ಶಿವಮೊಗ್ಗ: ಸಾಗರದ ನಗರದಲ್ಲಿ ಈಗಾಗಲೇ ಹಲವೆಡೆ ನಂದಿನಿ ಪಾರ್ಲರ್ ಗಳಿದ್ದಾವೆ. ಹಾಲು, ಮೊಸರು ಸೇರಿದಂತೆ ಇತರೆ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಈಗ ಹೊಸದಾಗಿ ಬಿಹೆಚ್ ರಸ್ತೆಯಲ್ಲಿ ನೂತನ ನಂದಿನಿ ಐಸ್ ಕ್ರೀಮ್ ಪಾರ್ಲರ್ ಕೂಡ ಓಪನ್ ಮಾಡಲಾಗಿದೆ.
ಇಂದು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಾಗರ ನಗರದ ಬಿಹೆಚ್ ರಸ್ತೆಯ ನ್ಯೂ ಗಂಧರ್ವ ಹೋಟೆಲ್ ಬಳಿಯಲ್ಲಿ ನೂತನವಾಗಿ ನಿರ್ಮಿಸಿರುವಂತ ನಂದಿನಿ ಐಸ್ ಕ್ರೀಮ್ ಪಾರ್ಲರ್ ಅನ್ನು ಉದ್ಘಾಟಿಸಿದರು.
ಈ ಬಳಿಕ ಮಾತನಾಡಿದಂತ ಅವರು ನಗರದಲ್ಲಿ ಜನರಿಗೆ ಉತ್ತಮ ಗುಣಮಟ್ಟದ ಸಿಹಿ ತಿನಿಸಿನ ಸವಿ ಉಣಬಡಿಸಲು ನಂದಿನಿ ಐಸ್ ಕ್ರೀಮ್ ಪಾರ್ಲರ್ ತೆರೆಯಲಾಗಿದೆ. ಈ ಮಳಿಗೆ ತೆರೆದಂತ ಶಿಮೂಲ್ ಗೆ ಧನ್ಯವಾದಗಳನ್ನು ತಿಳಿಸಿದರು.
ಸಾಗರ ನಗರದ ಆಸ್ಪತ್ರೆ, ಕಾಲೇಜುಗಳ ಬಳಿಯಲ್ಲೂ ನಂದಿನಿ ಬೂತ್ ತೆರೆಯಲು ಯೋಜಿಸಲಾಗಿದೆ. ಈಗಾಗಲೇ ಈ ಸಂಬಂಧ ಶಿಮೂಲ್ ಅಧ್ಯಕ್ಷರಾಗಿರುವಂತ ಮಂಜುನಾಥ್ ಗೌಡ ಬಳಿಯಲ್ಲೂ ಮಾತನಾಡಲಾಗಿದೆ. ಶೀಘ್ರವೇ ಸ್ಥಳ ನಿಗದಿ ಪಡಿಸಿ, ನಂದಿನಿ ಬೂತ್ ಓಪನ್ ಮಾಡಲಾಗುತ್ತದೆ ಎಂದರು.
ಶಿಮೂಲ್ ಅಧ್ಯಕ್ಷ ಹೆಚ್.ಎನ್ ವಿದ್ಯಾದರ ಮಾತನಾಡಿ, ಸಾಗರದಲ್ಲಿ ಇದೇ ಮೊದಲ ಬಾರಿಗೆ ನಂದಿನಿ ಐಸ್ ಕ್ರೀಮ್ ಪಾರ್ಲರ್ ತೆರೆಯಲಾಗಿದೆ. ಶಿಮೂಲ್ ನಿಂದಲೇ ಈ ಪಾರ್ಲರ್ ನಿರ್ವಹಣೆ ಮಾಡಲಾಗುತ್ತದೆ. ಇಂತಹ ಪಾರ್ಲರ್ ಇತರೆಡೆಗಳಲ್ಲೂ ತೆರೆಯಲು ನಿರ್ಧರಿಸಲಾಗಿದೆ. ಇಲ್ಲಿ ವಿವಿಧ ಬಗೆಯ ಐಸ್ ಕ್ರೀಂಗಳು ಲಭ್ಯವಿದೆ. ಜೊತೆಗೆ ಉತ್ತಮ ಗುಣಮಟ್ಟದ ಸಿಹಿ ತಿನಿಸು, ಖಾರ ಕೂಡ ಲಭ್ಯವಿದೆ. ಸಾಗರದ ಜನತೆ ಭೇಟಿ ನೀಡಿ, ನಂದಿನಿ ಸವಿ ರುಚಿಯನ್ನು ಸವಿಯುವಂತೆ ಕೋರಿದರು.
ಶಿವಮೊಗ್ಗದಲ್ಲಿ ಪ್ರತಿ ದಿನ 7.50 ಲಕ್ಷ ಲೀಟರ್ ಮಾರಾಟವಾಗುತ್ತಿದೆ. ರಾಜ್ಯಾಧ್ಯಂತ 1 ಕೋಟಿ ಲೀಟರ್ ಆಗಿದೆ. ಶಿವಮೊಗ್ಗದ ಪ್ರತಿ ತಾಲ್ಲೂಕಿನಲ್ಲೂ 7 ರಿಂದ 8 ನಂದಿನಿ ಐಸ್ ಕ್ರೀಮ್ ಪಾರ್ಲರ್ ತೆರೆಯೋ ಚಿಂತನೆ ಇದೆ. ಈಗಾಗಲೇ ಶಿಮೂಲ್ ವ್ಯಾಪ್ತಿಯಲ್ಲಿ 250 ನಂದಿನಿ ಬೂತ್ ಗಳಿದ್ದಾವೆ ಎಂದರು.
ಈ ಸಂದರ್ಭದಲ್ಲಿ ಶಿಮೂಲ್ MD ಶೇಖರ್.ಎಸ್.ಜಿ, ಮಾರುಕಟ್ಟೆ ವ್ಯವಸ್ಥಾಪಕ ಪ್ರಮೋದ್, ಸಾಗರದ ನಂದಿನಿ ಐಸ್ ಕ್ರೀಂ ಪಾರ್ಲರ್ ಗುತ್ತಿಗೆದಾರ ಪ್ರತಾಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರತಿಷ್ಠಿತ ಕನಕಶ್ರೀ ಪ್ರಶಸ್ತಿಗೆ ಶ್ರೀ ವ್ಯಾಸನಕೆರೆ ಪ್ರಭಂಜನಾಚಾರ್ಯ ಆಯ್ಕೆ- ಸಚಿವ ಶಿವರಾಜ ತಂಗಡಗಿ