ಬೆಂಗಳೂರು: ನಾಡಿನ ಮಹಿಳೆಯರ ಬಗ್ಗೆ ಸ್ವಲ್ಪವಾದರೂ ಗೌರವವಿದ್ದರೆ, ಸಾರ್ವಜನಿಕ ಲಜ್ಜೆಯನ್ನು ಮೈಗೂಡಿಸಿಕೊಂಡಿದ್ದರೆ ಬಿಜೆಪಿ ಪೊಕ್ಸೋದಂತಹ ಗಂಭೀರ ಆರೋಪ ಎದುರಿಸುತ್ತಿರುವ ಯಡಿಯೂರಪ್ಪನವರನ್ನು ಯಾವುದೇ ವೇದಿಕೆ ಹತ್ತಿಸದೆ ತನ್ನ ನೈತಿಕತೆ ಪ್ರದರ್ಶಿಸಲಿ ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಅತ್ಯಾಚಾರ, ಅನಾಚಾರವನ್ನು ಸಮರ್ಥಿಸುವುದು, ಬೆಂಬಲಿಸುವುದು, ಅತ್ಯಾಚಾರಿಗಳನ್ನು ತಲೆ ಮೇಲೆ ಹೊತ್ತು ಮೆರೆಸುವುದು ಬಿಜೆಪಿಗೆ ಅತ್ಯಂತ ಪ್ರಿಯವಾದ ಕೆಲಸ. ಬಿಜೆಪಿಯವರಿಗೆ ರಾಮನ ಹೆಸರು ಹೇಳುವುದಕ್ಕೆ ಮಿನಿಮಮ್ ಯೋಗ್ಯತೆ ಇಲ್ಲ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಬಿಜೆಪಿಯವರ ಬಾಯಲ್ಲಿ ಮಾತ್ರ ರಾಮ, ಮನದಲ್ಲಿ ಕೀಚಕ, ದುಷ್ಯಾಸನರ ಆರಾಧನೆ ಎಂದಿದ್ದಾರೆ.
ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ಹೂ ಹಾರ ಹಾಕಿ ಸನ್ಮಾನಿಸಿದ್ದರು, ಉತ್ತರ ಪದೇಶ, ಕಾಶ್ಮೀರದಲ್ಲಿ ಅತ್ಯಾಚಾರಿಗಳ ಮೆರವಣಿಗೆಯನ್ನೇ ನಡೆಸಿದ್ದರು. ಈಗ “ಯುಪಿ ಮಾಡೆಲ್“ನ್ನು ಯಶಸ್ವಿಯಾಗಿ ಕರ್ನಾಟಕದಲ್ಲಿ ಪಾಲನೆ ಮಾಡುತ್ತಿದೆ, ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಬಗ್ಗೆ ಪೊಕ್ಸೋ ಪ್ರಕರಣ ದಾಖಲಾಗಿ, ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದರೂ ಮಾನ್ಯ ಯಡಿಯೂರಪ್ಪನವರನ್ನು ಚುನಾವಣಾ ಪ್ರಚಾರದ ವೇದಿಕೆ ಹತ್ತಿಸಿದೆ ಎಂದು ಕಿಡಿಕಾರಿದ್ದಾರೆ.
ಪೊಕ್ಸೋ ಆರೋಪಿ ಶ್ರೀ ಯಡಿಯೂರಪ್ಪನವರನ್ನು ಚುನಾವಣಾ ಪ್ರಚಾರದ ವೇದಿಕೆ ಹತ್ತಿಸಿರುವ ಬಿಜೆಪಿ ಕರ್ನಾಟಕದ ಜನತೆಗೆ ಯಾವ ಸಂದೇಶ ನೀಡಲು ಹೊರಟಿದೆ? ಬಿಜೆಪಿಗೆ ಮತ ಹಾಕಿದರೆ ಅತ್ಯಾಚಾರ ಉಚಿತ, ದೌರ್ಜನ್ಯ ಖಚಿತ ಎಂಬ ಸಂದೇಶ ನೀಡುತ್ತಿದ್ದೀರಾ ಬಿಜೆಪಿ ಎಂದು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪನವರನ್ನು ಯಾವುದೇ ವೇದಿಕೆ ಹತ್ತಿಸಬಾರದು ಎಂದು ಯತ್ನಾಳ್ ಅವರೇ ಹೇಳಿದ್ದರು, ಆದರೂ ಸ್ವಪಕ್ಷದವರ ಅಭಿಪ್ರಾಯಕ್ಕೆ ಕಿಂಚಿತ್ತೂ ಮನ್ನಣೆ ನೀಡದ ಬಿಜೆಪಿ ಸುಳ್ಳೇ ತನ್ನ ಧರ್ಮ, ಸ್ತ್ರೀ ಪೀಡನೆಯೇ ತನ್ನ ಸಂಸ್ಕೃತಿ ಎನ್ನುವುದನ್ನು ಸಾಭೀತು ಮಾಡಿದೆ ಎಂದಿದ್ದಾರೆ.
ಅತ್ಯಾಚಾರ, ಅನಾಚಾರವನ್ನು ಸಮರ್ಥಿಸುವುದು, ಬೆಂಬಲಿಸುವುದು, ಅತ್ಯಾಚಾರಿಗಳನ್ನು ತಲೆ ಮೇಲೆ ಹೊತ್ತು ಮೆರೆಸುವುದು ಬಿಜೆಪಿಗೆ ಅತ್ಯಂತ ಪ್ರಿಯವಾದ ಕೆಲಸ.
ಬಿಜೆಪಿಯವರಿಗೆ ರಾಮನ ಹೆಸರು ಹೇಳುವುದಕ್ಕೆ ಮಿನಿಮಮ್ ಯೋಗ್ಯತೆ ಇಲ್ಲ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ.
ಬಿಜೆಪಿಯವರ ಬಾಯಲ್ಲಿ ಮಾತ್ರ ರಾಮ, ಮನದಲ್ಲಿ ಕೀಚಕ, ದುಷ್ಯಾಸನರ ಆರಾಧನೆ!… pic.twitter.com/zW4fjjt5hm— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 8, 2024
‘ಸಾಗರ ಟೌನ್’ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ‘ದನ ಕಳ್ಳ’ರ ಬಂಧನ, ಕಾರ್ ಜಪ್ತಿ
ನನ್ನ ಜೀವ ಇರೋವರೆಗೂ ‘ನಟ ದರ್ಶನ್’ ನನ್ನ ಮಗನೇ: ಮಾಜಿ ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ
ಉದ್ಯೋಗ ವಾರ್ತೆ : `ಪವರ್ ಮ್ಯಾನ್’ ಸೇರಿ `KPTCL’ನ 2975 ಹುದ್ದೆಗಳಿಗೆ ಅರ್ಜಿ ಆಹ್ವಾನ | KPTCL Recruitment