ತುಳಸೀದರ್ಶನ (ಪೂಜೆ)ಗೋದಾನಕ್ಕೆ ಸಮ
ಮುಂಜಾನೆ ಸ್ನಾನವಾದ ನಂತರ ಕಲಶದಲ್ಲಿ ಶುದ್ದ ನೀರು ತೆಗೆದುಕೊಂಡು ಕ್ರಮ ಪ್ರಕಾರ ಹೊಸ್ತಿಲು ಪೂಜೆಯನ್ನು ರಂಗೋಲಿಯನ್ನು ಮುಗಿಸಿ ತುಳಸೀ ವೃಂದಾವನದ ಸನ್ನಿಧಿಗೆ ಬರಬೇಕು. ವೃಂದಾವನವು ಒದ್ದೆಯಾಗುವಂತೆ ಹೊಸ್ತಿಲಿನ ಮೇಲಿಟ್ಟಿದ್ದ ತಂಬಿಗೆಯಿಂದ ನೀರೆರೆದು ,ತುಳಸೀ ಮೂಲದಲ್ಲಿ ಇರುವ ನೀರನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಂಡು,ತುಳಸೀ ಮೂಲಮೃತ್ತಿಕೆಯನ್ನು ಹಣೆಯಲ್ಲಿ ಧರಿಸಿ, ಪ್ರದಕ್ಷಿಣೆ ಬಂದು ನಮಸ್ಕರಿಸಬೇಕು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ತುಳಸೀ ಮಹತ್ವವನ್ನು ತಿಳಿಸುವ ಶ್ಲೋಕಗಳು
ಯನ್ಮೂಲೇ ಸರ್ವತೀರ್ಥಾನಿ ಯನ್ಮ ಧ್ಯೇ ಸರ್ವದೇವತಾಃ |
ಯದಗ್ರೇ ಸರ್ವವೇದಾಶ್ಚ ತುಳಸಿ ತ್ವಾಂ ನಮಾಮ್ಯಹಮ್ ||
ತುಳಸಿಯ ಬುಡದಲ್ಲಿ ಗಂಗಾದಿ ಸರ್ವತೀರ್ಥಗಳು.ಮಧ್ಯದಲ್ಲಿ ವಿಷ್ಣುವೇ ಮೊದಲಾದ ಎಲ್ಲಾ ಸರ್ವದೇವತೆಗಳು.ತುದಿಯಲ್ಲಿ ಋಗ್ವಾದಿ ಚತುರ್ವೇದಗಳು ನೆಲೆಸಿರುತ್ತವೆ. ಅಂತಹ ತುಳಸಿ ದೇವಿಯೇ, ನಿನಗೆ ನನ್ನ ನಮಸ್ಕಾರಗಳು.
ಪ್ರಸೀದ ತುಳಸೀದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದಮಥನೋದ್ಭೂತೇ ತುಳಸೀ ತ್ವಾಂ ನಮಾಮ್ಯಹಮ್ ||
ಪಾಲ್ಗಡಲನ್ನು ಕಡೆದಾಗ ಭಗವಂತ ಧನ್ವಂತರಿಯ ಆನಂದಾಶ್ರುವಿನಿಂದ ಅಮೃತ ಕಲಶದಲ್ಲಿ ಆವಿರ್ಭವಿಸಿದ ಹರಿಪ್ರಿಯಳಾದ ಓ ದೇವಿ ತುಳಸಿ! ನಾನು ನಿನಗೆ ನಮಿಸುತ್ತೇನೆ.
ಪಾಪಾನಿ ಯಾನಿ ರವಿಸೂನು ಪಟಸ್ಥಿತಾನಿ ಗೋಬ್ರಹ್ಮಬಾಲಾಪಿತೃಮಾತೃ ವಧಾದಿಕಾನಿ |
ನಶ್ಯಂತಿ ತಾನಿ ತುಳಸೀವನದರ್ಶನೇನ ಗೋಕೋಟಿದಾನ ಸದೃಶಂ ಫಲಮಾಪ್ನುವಂತಿ ||
ತುಳಸೀವೃಂದಾವನವನ್ನು ದರ್ಶನ ಮಾಡುವುದರಿಂದ ಕೋಟಿ ಗೋವುಗಳನ್ನು ದಾನವಿತ್ತ ಫಲ ಲಭಿಸುತ್ತದೆ.ರವಿಸುತನಾದ ಯಮನು ಉಲ್ಲೇಖಿಸಿರುವ ಗೋಹತ್ಯೆ,ಬ್ರಹ್ಮಹತ್ಯೆ, ಬಾಲಹತ್ಯೆ,ಮಾತೃವಧ, ಪಿತೃವಧೆಯಂತಹ ಪಾತಕಗಳು ತುಳಸೀವೃಂದಾವನ ದರ್ಶನದಿಂದ ನಾಶವಾಗುತ್ತವೆ.
ಲಲಾಟೇ ಯಸ್ಯ ದೃಶ್ಯೇತ ತುಳಸೀಮೂಲಮೃತ್ತಿಕಾ |
ಯಮಸ್ತಂ ನೇಕ್ಷಿತುಂ ಶಕ್ತಃ ಕಿಮು ದೂತಾ ಭಯಂಕರಾಃ ||
ತುಳಸೀಗಿಡದ ಬುಡದಲ್ಲಿರುವ ಮೃತ್ತಿಕೆಯನ್ನು ಹಣೆಯಲ್ಲಿ ಧರಿಸಿದವರ ಮುಖವನ್ನು ಯಮನೇ ಕತ್ತೆತ್ತಿ ನೋಡಲಾಗದು.ಇನ್ನು ಯಮನ ದೂತರು ನೋಡಬಲ್ಲರೇ?ತುಳಸೀ ಮೃತ್ತಿಕೆಯ ಧಾರಣೆಯಿಂದ ಅಪಮೃತ್ಯುವಿರುವುದಿಲ್ಲ.
ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ತಥಾ|
ವಾಸುದೇವಾದಯೋ ದೇವಾ: ವಸಂತಿ ತುಳಸೀವನೇ ||
ತುಳಸೀವನದಲ್ಲಿ ಪುಷ್ಕರಾದಿ ಸರೋವರ ತೀರ್ಥಗಳು, ಗಂಗೆಯೇ ಮೊದಲಾದ ನದಿತೀರ್ಥಗಳು, ವಾಸುದೇವಾದಿ ದೇವತೆಗಳೆಲ್ಲಾ ನೆಲೆಸಿರುತ್ತಾರೆ..
ಬೆಳಕಿನ ಮಾಸ ಕಾರ್ತಿಕ ಶುದ್ಧ ದ್ವಾದಶಿ ಬೃಂದಾವನದಿ ಪವಡಿಸಿದ ಶ್ರೀಮನ್ನಾರಾಯಣನ ಎಚ್ಚರಿಸುವ ದಿನ. ಅಂದೇ ಚಾತುರ್ಮಾಸ್ಯದ ಅಂತ್ಯ. ಅಂದು ತುಳಸಿಗೂ, ಶ್ರೀಮನ್ನಾರಾಯಣನಿಗೂ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸುತ್ತಾರೆ. ಈ ದೇವೋತ್ಥಾನದ ದಿನ ಮಾನಿನಿಯರು ಸಿಂಧೂರಾದಿಯಿಂದ ಮನೆಯನ್ನೂ ತುಳಿಸಿ ಕಟ್ಟೆಯನ್ನು ಸಿಂಗರಿಸಿ, ಮಂಟಪ ನಿರ್ಮಿಸಿ, ಅಗಸೆ ಹಾಗೂ ಫಲಸಹಿತವಾದ ಬೆಟ್ಟನೆಲ್ಲಿಯ ಕೊನೆಯನ್ನು ತುಳಸಿ ಕಟ್ಟೆಯಲ್ಲಿ ಸ್ಥಾಪಿಸಿ, ನೆಲ್ಲಿಕಾಯಿಯ ಕೊರೆದು ಬತ್ತಿ ಹಾಕಿ ದೀಪಾರತಿ ಮಾಡುತ್ತಾರೆ.
ಉತ್ಥಾನ ದ್ವಾದಶಿಗೆ ಕಿರು ದೀಪಾವಳಿ ಎಂಬ ಹೆಸರೂ ಇದೆ. ಅಂದೂ ಮಕ್ಕಳು ಪಟಾಕಿಗಳನ್ನು ಸಿಡಿಸಿ ಆನಂದಿಸುತ್ತಾರೆ. ಕಾರ್ತಿಕ ಶುದ್ಧ ದ್ವಾದಶಿಯ ದಿನ ತುಳಸಿಯ ದರ್ಶನದಿಂದ, ತುಳಸಿ ಪೂಜಿಸುವುದರಿಂದ ಸಪ್ತಜನ್ಮಕೃತ ಪಾಪಗಳು ಕಳೆಯುತ್ತವೆ ಎಂಬುದು ಹಿರಿಯರ ನಂಬಿಕೆ. ತುಳಸಿ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯ. ತುಳಸಿ, ಪೂಜೆಗೂ ಶ್ರೇಷ್ಠ.
ತುಳಸಿ ಹಬ್ಬ, ಉತ್ಥಾನ ದ್ವಾದಶಿಅಂದು ತುಳಸಿಯ ದರ್ಶನ ಮಾತ್ರದಿಂದ ಪಾಪ ಪರಿಹಾರವಾಗುತ್ತದೆ, ಸ್ಪರ್ಶಮಾತ್ರದಿಂದ ಪವಿತ್ರತೆ ಬರುತ್ತದೆ, ವಂದಿಸುವುದರಿಂದ ರೋಗ ಪರಿಹಾರವಾಗುತ್ತದೆ, ತುಳಸೀತೀರ್ಥ ಪ್ರೋಕ್ಷಣೆಯಿಂದ ಆಯುವೃದ್ಧಿಯಾಗುತ್ತದೆ, ಅಂದು ತುಳಸಿ ಸಸಿ ನೆಡುವುದರಿಂದ ಶ್ರೀಕೃಷ್ಣನ ಸನ್ನಿಧಿ ಲಭ್ಯವಾಗುತ್ತದೆ, ಕೃಷ್ಣ ತುಳಸಿ, ಶ್ರೀ ತುಳಸಿ ಪೂಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವುದು ಸನಾತನರ ಅಭಿಪ್ರಾಯ.
ತುಳಸಿಯ ಹಿರಿಮೆ: ತುಳಸಿ ಹುಲುಸಾಗಿ ಬೆಳೆದೆಡೆ ಸೊಳ್ಳೆಗಳು ಇರುವುದಿಲ್ಲ. ತುಳಸಿ ಒಂದು ಔಷಧೀಯ ಸಸ್ಯ. ಮಕ್ಕಳಿಗೆ ಕೆಮ್ಮು -ನೆಗಡಿ ಆದರೆ, ತುಳಸಿ ರಸ ಕುಡಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ತುಳಸಿ ಮಾನವನ ಆರೋಗ್ಯಕ್ಕೆ ಸಹಕಾರಿಯಾಗುವುದರ ಜೊತೆ ಜೊತೆಗೆ ಕೋಮಲತೆ, ಪಾವಿತ್ರ್ಯದ ಉದಾತ್ತ ತತ್ವಗಳನ್ನು ಸಾರುತ್ತದೆ.
ಶ್ರೀಕೃಷ್ಣ ತುಲಾಭಾರದ ಸಮಯದಲ್ಲಿ ಸತ್ಯಭಾಮಾದೇವಿಯು ಖಜಾನೆಯಲ್ಲಿದ್ದ ನಗ ನಾಣ್ಯವನ್ನೇಲ್ಲಾ ಹಾಕಿದರೂ, ಕೃಷ್ಣನ ತೂಕಕ್ಕೆ ಅದು ಸರಿಹೊಂದುವುದಿಲ್ಲ. ಆದರೆ, ರುಕ್ಮಿಣಿ ಮಾತೆ, ಭಕ್ತಿ ಭಾವದಿಂದ ಹಾಕುವ ಒಂದೇ ಒಂದು ದಳ ತುಳಸಿ, ಶ್ರೀಕೃಷ್ಣನ ತೂಕಕ್ಕೆ ಸಮನಾಗುತ್ತದೆ. ಇದು ತುಳಸಿಯ ಹಿರಿಮೆ ಸಾರುವ ಒಂದು ದೃಷ್ಟಾಂತ.
ಸನಾತನ ಧರ್ಮವು “ತುಳಸಿ” ಗಿಡಕ್ಕೆ ಮಾತೃ ಸ್ಥಾನವನ್ನು ನೀಡಿ ಗೌರವಿಸಿದೆ. ” ಪವಿತ್ರ ತುಳಸಿ” ಎಂದು ಸಹ ಕರೆಯಲ್ಪಡುವ ತುಳಸಿಯು ಭಾರತದಲ್ಲಿಯಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳಲ್ಲು ಸಹ ಪೂಜ್ಯನೀಯ ಸ್ಥಾನವನ್ನು ಪಡೆದು, ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪರಿಗಣಿಸಲ್ಪಡುತ್ತಿದೆ. ವೇದ ಕಾಲದ ಋಷಿ ಮುನಿಗಳಿಗೆ ಇದರ ಪ್ರಯೋಜನಗಳು ಚೆನ್ನಾಗಿ ತಿಳಿದಿದ್ದವು. ಆದ್ದರಿಂದಲೇ ಅವರು ಇದಕ್ಕೆ ಮಾತೃ ಸ್ಥಾನವನ್ನು ನೀಡಿ, ಪ್ರತಿಯೊಬ್ಬರ ಮನೆಯಲ್ಲಿ ಇದನ್ನು ಬೆಳೆಯಬೇಕೆಂಬ ಸಂದೇಶವನ್ನು ರವಾನಿಸಿದರು. ಇದನ್ನು ನಾವು ಮನೆಯಲ್ಲಿ ಬೆಳೆಸುವ ಮೂಲಕ ಈ ಸಸ್ಯವನ್ನು ನಾವು ಸಂರಕ್ಷಿಸುತ್ತಿದ್ದೇವೆ, ಏಕೆಂದರೆ ಇದು ಮನುಕುಲದ ಸಂಜೀವಿನಿ ಎಂಬ ಕಾರಣಕ್ಕಾಗಿ. ತುಳಸಿಯಲ್ಲಿ ಔಷಧೀಯ ಗುಣಗಳ ಆಗರವೇ ಅಡಗಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಇದೊಂದು ಅದ್ಭುತವಾದ ಆಂಟಿ ಬಯೋಟಿಕ್. ಪ್ರತಿದಿನ ಚಹಾ ಜೊತೆಗೆ ತುಳಸಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಹಾಗು ಕುಡಿಯುವವರಿಗೆ ರೋಗಗಳು ಕಾಡುವ ಅಪಾಯವಿರುವುದಿಲ್ಲ. ಆತನ ಆರೋಗ್ಯ ಸ್ಥಿತಿ ಸಮತೋಲನದಲ್ಲಿರುವುದರ ಜೊತೆಗೆ, ಆತನ ಆಯುಸ್ಸು ಸಹ ಹೆಚ್ಚಾಗುತ್ತದೆ. ತುಳಸಿ ಸಸ್ಯಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದ ಮನೆಯೊಳಗೆ ಸೊಳ್ಳೆ ಮುಂತಾದ ಕೀಟಗಳು ಪ್ರವೇಶಿಸುವುದನ್ನು ತಡೆಗಟ್ಟಬಹುದು. ನಂಬಿಕೆಗಳ ಪ್ರಕಾರ ಹಾವುಗಳು ಸಹ ತುಳಸಿ ಗಿಡದ ಬಳಿಗೆ ಹೋಗುವ ಧೈರ್ಯವನ್ನು ಮಾಡುವುದಿಲ್ಲವಂತೆ. ಬಹುಶಃ ಅದಕ್ಕೆ ಇರಬೇಕು ಪ್ರಾಚೀನ ಕಾಲದ ಜನರು ತುಳಸಿಯನ್ನು ತಮ್ಮ ಮನೆಯ ಸಮೀಪದಲ್ಲಿ ಬೆಳೆಸುತ್ತಿದ್ದುದು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಶ್ರೀ ತುಲಸೀ ಅಷ್ಟೋತ್ತರ ಶತನಾಮಾವಳಿ
1. ಓಂ ಹ್ರೀಂ ತುಲಸೀದೇವ್ಯೈ ನಮಃ
2. ಓಂ ಸಖ್ಯೈ ನಮಃ
3. ಓಂ ಭದ್ರಾಯೈ ನಮಃ
4. ಓಂ ಮನೋಜ್ಞಾನ ಪಲ್ಲವಾಯೈ ನಮಃ
5. ಓಂ ಪುರಂದರ ಸತೀಪೂಜ್ಯಾಯೈ ನಮಃ
6. ಓಂ ಪುಣ್ಯದಾಯೈ ನಮಃ
7. ಓಂ ಪುಣ್ಯರೂಪಿಣ್ಯೈ ನಮಃ
8. ಓಂ ಜ್ಞಾನವಿಜ್ಞಾನಜನನ್ಯೈ ನಮಃ
9. ಓಂ ತತ್ವಜ್ಞಾನ ಸ್ವರೂಪಿಣ್ಯೈ ನಮಃ
10. ಓಂ ಜಾನಕೀ ದುಃಖಶಮನ್ಯೈ ನಮಃ
11. ಓಂ ಜನಾರ್ಧನಪ್ರಿಯಾಯೈ ನಮಃ
12. ಓಂ ಸರ್ವಕಲ್ಮಷ ಸಚಿಹರ್ತ್ಯೈ ನಮಃ
13. ಓಂ ಸರ್ವಕೋಟಿ ಸಮಪ್ರಭಾಯೈ ನಮಃ
14. ಓಂ ಗೌರೀ ಶಾರದಾ ಸಂಸೇವಿತಾಯೈ ನಮಃ
15. ಓಂ ವಂದಾರುಜನಮಂದಾರಾಯೈ ನಮಃ
16. ಓಂ ನಿಲಿಂಪಾಭರಣಾಸಕ್ತಾಯೈ ನಮಃ
17. ಓಂ ಲಕ್ಷ್ಮೀಚಂದ್ರ ಸಹೋದರ್ಯೈ ನಮಃ
18. ಓಂ ಸನಕಾದಿ ಮುನಿಧ್ಯೇಯಾಯೈ ನಮಃ
19. ಓಂ ಕೃಷ್ಣಾನಂದ ಜನೀತ್ಯೈ ನಮಃ
20. ಓಂ ಚಿದಾನಂದ ಸ್ವರೂಪಿಣ್ಯೈ ನಮಃ
21. ಓಂ ನಾರಾಯಣ್ಯೈ ನಮಃ
22. ಓಂ ಸತ್ಯರೂಪಾಯೈ ನಮಃ
23. ಓಂ ಮಾಯಾತೀತಾಯೈ ನಮಃ
24. ಓಂ ಮಹೇಶ್ವರ್ಯೈ ನಮಃ
25. ಓಂ ಶುಭಪ್ರದಾಯೈ ನಮಃ
26. ಓಂ ವದನಚ್ಚವಿನಿರ್ಧೂತರಾಕಾಪೂರ್ಣನಿಶಾಕರಾಯೈ ನಮಃ
27. ಓಂ ರೋಚನಾಪಂಕ ತಿಲಕಲಸನ್ನಿಟಲಭಾಸುರಾಯೈ ನಮಃ
28. ಓಂ ಶುದ್ಧಾಯೈ ನಮಃ
