ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಕರ್ನಾಟಕಕ್ಕೆ ಸುವರ್ಣ ಸಂಭ್ರಮದ ಸಲುವಾಗಿ ಇಂದು ರಾತ್ರಿ ವಿದ್ಯಾರ್ಥಿಗಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದರಂತೆ ಸಾಗರ ನಗರದ ಮೆಟ್ರಿಕ್ ನಂತರದ ಬಾಲಕ ವಿದ್ಯಾರ್ಥಿನಿಲಯದ ನಿಲಯಾರ್ಥಿಗಳಿಗೆ ವಿಶೇಷ ಭೋಜನದ ಸವಿಯನ್ನು ನಿಲಯ ಮೇಲ್ವಿಚಾರಕ ಜೈಶೀಲ್.ಬಿ ಉಣಬಡಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ಮೆಟ್ರಿಕ್ ನಂತ್ರದ ಬಾಲಕರ ವಿದ್ಯಾರ್ಥಿನಿಲಯದ ಬಿಸಿಡಬ್ಲ್ಯೂ ಡಿ 2352 ಸಾಗರ ಟೌನ್ ನಲ್ಲಿ ನಿಲಯ ಮೇಲ್ವಿಚಾರಕ ಜೈಶೀಲ್.ಬಿ ಅವರು ರಾಜ್ಯ ಸರ್ಕಾರದ ಆದೇಶದಂತೆ ಇಂದು ರಾತ್ರಿ ವಿದ್ಯಾರ್ಥಿ ನಿಲಯದ ನಿಲಯಾರ್ಥಿಗಳಿಗೆ ವಿಶೇಷ ಭೋಜನದ ನೀಡಿದರು.
ರಾಜ್ಯ ