ನವದೆಹಲಿ : ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶದಲ್ಲಿರುವ ಸ್ಕಾರ್ಡು, ಹುಂಜಾ ಮತ್ತು ಮುಜಫರಾಬಾದ್ ನಗರಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಯ ಟ್ರೋಫಿ ಪ್ರವಾಸವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ರದ್ದುಗೊಳಿಸಿದೆ ಎಂದು ವರದಿ ಮಾಡಿದೆ.
ಅಂದ್ಹಾಗೆ, ನವೆಂಬರ್ 16ರಿಂದ ಇಸ್ಲಾಮಾಬಾದ್ನಿಂದ ದೇಶಾದ್ಯಂತ ಟ್ರೋಫಿ ಪ್ರವಾಸವನ್ನ ನಡೆಸುವುದಾಗಿ ಪಿಸಿಬಿ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಘೋಷಿಸಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿವಾದಿತ ಪ್ರದೇಶದಲ್ಲಿ ಬರುವ ಇತರ ನಗರಗಳಾದ ಸ್ಕಾರ್ಡು, ಹುಂಜಾ ಮತ್ತು ಮಜಫರಾಬಾದ್ ಹೆಸರುಗಳನ್ನ ಸಹ ಅದು ಉಲ್ಲೇಖಿಸಿದೆ.
Get ready, Pakistan!
The ICC Champions Trophy 2025 trophy tour kicks off in Islamabad on 16 November, also visiting scenic travel destinations like Skardu, Murree, Hunza and Muzaffarabad. Catch a glimpse of the trophy which Sarfaraz Ahmed lifted in 2017 at The Oval, from 16-24… pic.twitter.com/SmsV5uyzlL
— Pakistan Cricket (@TheRealPCB) November 14, 2024
ಆದ್ರೆ, ಪಿಒಕೆಯಲ್ಲಿ ಚಾಂಪಿಯನ್ ಟ್ರೋಫಿ ಪ್ರವಾಸ ನಡೆಸುವುದನ್ನ ಭಾರತ ವಿರೋಧಿಸಿದ್ದು, ಸಧ್ಯ ಐಸಿಸಿ ಪಿಒಕೆ ಪ್ರದೇಶದಲ್ಲಿರುವ ಸ್ಕಾರ್ಡು, ಹುಂಜಾ ಮತ್ತು ಮುಜಫರಾಬಾದ್ ನಗರಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಟ್ರೋಫಿ ಪ್ರವಾಸವನ್ನ ರದ್ದುಗೊಳಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ.
BREAKING : ಜಾರ್ಖಂಡ್’ನಲ್ಲಿ ‘ಪ್ರಧಾನಿ ಮೋದಿ’ ವಿಮಾನದಲ್ಲಿ ತಾಂತ್ರಿಕ ದೋಷ ; ‘ಟೇಕ್ ಆಫ್’ಗೆ ಪರದಾಟ
BREAKING: ಬೆಂಗಳೂರಲ್ಲಿ 2 ಲಕ್ಷ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಇನ್ಸ್ ಪೆಕ್ಟರ್