ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಬಿಎಂಟಿಸಿಯಿಂದ ಹೊಸದಾಗಿ ಮಾರ್ಗವೊಂದರಲ್ಲಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ.
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ: 18.11.2024 ರಿಂದ ಜಾರಿಗೆ ಬರುವಂತೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಯಲಹಂಕ, ದೇವನಹಳ್ಳಿ, ಬ್ಯಾಡರಹಳ್ಳಿ ಮಾರ್ಗವಾಗಿ ಮಾಯಸಂದ್ರ ಗ್ರಾಮಕ್ಕೆ ಸುತ್ತುವಳಿಗಳನ್ನು ಒದಗಿಸಿದ್ದು, ವಿವರ ಕೆಳಕಂಡಂತಿದೆ :
ಎಲ್ಲಿಂದ | ಎಲ್ಲಿಗೆ | ಮಾರ್ಗ |
ಕೆಂಪೇಗೌಡ ಬಸ್ ನಿಲ್ದಾಣ
(0555, 1630) |
ಮಾಯಸಂದ್ರ
(0800, 1915) |
ಹೆಬ್ಬಾಳ, ಯಲಹಂಕ, ದೇವನಹಳ್ಳಿ, ಬ್ಯಾಡರಹಳ್ಳಿ |
ರಸ್ತೆ ಮೇಲೆ ವ್ಯಾಪಾರ ನಡೆಸಲು ಯಾರಿಗೂ ಅವಕಾಶ ನೀಡುವುದಿಲ್ಲ: ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್
‘KSET ಅರ್ಹತಾ ಪರೀಕ್ಷೆ’ಗೆ ಪ್ರಶ್ನೆ ಪತ್ರಿಕೆಯನ್ನು ಕನ್ನಡದಲ್ಲೇ ನೀಡಿ: KEAಗೆ ಡಾ.ಪುರುಷೋತ್ತಮ ಬಿಳಿಮಲೆ ಸೂಚನೆ