ರಾಯಚೂರು: ಜಿಲ್ಲೆಯ ಮಸ್ಕಿ ಕ್ಯಾಂಬ್ ಬಳಿಯಲ್ಲಿರುವಂತ ತುಂಗಭದ್ರಾ ಎಡದಂಡೆ ಕಾಲುವೆಯಲ್ಲೇ ನವಜಾತ ಶಿಶುವೊಂದನ್ನು ಎಸೆದು ಹೋಗಿದ್ದು, ಮೃತದೇಹ ಪತ್ತೆಯಾಗಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಸಾಗರ್ ಕ್ಯಾಂಪ್ ಬಳಿಯಲ್ಲಿರುವಂತ ತುಂಗಭದ್ರಾ ಎಡದಂಡೆಗೆ ನೀರು ಬಿಡಲಾಗಿತ್ತು. ಈಗ ತುಂಗಭದ್ರಾ ಎಡದಂಡೆಯ ನಾಲೆ ತುಂಬಿ ಹರಿಯುತ್ತಿದೆ. ಇಂತಹ ನಾಲೆಗೆ ನವಜಾತ ಶಿಶು ಜನಿಸಿದಂತ ಕೆಲವೇ ಗಂಟೆಯಲ್ಲಿ ಬಿಸಾಕಿ ಹೋಗಿರುವುದಾಗಿ ತಿಳಿದು ಬಂದಿದೆ.
ಈ ನವಜಾತ ಶಿಶುವಿನ ಮೃತದೇಹವನ್ನು ನೋಡಿದಂತ ಪಾದಚಾರಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದಂತ ಪೊಲೀಸರು ಪರಿಶೀಲಿಸಿ, ನವಜಾತ ಶಿಶುವಿನ ಮೃತದೇಹವನ್ನು ಶವಾಗಾರಕ್ಕೆ ಕಳುಹಿಕೊಡಲಾಗಿದೆ. ಈ ಸಂಬಂಧ ಬಳಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಟ ದರ್ಶನ್’ಗೆ ‘ಲೇಜರ್ ಆಪರೇಷನ್’ಗೆ ಸೂಚಿಸಿದ ವೈದ್ಯರು: ದಿನಾಂಕ, ಸಮಯಕ್ಕೆ ‘ಜ್ಯೋತಿಷಿ’ ಮೊರೆ ಹೋದ ಪತ್ನಿ
ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆ ಆರಂಭಿಸಿದ್ದೇ ನಾನು: ಸಂಸದ ಬಸವರಾಜ ಬೊಮ್ಮಾಯಿ