ಬಳ್ಳಾರಿ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 33/11ಕೆ.ವಿ ಎಮ್ಮಿಗನೂರು ಉಪ-ಕೇಂದ್ರದ ಎಫ್-3 ಎಮ್ಮಿಗನೂರು ಎನ್.ಜೆ.ವೈ ಮತ್ತು ಎಫ್-4 ಮುದ್ದಾಪುರ ಐ.ಪಿ ಕೃಷಿ ಮಾರ್ಗಗಳ ಭಾರವನ್ನು ನೂತನವಾಗಿ ನಿರ್ಮಿಸಿರುವ 110/11ಕೆ.ವಿ ಎಮ್ಮಿಗನೂರು ಉಪ-ಕೇಂದ್ರದ ಮೇಲೆ ವರ್ಗಾಯಿಸುವ ಕಾಮಗಾರಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ನ.14 ರಂದು ಬೆಳಿಗ್ಗೆ 09 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಎಫ್-1 ಗುತ್ತಿಗನೂರು ಐಪಿ ಮಾರ್ಗದ ಗುತ್ತಿಗನೂರು, ರ‍್ವಾಯಿ, ಎಮ್ಮಿಗನೂರು ಕೃಷಿ ಪ್ರದೇಶಗಳು. ಎಫ್-2 ಸೋಮಲಾಪುರ ಐಪಿ ಮಾರ್ಗದ ಎಮ್ಮಿಗನೂರು, ಸೋಮಲಾಪುರ, ತಿಮ್ಮನಕೆರೆ, ತಾತರಾಜ್ ಕ್ಯಾಂಪ್, ಬ್ರಹ್ಮಿಣಿ ಕ್ಯಾಂಪ್ ಕೃಷಿ ಪ್ರದೇಶಗಳು.
ಎಫ್-6 ಎಮ್ಮಿಗನೂರು ನಗರ ಮಾರ್ಗದ ಎಮ್ಮಿಗನೂರು, ತಿಮ್ಮನಕೆರೆ, ರ‍್ವಾಯಿ, ಗುತ್ತಿಗನೂರು, ಪಟ್ಟಣಸೆರಗು, ರಾಮಚಂದ್ರಪುರ ಕ್ಯಾಂಪ್. ಎಫ್-3 ಓರ್ವಾಯಿ ಎನ್‌ಜೆವೈ ಮಾರ್ಗದ ರ‍್ವಾಯಿ, ಗುತ್ತಿಗನೂರು, ಪಟ್ಟಣ ಸೆರಗು ಗ್ರಾಮಗಳು.
ಎಫ್-04 ಮುದ್ದಾಪುರ ಐಪಿ ಮಾರ್ಗದ ಬಾಳಾಪುರ ಮತ್ತು ಮುದ್ದಾಪುರ ಕೃಷಿ ಪ್ರದೇಶಗಳು. ಎಫ್-11 ನೆಲ್ಲುಡಿ ಎನ್‌ಜೆವೈ ಮಾರ್ಗದ ಹೊಸ ನೆಲ್ಲುಡಿ, ಹಳೆ ನೆಲ್ಲುಡಿ, ಬಾಳಾಪುರ, ಮೆಹೆಬೂಬ್‌ನಗರ, ಕೊಟ್ಟಾಲ್, ಶಾಂತಿನಗರ, ಶಂಕರ್ ಸಿಂಗ್ ಕ್ಯಾಂಪ್, ಸುಬ್ಬರಾವ್ ಕ್ಯಾಂಪ್ ಗ್ರಾಮಗಳು.
ಎಫ್-10 ಶಾಂತಿನಗರ ಐಪಿ ಮಾರ್ಗದ ಹೊಸ ನೆಲ್ಲುಡಿ, ಹಳೆ ನೆಲ್ಲುಡಿ, ಬಾಳಾಪುರ, ಮೆಹೆಬೂಬ್‌ನಗರ, ಕೊಟ್ಟಾಲ್, ಶಾಂತಿನಗರ, ಶಂಕರ್ ಸಿಂಗ್ ಕ್ಯಾಂಪ್, ಸುಬ್ಬರಾವ್ ಕ್ಯಾಂಪ್ ಕೃಷಿ ಪ್ರದೇಶಗಳು ಸೇರಿದಂತೆ ಇನ್ನೂ ಮುಂತಾದ ಕಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊದಲ ‘ಮಹಿಳಾ ಸಿಐಎಸ್ಎಫ್ ಬೆಟಾಲಿಯನ್’ ರಚನೆಗೆ ಮೋದಿ ಸರ್ಕಾರ ಅನುಮೋದನೆ | Women CISF Battalion
ಸಾಗರದ ಪೊಲೀಸ್ ಕಾನ್ಸ್ ಸ್ಟೇಬಲ್ ಲೋಕೇಶ್ ಪುತ್ರಿ ‘ಪ್ರೇಕ್ಷಾ ಎಲ್ ಗೌಡ’ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