ಬೆಂಗಳೂರು: ಭಾರತೀಯ ಅಂಚೆ ಇಲಾಖೆಯು ರಾಜ್ಯ ಸರ್ಕಾರದ ಖಜಾನೆಯೊಂದಿಗೆ ಕರ್ನಾಟಕ ರಾಜ್ಯ ಸರ್ಕಾರದ ಪಿಂಚಣಿದಾರರಿಗೆ/ಕುಟುಂಬ ಪಿಂಚಣಿದಾರರು ವೈಯಕ್ತಿಕವಾಗಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವ ಸಮಯದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ತಪ್ಪಿಸಲು ಭಾರತೀಯ ಅಂಚೆ ಇಲಾಖೆಯು “ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್”, ಪಿಂಚಣಿದಾರರ ಮನೆಬಾಗಿಲಿನಲ್ಲಿ ಡಿಜಿಟಲ್ ಲೈಫ್ ಪ್ರಮಾಣ ಪತ್ರವನ್ನು ಸಲ್ಲಿಸುವ ವ್ಯವಸ್ಥೆಯನ್ನು ಮಾಡಿದೆ.
ಪಿಂಚಣಿದಾರರು ತಮ್ಮ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಕೆಲವೇ ನಿಮಿಷಗಳಲ್ಲಿ ಪೋಸ್ಟ್ಮನ್ ಮೂಲಕ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಓ ಸಂಖ್ಯೆ ಮತ್ತು ಪಿಂಚಣಿದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಮ್ಮ ಬಯೋಮೆಟ್ರಿಕ್ (ಬೆರಳಚ್ಚು) ವೆರಿಫೈ ಮಾಡಿ ಸಲ್ಲಿಸಬಹುದಾಗಿದೆ. ತಮ್ಮಲ್ಲಿರುವ ಮೊಬೈಲ್ ಮುಖಾಂತರ ಜೀವನ ಪ್ರಮಾಣ ಪತ್ರ ಮಾಡಿ ಕೊಡುವ ವ್ಯವಸ್ಥೆಯಲ್ಲಿ ಯಾವುದೆ ಕಾಗದ ಪತ್ರವನ್ನು ಕೊಡಬೇಕಾಗಿಲ್ಲ. ಡಿಜಿಟಲ್ ಜೀವನ ಪ್ರಮಾಣ ಪತ್ರವು ಪಿಂಚಣಿ ಪಡೆಯುವ ಕಚೇರಿಗೆ ತಂತ್ರಾಂಶ ಮೂಲಕ ರವಾನೆಯಾಗುವುದು ಹಾಗೂ ಮೊಬೈಲ್ ಗೆ ಇದರ ವಿವರ ಸಂದೇಶದ ಮೂಲಕ ಬರುತ್ತದೆ.
ಕರ್ನಾಟಕ ಸರ್ಕಾರದ ಪಿಂಚಣಿದಾರರು/ಕುಟುಂಬ ಪಿಂಚಣಿದಾರರು ತಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಅಥವಾ ಪೋಸ್ಟ್ಮನ್ ಮೂಲಕ ಕೇವಲ ರೂ. 70/- (ಜಿಎಸ್‌ಟಿ ಸೇರಿದಂತೆ) ಶುಲ್ಕನೀಡಿ ಈ ಸೌಲಭ್ಯವನ್ನು ಪಡೆದು ತಮ್ಮ ಡಿಜಿಟಲ್ ಲೈಪ್ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಅಂಚೆ ಇಲಾಖಾ ಕಚೇರಿಯ ಸೂಪರಿಟೆಂಡೆಂಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮಾಹಿತಿಗಾಗಿ ಹತ್ತಿರದ ವಿಭಾಗೀಯ ಕಚೇರಿಯನ್ನು ಅಥವಾ ಇಮೇಲ್ doshimoga.ka@indiapost.gov.in ಮೂಲಕ ಸಂಪರ್ಕಿಸಬಹುದಾಗಿದೆ.
ಚುನಾವಣಾ ಪ್ರಚಾರಕ್ಕೂ ಜೈ, ‘ಬೋಂಡಾ ಮಾಡೋದಕ್ಕೆ ಸೈ’ ಎಂದ ‘ಎಂ.ಪಿ ರೇಣುಕಾಚಾರ್ಯ’
BREAKING : ನಾನು ಅತ್ಯಾಚಾರ ಮಾಡಿದ್ರೆ ರಕ್ತ ಕಾರಿ ಸಾಯುತ್ತೇನೆ : ಬಿಜೆಪಿ ಶಾಸಕ ಮುನಿರತ್ನ ಹೇಳಿಕೆ