ದರ್ಭಾಂಗ : ದರ್ಭಾಂಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾದ ಮುಟ್ಟಲು ಪ್ರಯತ್ನಿಸಿದಾಗ ಎಲ್ಲರಿಗೂ ಆಶ್ಚರ್ಯವಾಯಿತು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, 73 ವರ್ಷದ ನಿತೀಶ್ ಕುಮಾರ್ ಅವರು 74 ವರ್ಷದ ಪ್ರಧಾನಿ ಮೋದಿಯವರ ಕಡೆಗೆ ಬಂದು ಕಾಲು ಮುಟ್ಟಲು ಮುಂದಾಗುವುದನ್ನ ಕಾಣಬಹುದು.
ಆದಾಗ್ಯೂ, ಪ್ರಧಾನಿ ಮೋದಿ ಅವರು ಜೆಡಿಯು ನಾಯಕನನ್ನು ಅವರ ಪಾದಗಳನ್ನ ಮುಟ್ಟದಂತೆ ತ್ವರಿತವಾಗಿ ತಡೆದಿದ್ದು, ಅವರ ಕೈಕುಲುಕುವುದನ್ನು ಕಾಣಬಹುದು. ಇದೇ ಕಾರ್ಯಕ್ರಮದಿಂದ ವೈರಲ್ ಆಗಿರುವ ಮತ್ತೊಂದು ವೀಡಿಯೊದಲ್ಲಿ ಪಕ್ಷದ ಕಾರ್ಯಕರ್ತರು ಪ್ರಧಾನಿಗೆ ಹೂಮಾಲೆ ಹಾಕುತ್ತಿದ್ದಂತೆ ಮೋದಿ ನಿತೀಶ್ ಕುಮಾರ್ ಅವರನ್ನ ತಮ್ಮ ಪಕ್ಕಕ್ಕೆ ಎಳೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ.
🚨 BIG! Bihar CM Nitish Kumar once again tries to touch PM Modi's feet 💖
– Modi ❤️ Nitish bond is getting stronger & stronger…! pic.twitter.com/dhrxqm3Ecz
— Megh Updates 🚨™ (@MeghUpdates) November 13, 2024
ಆದರೆ, ನಿತೀಶ್ ಕುಮಾರ್ ಈ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲ. ಜೂನ್ನಲ್ಲಿ ನಿತೀಶ್ ಕುಮಾರ್ ಅವರು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಮೋದಿಯವರ ಪಾದಗಳನ್ನ ಮುಟ್ಟಲು ಪ್ರಯತ್ನಿಸಿದಾಗ ಹಾಜರಿದ್ದ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದ್ದರು. ಈ ವರ್ಷದ ಏಪ್ರಿಲ್ನಲ್ಲಿ ನವಾಡಾದಲ್ಲಿ ನಡೆದ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ಅವರು ಪ್ರಧಾನಿ ಮೋದಿಯವರ ಪಾದಗಳನ್ನ ಮುಟ್ಟಿ ನಮಸ್ಕರಿಸಿದ್ದರು.
‘ಬಂಡೀಪುರ ಅರಣ್ಯ ಪ್ರದೇಶ’ದಲ್ಲಿ ‘ರಾತ್ರಿ ವೇಳೆ ವಾಹನಗಳ ನಿಷೇಧ’ ತೆಗೆಯಬಾರದು: ವಾಟಾಳ್ ನಾಗರಾಜ್ ಆಗ್ರಹ