29. ಓಂ ಪಲ್ಲವೋಷ್ಟ್ಯೈ ನಮಃ
30. ಓಂ ಪದ್ಮಮುಖ್ಯೈ ನಮಃ
31. ಓಂ ಪುಲ್ಲಪದ್ಮದಳೇಕ್ಷಣಾಯೈ ನಮಃ
32. ಓಂ ಚಾಂಪೇಯಕಲಿಕಾಕಾರನಾಸಾದಮ್ಡವಿರಾಜಿತಾಯೈ ನಮಃ
33. ಓಂ ಮಂದಸ್ಮಿತಾಯೈ ನಮಃ
34. ಓಂ ಮಂಜುಲಾಂಗ್ಯೈ ನಮಃ
35. ಓಂ ಮಾಧವಪ್ರಿಯ ಭಾವಿನ್ಯೈ ನಮಃ
36. ಓಂ ಮಾಣಿಕ್ಯಕಂಕಣಾರಾಯೈ ನಮಃ
37. ಓಂ ಮನಿಕುಂಡಲ ಮಂಡಿತಾಯೈ ನಮಃ
38. ಓಂ ಇಂದ್ರಸಂಪತ್ಕರ್ಯೈ ನಮಃ
39. ಓಂ ಶಕ್ತ್ಯೈ ನಮಃ
40. ಓಂ ಇಂದ್ರಗೋಪನಿಭಾಂಶುಕಾಯೈ ನಮಃ
41. ಓಂ ಇಂದ್ರಗೋಪನಿಭಾಂಶುಕಾಯೈ ನಮಃ
42. ಓಂ ಕ್ಷೀರಸಾಗರ ಸಂಭವಾಯೈ ನಮಃ
43. ಓಂ ಶಾಂತಿಕಾಂತಿಗುಣೋಪೇತಾಯೈ ನಮಃ
44. ಓಂ ಬೃಂದಾಮರಗುಣ ಸಂಪತ್ಯೈ ನಮಃ
45. ಓಂ ಪೂತಾತ್ಮನಾಯೈ ನಮಃ
46. ಓಂ ಪೂತನಾದಿ ಸ್ವರೂಪಿಣ್ಯೈ ನಮಃ
47. ಓಂ ಯೋಗಧ್ಯೇಯಾಯೈ ನಮಃ
48. ಓಂ ಯೋಗಾನಂದ ವಿದಾಯೈ ನಮಃ
49. ಓಂ ಚತುರ್ವರ್ಗ ಪ್ರದಾರಾಮಾಯೈ ನಮಃ
50. ಓಂ ತ್ರಿಲೋಕ ಜನನ್ಯೈ ನಮಃ
51. ಓಂ ಗೃಹಮೇಧಿಸಮಾರಾಧ್ಯಾಯೈ ನಮಃ
52. ಓಂ ಸದನಾಂಗಣಪಾವನಾಯೈ ನಮಃ
53. ಓಂ ಮುನೀಂದ್ರ ಹೃದಯವಾಸಾಯೈ ನಮಃ
54. ಓಂ ಮೂಲಪ್ರಕೃತಿ ಸಂಜ್ಞಿಕಾಯೈ ನಮಃ
55. ಓಂ ಬ್ರಹ್ಮರೂಪಿಣ್ಯೈ ನಮಃ
56. ಓಂ ಪರಂಜ್ಯೋತಿಷೇ ನಮಃ
57. ಓಂ ಅವಾಜ್ಞಾನಸಗೋಚರಾಯೈ ನಮಃ
58. ಓಂ ಪಂಚಭೂತಾತ್ಮಿಕಾಯೈ ನಮಃ
59. ಓಂ ಯೋಗಾಚ್ಯುತಾಯೈ ನಮಃ
60. ಓಂ ಯಜ್ಞರೂಪಿಣ್ಯೈ ನಮಃ
61. ಓಂ ಸಂಸಾರದುಃಖಶಮನ್ಯೈ ನಮಃ
62. ಓಂ ಸೃಷ್ಟಿಸ್ಥಿತ್ಯಂತರಕಾರಿಣ್ಯೈ ನಮಃ
63. ಓಂ ಸರ್ವಪ್ರಪಂಚನಿರ್ಮಾತ್ರ್ಯೈ ನಮಃ
64. ಓಂ ವೈಷ್ಣವ್ಯೈ ನಮಃ
