ದಾವಣಗೆರೆ: ಹಿಂದೆ ಮತಾಂತ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡಿದ್ದೀರಿ. ಈಗ ಮತ್ತೆ ಬೆಂಕಿ ಹಚ್ಚಲು ಸ್ವತಃ ನೀವೇ ಮುಂದಾಗಿದ್ದೀರಿ. ಓಲೈಕೆ ರಾಜಕಾರಣ ಮಾಡಲು ಇತಿಮಿತಿ ಇರಬೇಕು. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ ಜೋಕೆ ಎಂಬುದಾಗಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.
ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ವಕ್ಪ್ ಬೋರ್ಡ್ ಮೂಲಕ ರಾಜ್ಯದ ಹಿಂದೂಗಳ ಆಸ್ತಿ ಕಬಳಿಸಲು ಯತ್ನಿಸಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಸಿವಿಲ್ ಕಾಮಗಾರಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ 4 ರಷ್ಟು ಮೀಸಲಾತಿ ನೀಡಲು ಹೊರಟಿರುವುದು ತುಷ್ಟೀಕರಣದ ಪರಾಕಾಷ್ಠೆ ಎಂಬುದಾಗಿ ಗುಡುಗಿದ್ದಾರೆ.
ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ಕೊಡಬೇಕು ಎಂದು CM ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಮುಸ್ಲಿಂ ಶಾಸಕರು ಆಗಸ್ಟ್ 24, 2024 ರಂದು ತಮಗೆ ಪತ್ರ ಬರೆಯುತ್ತಾರೆ. ಅದೇ ದಿನವೇ ಈ ಪತ್ರವನ್ನ ಪರಿಶೀಲಿಸಿ ಮಂಡಿಸಿ ಎಂದು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಿದ್ದೀರಿ. ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರಲೂ ಸಹ ತಾವು ಅನುಮೋದನೆ ನೀಡಿದ್ದೀರಿ ಎಂದಿದ್ದಾರೆ.
ಇಷ್ಟೆಲ್ಲಾ ಪತ್ರ ವ್ಯವಹಾರ ನಡೆದಿದ್ದರೂ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಹಸಿ ಸುಳ್ಳು ಹೇಳುತ್ತಿರಲ್ಲ, ತಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ, ನೈತಿಕತೆ ಅನ್ನುವುದೇ ಇಲ್ಲವೇ? ಮುಖ್ಯ ಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಾಗಲಿ ಅಥವಾ ಅವರ ವೈಯುಕ್ತಿಕ ಟ್ವಿಟ್ಟರ್ ಖಾತೆಯಲ್ಲಾಗಲಿ ಇದರ ಕುರಿತು ಯಾವುದೇ ಸ್ಪಷ್ಟೀಕರಣ ಇಲ್ಲ ಎಂದು ಕಿಡಿಕಾರಿದ್ದಾರೆ.
ಸಿದ್ಧರಾಮಯ್ಯನವರೇ ಮುಖ್ಯಮಂತ್ರಿಗಳ ಕಚೇರಿ ಹಾಗೂ ಅಲ್ಲಿ ಕಾರ್ಯನಿರ್ವಾಹಿಸುವ ಸಿಬ್ಬಂದಿಗಳಿಗೆ ಒಂದಿಷ್ಟು ಘನತೆ ಗೌರವ ಇಟ್ಟುಕೊಂಡು ಕೆಲಸ ಮಾಡಲು
ಹೇಳಿ.ಸ್ವತಃ ನೀವೇ ಅವರಿಗೆ ಮಾರ್ಗದರ್ಶನ ಮಾಡಿದರೆ ಒಳಿತು.! ಏಕೆಂದರೆ, ಇದೇ ರೀತಿ ನಿಮ್ಮ ಸಿಬ್ಬಂದಿಯವರು ಮಾಧ್ಯಮದವರನ್ನು ಹಲವಾರು ಬಾರಿ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಸರೋದ್ ಮಾಂತ್ರಿಕ ದಿವಂಗತ ಪಂಡಿತ್ ತಾರಾನಾಥರಿಗೆ ಬರಬೇಕಾದ ಸಂಭಾವನೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಪರ್ಸಂಟೇಜ್ ಕೇಳಿದ್ದು ಎಂದು ನೆನಪಿಸಿದ್ದಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಬಾದ್ ಎಂದು ಕೂಗಿದ್ದರೂ ಇಲ್ಲ ಎಂದು ಮತ್ತೊಂದು ಸುಳ್ಳು ಹಬ್ಬಿಸಿದ್ದು. ಹಿರಿಯ ಐ.ಎ.ಎಸ್ ಅಧಿಕಾರಿಗಳು ನೀಡಬೇಕಾಗಿರುವ ಸ್ಪಷ್ಟೀಕರಣವನ್ನು ಯಾವುದೊ ವಾಟ್ಸ್ ಆಪ್ ಗುಂಪಿನಲ್ಲಿ ನೌಕರನೊಬ್ಬ ಕೊಡುತ್ತಾನೆ. ಆಡಳಿತಾತ್ಮಕ ವೈಫಲ್ಯ ಯಾವ ಮಟ್ಟಿಗೆ ಆಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂಬುದಾಗಿ ತೆರೆದಿಟ್ಟಿದ್ದಾರೆ.
ರಾಜ್ಯ ಸರ್ಕಾರದ fact check unit ಗೆ ಈ ಬಗ್ಗೆ ಮಾಹಿತಿ ಇಲ್ಲವೇ ? ಇದರ ಉಸ್ತುವಾರಿ ಹಾಗೂ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಇದರ ಬಗ್ಗೆ ಮಾಹಿತಿ ಇಲ್ಲವೇ. ತಮ್ಮ ಫ್ಯಾಕ್ಟ್ ಚೆಕ್ ಯೂನಿಟ್ ಮುಖ್ಯ ಮಂತ್ರಿಗಳ ಮಾಧ್ಯಮ ಗುಂಪಿನಿಂದಲೇ ಸೋರಿಕೆಯಾದ ಈ ಸುದ್ದಿಯ ಬಗ್ಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಒಂದೊಂದು ಸತ್ಯ. ಅಪ್ಪಿತಪ್ಪಿಯೂ ಇಂತಹ ದುಸ್ಸಾಹಸಕ್ಕೆ ಏನಾದರೂ ನೀವು ಕೈ ಹಾಕಿದರೆ, ಇಡೀ ಹಿಂದೂ ಸಮುದಾಯ ನಿಮ್ಮ ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿ ಬೀಳಲಿದೆ ಎಂಬುದನ್ನು ಮರೆಯಬೇಡಿ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂಬುದಾಗಿ ಗುಡುಗಿದ್ದಾರೆ.