ಬೆಂಗಳೂರು : ಜಿಲ್ಲಾ ಮತ್ತು ತಾಲೂಕು ವ್ಯಾಪ್ತಿಯ ಕಚೇರಿಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರುಗಳಿಗೆ ಸಂಬಂಧಿಸಿದ ಹಾಗೂ ಇಲಾಖೆಗೆ ಸಂಬಂಧಿಸಿದ ಬಾಕಿ ಕಡತಗಳ ವಿಲೇವಾರಿ ಕುರಿತು, ತಾಲೂಕು ಹಂತದಲ್ಲಿ ಶಿಕ್ಷಣ ಆದಾಲತ್ ಆಯೋಜಿಸಲಾಗಿದೆ.
ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖದನ್ವಯ ಜಿಲ್ಲಾ ಮತ್ತು ತಾಲೂಕು ವ್ಯಾಪ್ತಿಯ ಕಚೇರಿಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರುಗಳಿಗೆ ಸಂಬಂಧಿಸಿದ ಹಾಗೂ ಇಲಾಖೆಗೆ ಸಂಬಂಧಿಸಿದ ಬಾಕಿ ಕಡತಗಳ ವಿಲೇವಾರಿ ಕುರಿತು, ತಾಲೂಕು ಹಂತದಲ್ಲಿ ದಿನಾಂಕ: 01.11.2024 ರಿಂದ 20.11.2024 ರವರೆಗೆ ಹಾಗೂ ಜಿಲ್ಲಾ ಹಂತದಲ್ಲಿ ದಿನಾಂಕ:21.11.2024 ರಿಂದ 30.11.2024 ರ ವರೆಗೆ ಕಡತ ವಿಲೇವಾರಿ ಪ್ರಕ್ರಿಯೆ ಹಮ್ಮಿಕೊಳ್ಳಲು ಯೋಜಿಸಲಾಗಿದೆ.
ಜಿಲ್ಲಾ ಮತ್ತು ತಾಲೂಕು ವ್ಯಾಪ್ತಿಯ ಕಚೇರಿಗಳಲ್ಲಿ ಬಾಕಿ ಕಡತಗಳ ವಿಲೇವಾರಿ ಕುರಿತು ಜಿಲ್ಲಾವಾರು ನೋಡಲ್ ಅಧಿಕಾರಿಗಳನ್ನಾಗಿ ಅವರ ಆಯುಕ್ತರ ಕಚೇರಿ ಇವರ ಕಾರ್ಯಾಲಯದಿಂದ ಮೇಲಾಧಿಕಾರಿಗಳನ್ನು ನೇಮಿಸಿದ್ದು ಮೊದಲನೇ ಹಂತದಲ್ಲಿ ಸದರಿ ನೋಡಲ್ ಅಧಿಕಾರಿಗಳು ತಾಲೂಕು ಹಂತದ ಕಡತ ವಿಲೇವಾರಿ ಕುರಿತು ಹಾಗೂ 2ನೇ ಹಂತದಲ್ಲಿ ಜಿಲ್ಲಾ ಉಪನಿರ್ದೇಶಕರ ಕಾರ್ಯಾಲಯದಲ್ಲಿ ಬಾಕಿ ಕಡತ ವಿಲೇವಾರಿ ಕುರಿತು, ಅಗತ್ಯ ಕ್ರಮ ಕೈಗೊಳ್ಳಲು ಮೇಲ್ವಿಚಾರಣೆ ನಡೆಸಲಿದ್ದಾರೆ.
ಉಪನಿರ್ದೇಶಕರ ಕಚೇರಿ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕರು/ಸಿಬ್ಬಂದಿಯವರಿಗೆ ಸಂಬಂಧಿಸಿದ ಸೇವಾ ಮಾಹಿತಿಗಳನ್ನು ಮತ್ತು ಶಿಕ್ಷಕ/ ಸಿಬ್ಬಂದಿಯವರಿಂದ ಸ್ವೀಕರಿಸಲ್ಪಟ್ಟ ಮನವಿಗಳೊಂದಿಗೆ ವಿವಿಧ ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ನಿಗದಿತ ಸಮಯದೊಳಗೆ ಕಡತ ವಿಲೇವಾರಿ ಮಾಡುವುದು ಆಯಾ ಕಚೇರಿಗಳ ಆದ್ಯ ಕರ್ತವ್ಯವಾಗಿರುತ್ತದೆ. ಕಾರಣ, ಶಿಕ್ಷಣ ಅದಾಲತ್ ಹಂತ-2 ರ ಅನ್ವಯ ನವೆಂಬರ್-2024 ರ ಮಾಹೆಯಲ್ಲಿ ಸರ್ಕಾರಿ ನೌಕರರಿಂದ ಪಡೆದ ಅಹವಾಲುಗಳನ್ನು ಹಾಗೂ ಸೇವಾ ವಿವರಗಳಿಗೆ ಸಂಬಂಧಿಸಿದ ಕಡತಗಳನ್ನು ಈ ಕೆಳಗೆ ತಿಳಿಸಿರುವಂತೆ ಹಂತವಾರು ಕ್ರಮ ಕೈಗೊಳ್ಳಲು ಈ ಮೂಲಕ ತಿಳಿಸಿದೆ.
ನವೆಂಬರ್-2024ರ ಅದಲಾತ್ನಲ್ಲಿ ಉಪನಿರ್ದೇಶಕರ ಕಚೇರಿ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಕರ/ಸಿಬ್ಬಂದಿಗಳ ಕುರಿತಾದ ಕೆಳಕಂಡ 10 ವಿಷಯಗಳ ಕಡತಗಳನ್ನು ವಿಲೇವಾರಿ ಮಾಡುವುದು.
1. ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ಶಿಕ್ಷಕರ ಸೇವಾ ವಿವರಗಳನ್ನು ಸೇವಾ ಪುಸ್ತಕದಂತೆ ದಾಖಲು ಮಾಡುವುದು. ( ಅನುಬಂಧ-1)
2. ಪರಿವೀಕ್ಷಣಾ ಅವಧಿ ಘೋಷಣೆ [ಕರ್ನಾಟಕ ನಾಗರೀಕ ಸೇವಾ (ಪರಿವೀಕ್ಷಣಾ) ನಿಯಮಗಳು 1977ಗಳಂತೆ), ( ಅನುಬಂಧ-2)
3. 10.15.20.25.30 ವರ್ಷಗಳ ಕಾಲಮಿತಿ ವೇತನ ಬಡ್ತಿ, ಸ್ವಯಂ ಚಾಲಿತ ಬಡ್ತಿ, ಮತ್ತು ವಿಶೇಷ ಬಡ್ತಿ, ಸ್ಥಗಿತ ವೇತನ ಬಡ್ತಿಗಳ ದರಗಳನ್ನು ಮೂಲ ವೇತನದಲ್ಲಿ ಸೇರಿಸಿ, ಬಾಕಿ ವೇತನಗಳ ಇತ್ಯರ್ಥಪಡಿಸುವುದು. [ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ಆಇ60ಎಸ್.ಆರ್.ಪಿ 1984 20:23.08.1984 ). (-3)
4. ಗಳಿಕೆ ರಜೆಯ ಲೆಕ್ಕದ ಮಾಹಿತಿಯನ್ನು ಸೇವಾ ಪುಸ್ತಕದಲ್ಲಿ ಇಂದೀಕರಿಸುವ ಕುರಿತು. [ಕರ್ನಾಟಕ ನಾಗರೀಕ ಸೇವಾ ನಿಯಮಗಳು ರಜಾ ನಿಯಮಗಳು ನಿಯಮ 105 ರಿಂದ 206]. ( ಅನುಬಂಧ-4)
5. ಸರ್ಕಾರಿ ನೌಕರರು ನಿವೃತ್ತಿ ಹೊಂದುವ -3- ತಿಂಗಳ ಮುಂಚೆ, ಮಾನ್ಯ ಎ.ಜಿ.ಕಚೇರಿಗೆ ಅವರ ಮೂಲ ಸೇವಾ ಪುಸ್ತಕದೊಂದಿಗೆ ಪಿಂಚಣಿ ಪ್ರಸ್ತಾವನೆ ಕಳುಹಿಸುವ ಕುರಿತು. (ಕರ್ನಾಟಕ ಸರ್ಕಾರಿ ನೌಕರರ ಕುಟುಂಬ ನಿವೃತ್ತಿ ನಿಯಮಗಳು 2002]. ( ಅನುಬಂಧ-5)
6. ಮಹಿಳಾ ಪ್ರಸೂತಿ ರಜೆಗಳು. [ನಿ-135] ( ಅನುಬಂಧ-6)
7. ಅನುಕಂಪ ಆಧಾರದ ನೇಮಕಾತಿಗಳು. [ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಗಳು, 1996….2023] ( ಅನುಬಂಧ-7)
8. ನ್ಯಾಯಾಲಯ ಪ್ರಕರಣಗಳು. ( ಅನುಬಂಧ-8)
9. ಹಿಂದಿನ ಸೇವೆ ಪರಿಗಣಿಸುವ ಪ್ರಕರಣಗಳ ಕುರಿತು. (ಕನಾಸೇನಿ.224) ( ಅನುಬಂಧ-9)
10. ಅಂತಿಮ ವೇತನ ಪ್ರಮಾಣ ಪತ್ರ (LPC) ಹಾಗೂ ಸೇವಾ ಪುಸ್ತಕ ಕಳುಹಿಸುವ ಕುರಿತು. (ಅನುಬಂಧ-10)
ಸದರಿ ಅನುಬಂಧಗಳಂತೆ (1ರಿಂದ10) ಮಾಹಿತಿಯನ್ನು ಈ ಕೂಡಲೇ ಕ್ರೋಢೀಕರಿಸಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಮಾಹಿತಿಯನ್ನು ನಮ್ಮ ಕಚೇರಿಗೆ ದಿ:08.11.2024 ರ ಒಳಗಾಗಿ ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ಮುಂದುವರೆದು, ನಮ್ಮ ಕಚೇರಿಯಿಂದ ಅದಾಲತ್ ಮೇಲ್ವಿಚಾರಣೆಗಾಗಿ ತಮ್ಮ ತಾಲೂಕಿಗೆ ಹಾಗೂ ಜಿಲ್ಲೆಗೆ ಬರುವ ಮೇಲಾಧಿಕಾರಿಗಳು ಅಕ್ಟೋಬರ್-2024ರಲ್ಲಿ ನಡೆದ ಅದಾಲತ್ ಹಂತ-1 ರ ಪುಗತಿ ಪರಿಶೀಲನೆಯನ್ನು ಸಹಾ ಮಾಡಲಿದ್ದಾರೆ. ಆದ್ದರಿಂದ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ನಿಯಮಾನುಸಾರ ಪೂರ್ಣಗೊಳಿಸಿ, ಅದಾಲತ್ ಅನ್ನು ಯಶಸ್ವಿಗೊಳಿಸತಕ್ಕದ್ದು.