65. ಓಂ ಮಧುರಸ್ವರಾಯೈ ನಮಃ
66. ಓಂ ನಿರೀಶ್ವರಾಯೈ ನಮಃ
67. ಓಂ ನಿರ್ಗುಣಾಯೈ ನಮಃ
68. ಓಂ ನಿತ್ಯಾಯೈ ನಮಃ
69. ಓಂ ನಿರಾತಂಕಾಯೈ ನಮಃ
70. ಓಂ ದೀನಜನಪಾಲನತತ್ಪರಾಯೈ ನಮಃ
71. ಓಂ ಕ್ವಣತ್ಮಿಂಕಿಣಿಕಾಜಾಲರತ್ನಕಾಂಚೀಲಸತ್ಕಜ್ಯೈ ನಮಃ
72. ಓಂ ಚಲನ್ಮಂಜೀರಚರಣಾಯೈ ನಮಃ
73. ಓಂ ಚತುರಾವಲಿಸೇವಿತಾಯ್ತೈ ನಮಃ
74. ಓಂ ಅಹೋರಾತ್ರಕಾರಿಣ್ಯೈ ನಮಃ
75. ಓಂ ಯುಕ್ತಾಹಾರಭರಾಕ್ರಾಂತಾಯೈ ನಮಃ
76. ಓಂ ಮುದ್ರಿಕಾರತ್ನಭಾಸುರಾಯೈ ನಮಃ
77. ಓಂ ಸಿದ್ಧಪ್ರದಾಯೈ ನಮಃ
78. ಓಂ ಅಮಲಾಯೈ ನಮಃ
79. ಓಂ ಕಮಲಾಯೈ ನಮಃ
80. ಓಂ ಲೋಕಸುಂದರ್ಯೈ ನಮಃ
81. ಓಂ ಹೇಮಕುಂಭಕುಚಧ್ವಯಾಯೈ ನಮಃ
82. ಓಂ ಲಸಿತಕುಂಭಕುಚದ್ವಯೈ ನಮಃ
83. ಓಂ ಚಂಚಲಾಯೈ ನಮಃ
84. ಓಂ ಲಕ್ಷ್ಮ್ಯೈ ನಮಃ
85. ಓಂ ಶಂಕರ್ಯೈ ನಮಃ
86. ಓಂ ಶಂಕರ್ಯೈ ನಮಃ
87. ಓಂ ಶಿವಶಂಕರ್ಯೈ ನಮಃ
88. ಓಂ ತುಲಸ್ಯೈ ನಮಃ
89. ಕುಂದಲಕುಟ್ಮಿಲರದನಾಯೈ ನಮಃ
90. ಓಂ ಪಕ್ವಬಿಂಬೋಷ್ಟ್ಯೈ ನಮಃ
91. ಓಂ ಶರಶ್ಚಂದ್ರಿಕಾಯೈ ನಮಃ
92. ಓಂ ಚಾಂಪೇಯನಾಸಿಕಾಯೈ ನಮಃ
93. ಓಂ ಕಂಬುಸುಂದರಗಳಾಯೈ ನಮಃ
94. ಓಂ ತಟಿಲ್ಲತಾಂಗ್ಯೈ ನಮಃ
95. ಓಂ ಮತ್ತಬಂಭರಕುಂತಲಾಯೈ ನಮಃ
96. ಓಂ ನಕ್ಷತ್ರನಿಭನಖಾಯೈ ನಮಃ
97. ಓಂ ರಂಭಾನಿಭೋರುಯುಗ್ಮಾಯೈ ನಮಃ
98. ಓಂ ಸೈಕತಶ್ರೋಣ್ಯೈ ನಮಃ
99. ಓಂ ಮಂದಕಂಠೀರವಮಧ್ಯೈ ನಮಃ
100 ಓಂ ಕೀರವಾಣ್ಯೈ ನಮಃ
101. ಓಂ ಶ್ರೀ ಮಹಾತುಲಸ್ಯೈ ನಮಃ
ಇತಿ ಶ್ರೀ ತುಲಸೀ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ.