ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕೆರೆ ಹಾಡಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಲ್ಲಿಯ ನಿವಾಸಿಗಳ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಅವರ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.
ಈ ಬಗ್ಗೆ ಎಕ್ಸ್ ನಲ್ಲಿ ವೀಡಿಯೋ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಸಿಎಂ ಸಿದ್ಧರಾಮಯ್ಯ ಅವರು, ಈ ದೇಶದ ಆದಿವಾಸಿ ಸಮುದಾಯಗಳ ಬದುಕು, ಕಲೆ, ಆಚರಣೆಗಳು ತಮ್ಮ ಸುತ್ತಲಿನ ಪರಿಸರದೊಂದಿಗೆ ಮಿಳಿತಗೊಂಡಿವೆ. ಸುತ್ತಲಿನ ಪ್ರಕೃತಿ, ಪರಿಸರದ ದನಿ ಎಂಬಂತೆ ಅವರ ಹಾಡುಗಳಿವೆ, ಒಮ್ಮೆ ಕೇಳಿದರೆ ಗುನುಗುನಿಸುತ್ತಲೇ ಇರಬೇಕೆನ್ನುವ ಸಹಜ ಸಂಗೀತ-ಲಾಲಿತ್ಯವಿದೆ ಎಂದಿದ್ದಾರೆ.
ಇಂದು ಎಚ್ ಡಿ ಕೋಟೆಯ ಕೆರೆಹಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಡಿಯ ನಿವಾಸಿಗಳು ಪ್ರದರ್ಶಿಸಿದ ಅಂತಹದ್ದೇ ಒಂದು ಹಾಡಿಗೆ ತಲೆದೂಗುತ್ತಾ ಹೆಜ್ಜೆ ಹಾಕಿದೆ ಎಂದು ಹೇಳಿಕೊಂಡಿದ್ದಾರೆ.
ಈ ದೇಶದ ಆದಿವಾಸಿ ಸಮುದಾಯಗಳ ಬದುಕು, ಕಲೆ, ಆಚರಣೆಗಳು ತಮ್ಮ ಸುತ್ತಲಿನ ಪರಿಸರದೊಂದಿಗೆ ಮಿಳಿತಗೊಂಡಿವೆ. ಸುತ್ತಲಿನ ಪ್ರಕೃತಿ, ಪರಿಸರದ ದನಿ ಎಂಬಂತೆ ಅವರ ಹಾಡುಗಳಿವೆ, ಒಮ್ಮೆ ಕೇಳಿದರೆ ಗುನುಗುನಿಸುತ್ತಲೇ ಇರಬೇಕೆನ್ನುವ ಸಹಜ ಸಂಗೀತ-ಲಾಲಿತ್ಯವಿದೆ.
ಇಂದು ಎಚ್ ಡಿ ಕೋಟೆಯ ಕೆರೆಹಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಡಿಯ ನಿವಾಸಿಗಳು… pic.twitter.com/FyeKfCOV0b
— Siddaramaiah (@siddaramaiah) November 12, 2024
ಮೊದಲ ‘ಮಹಿಳಾ ಸಿಐಎಸ್ಎಫ್ ಬೆಟಾಲಿಯನ್’ ರಚನೆಗೆ ಮೋದಿ ಸರ್ಕಾರ ಅನುಮೋದನೆ | Women CISF Battalion
BIG NEWS : ಬೆಂಗಳೂರಲ್ಲಿ ಪೋಲೀಸರ ಭರ್ಜರಿ ಕಾರ್ಯಾಚರಣೆ : 1 ತಿಂಗಳಲ್ಲಿ 140 ಕೆಜಿ ಗಾಂಜಾ ಜಪ್ತಿ, 64 ಜನ ಅರೆಸ್ಟ್!