ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಬೇಕಿರುವವರು ಆಧಾರ್ ಹೊಂದಿಲ್ಲದಿದ್ದರೆ, ಅಂತಹವರು ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಹೋಗಿ ಕೆಳಗಿನ ದಾಖಲಾತಿ ನೀಡುವ ಮೂಲಕ ಇ-ಖಾತಾ ಪಡೆಯಬಹುದು.
* ಪಾಸ್ಪೋರ್ಟ್ ಅಥವಾ
* ಚಾಲನಾ ಪರವಾನಗಿ ಅಥವಾ
* ಮತದಾರರ ಗುರುತಿನ ಚೀಟಿ
ಇದು ಪ್ರಸ್ತುತ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಇ-ಖಾತಾವನ್ನು ಪಡೆಯಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಇ-ಖಾತಾ ಪಡೆಯಲು ಇತರೆ ದಾಖಲೆಗಳು:
(1) ನೋಂದಾಯಿತ ಪ್ರಮಾಣ ಪತ್ರ ಸಂಖ್ಯೆ
(2) ಆಸ್ತಿ ತೆರಿಗೆ SAS ಸಂಖ್ಯೆ
(3) ಬೆಸ್ಕಾಂ 10 ಅಂಕಿಯ ಖಾತೆ ಸಂಖ್ಯೆ (ಖಾಲಿ ಪ್ಲಾಟ್ಗಳಿಗೆ ಐಚ್ಛಿಕ)
ಉಳಿದೆಲ್ಲದರಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ.