ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲಿ ಮೊಬೈಲ್. ಅದು ಇಲ್ಲದೆ ಒಂದು ದಿನ ಕೂಡ ಇರೋಕೆ ಆಗೊಲ್ಲ. ಹಾಗೆ ಅದನ್ನ ಮೂರು ಹೊತ್ತು ನೋಡ್ತಾ ಇದ್ದರೆ, ಪ್ರಪಂಚದಲ್ಲಿ ಏನು ಆದ್ರೂ ಗೊತ್ತಾಗುವುದಿಲ್ಲ. ಕೆಲವರು ಶೌಚಾಲಯದಲ್ಲೂ ಕೂಡ ಬಳಸುತ್ತಾರೆ. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಕುತ್ತು ಬರುತ್ತದೆ. ಹಾಗಾದ್ರೆ ಫೋನ್ ಬಳಸುವುದರಿಂದ ಏನು ಆಗುತ್ತೆ ತಿಳಿದುಕೊಳ್ಳೋಣ.
ಮಲಬದ್ದತೆ ಮತ್ತು ಫೈಲ್ಸ್ : ಜೀರ್ಣಾಂಗ ವ್ಯವಸ್ಥೆ ಸರಿಯಾಗದಿದ್ದಾಗ ಮಲಬದ್ಧತೆ ಮತ್ತು ಪೈಲ್ಸ್‌ನಂತಹ ಸಮಸ್ಯೆಗಳನ್ನು ಎದುರಿಸಬಹುದು. ಹೆಚ್ಚು ಕಾಲ ವಾಶ್ ರೂಂನಲ್ಲಿ ಕುಳಿತುಕೊಳ್ಳುವುದು ನಿಮ್ಮ ವಿಸರ್ಜನಾ ಅಂಗಗಳ ಮೇಲೆ ಅನಗತ್ಯ ಒತ್ತಡ ಉಂಟುಮಾಡಬಹುದು.ಹೀಗಾಗಿ ಅನಾರೋಗ ಕಾಡುತ್ತದೆ.
ಸೋಂಕಿನ ಅಪಾಯ: ಪ್ರತಿಯೊಂದು ಶೌಚಾಲಯಗಳಲ್ಲೂ ಬ್ಯಾಕ್ಟೀರಿಯಾಗಳ ಇರುತ್ತದೆ. ನೀವು ಮೊಬೈಲ್ ಫೋನ್ ಬಳಸುವಾಗ, ನಿಮ್ಮ ಸ್ಮಾರ್ಟ್‌ಫೋನ್‌ಗೆ ಅಂಟಿಕೊಳ್ಳುವ ಬ್ಯಾಕ್ಟೀರಿಯಾಗಳಿಂದ ಅಂತಿಮ ಪರಿಣಾಮ ನಿಮ್ಮ ಮೇಲೆ ಆಗುತ್ತದೆ. ಇದರಿಂದ ಹೊಟ್ಟೆ ನೋವು ಮತ್ತು ಮೂತ್ರದ ಸೋಂಕು ಉಂಟಾಗುತ್ತದೆ.
ಅತಿಸಾರ ಸಂಬಂಧಿತ ಸಮಸ್ಯೆಗಳು: ಕೆಲವರು ವಾಶ್‌ರೂಮ್‌ನಲ್ಲಿ ನೈರ್ಮಲ್ಯ ಪಾಲಿಸುವ ಬಗ್ಗೆ ಸೂಕ್ಷ್ಮವಾಗಿ ಗಮನಿಸುವುದಿಲ್ಲ. ಇದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಶೌಚಾಲಯದಲ್ಲಿ ಫೋನ್ ಬಳಸಿದ ನಂತರ ಕೈ ತೊಳೆಯುವುದನ್ನು ಕೆಲವರು ಮರೆತುಬಿಡುತ್ತಾರೆ. ಕೈಗೊಳ್ಳನ್ನು ಸ್ವಚ್ಛಗೊಳಿಸದೆ ಆಹಾರ ಸೇವಿಸುತ್ತಾರೆ. ಇದರಿಂದ ಬ್ಯಾಕ್ಟೀರಿಯಾಗಳು ನಿಮ್ಮ ಹೊಟ್ಟೆಯನ್ನು ತಲುಪಿ, ಅನಾರೋಗ್ಯಕ್ಕೆ ಕಾರಣವಾಗಬಹುದು.
ಸೋ ಶೌಚಾಲಯಕ್ಕೆ ಹೋಗುವಾಗ ಮೊಬೈಲ್ ಬಳಸುವುದನ್ನು ತಪ್ಪಿಸಿ. ಆ ಮೂಲಕ ನಿಮ್ಮ ಆರೋಗ್ಯದ ಕಾಳಜಿಯನ್ನು ವಹಿಸೋದು ಮರೆಯಬೇಡಿ.