ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಾಂಕ:15.11.2024 ರಿಂದ 26.11.2024ರವರೆಗೆ ಬಿರ್ಸಾ ಮುಂಡಾರವರ ಜೀವನ, ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಅವರ ಕೊಡುಗೆಗಳು ಹಾಗೂ ಬುಡಕಟ್ಟು ಜನಾಂಗದ ಸಂಸ್ಕೃತಿ, ಪರಂಪರೆ ಕುರಿತು ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ಹಾಗೂ ಇತರೆ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಬುಡಕಟ್ಟು ಜನಾಂಗದ ಬಗ್ಗೆ ಗೌರವ, ಅರಿವು ಮೂಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ಜನ್‌ಜಾತೀಯ ಗೌರವ್ ದಿವಸ್” (JDG) 2024 ಆಚರಿಸುವ ಕುರಿತು. ಉಲ್ಲೇಖಿತ ವಿಷಯಕ್ಕೆ ಸಂಬಂಧಿಸಿದಂತೆ, ಕೇಂದ್ರ ಸಚಿವ ಸಂಪುಟವು ಬುಡಕಟ್ಟು ಜನಾಂಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.
ಭಾರತೀಯ ಬುಡಕಟ್ಟು ಸ್ವಾತಂತ್ರ ಹೋರಾಟಗಾರ ಮತ್ತು ಮುಂಡಾ ಬುಡಕಟ್ಟಿಗೆ ಸೇರಿದ ಜಾನಪದ ನಾಯಕ ಬಿರ್ಸಾ ಮುಂಡಾ. ಇವರು ದಿನಾಂಕ:15.11.1875 ರಂದು ಜಾರ್ಖಂಡ್ ರಾಜ್ಯದ ರಾಂಚಿ ಜಿಲ್ಲೆಯ Ulihatu ಎಂಬ ಹಳ್ಳಿಯಲ್ಲಿ ಜನಿಸಿದರು. ಇವರ ಜನ್ಮ ದಿನಾಚರಣೆ ಅಂಗವಾಗಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಾಂಕ:15.11.2024 ರಿಂದ 26.11.2024ರವರೆಗೆ ಬಿರ್ಸಾ ಮುಂಡಾರವರ ಜೀವನ, ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಅವರ ಕೊಡುಗೆಗಳು ಹಾಗೂ ಬುಡಕಟ್ಟು ಜನಾಂಗದ ಸಂಸ್ಕೃತಿ, ಪರಂಪರೆ ಕುರಿತು ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ಹಾಗೂ ಇತರೆ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಬುಡಕಟ್ಟು ಜನಾಂಗದ ಬಗ್ಗೆ ಗೌರವ, ಅರಿವು ಮೂಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಲ್ಲೇಖಿತ ಪತ್ರದಲ್ಲಿ ಸೂಚಿಸಿದೆ.
ಮಾನ್ಯ ಪ್ರದಾನ ಮಂತ್ರಿಗಳು ದಿನಾಂಕ:15.11.2024 ರಂದು “ಜನ್‌ಜಾತೀಯ ಗೌರವ್ ದಿವಸ್” ಕಾರ್ಯಕ್ರಮವನ್ನು ಉದ್ಘಾಟನೆ ಮಾಡುವರು. ಈ ಕಾರ್ಯಕ್ರಮದ ನೇರ ಪ್ರಸಾರವು DD ಚಾನೆಲ್ ಗಳಲ್ಲಿ, PM ಇ-ವಿದ್ಯಾ DTH ಟಿವಿ ಚಾನೆಲ್‌ಗಳು ಮತ್ತು VI ರಿಂದ XII ತರಗತಿಗಳ PM e-ವಿದ್ಯಾ ಯೂಟ್ಯೂಬ್ ಚಾನಲ್‌ಗಳಲ್ಲಿ ನೇರ ಪ್ರಸಾರವಾಗುವುದು. ಶಿಕ್ಷಕರು ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ವೀಕ್ಷಿಸುವಂತೆ ಕ್ರಮ ವಹಿಸುವುದು ಹಾಗೂ ಬಿರ್ಸಾ ಮುಂಡಾ ಅವರ ಜೀವನ ಮತ್ತು ಕೊಡುಗೆಯ ಕುರಿತು NCERT ವತಿಯಿಂದ ಸಿದ್ಧಪಡಿಸಿರುವ ವೀಡಿಯೊವನ್ನು wơ https://ncert.nic.in/BirsaMunda.php?ln=en F ಕೈಗೊಳ್ಳುವುದು.
ಜನ್ ಜಾತಿಯ ಗೌರವ್ ದಿವಸ್ (ಜೆಜೆಡಿಜಿ) 2024 ಅಂಗವಾಗಿ ಶಿಕ್ಷಕರು ಶಾಲಾ ಹಂತದಲ್ಲಿ ದಿನಾಂಕ:15.11.2024 ರಿಂದ 26.11.2024 ರವರೆಗೆ ಈ ಕೆಳಕಂಡಂತೆ ಚಟುವಟಿಕೆಗಳನ್ನು ಹಮ್ಮಿಕೊಂಡು ಬುಡಕಟ್ಟು ಸಮುದಾಯಗಳ ಪರಂಪರೆ ಹಾಗೂ ಬಿರ್ಸಾ ಮುಂಡಾ ಅವರ ಕೊಡುಗೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು.