವಿನಲ್ಲಿ ಒದ್ದಾಡಿ ಮೊಹಮ್ಮದ್ ಹುಸೇನ್ ಸಾವನ್ನಪ್ಪಿದ್ದಾನೆ. ಆತ ಸಾವಿಗೆ ಕಾರಣವಾದಂತ ಪ್ರಜ್ವಲ್ ಶೆಟ್ಟಿಗೆ ಕಠಿಣ ಶಿಕ್ಷೆಯಾಗಬೇಕು ಅಂತ ಆಗ್ರಹಿಸಿದ್ದಾರೆ.
BREAKING: ಮಂಗಳೂರಲ್ಲಿ ರೆಸಾರ್ಟ್ ಈಜುಕೊಳದಲ್ಲಿ ಈಜಲು ಇಳಿದ ಮೂವರು ಧಾರುಣವಾಗಿ ಸಾವು!
BIG NEWS : ಹೆಂಡತಿಯನ್ನು ಕೆಲಸ ಬಿಡುವಂತೆ ಒತ್ತಾಯಿಸುವುದು ಕ್ರೌರ್ಯಕ್ಕೆ ಸಮ : ಹೈಕೋರ್ಟ್ ಮಹತ್ವದ ತೀರ್ಪು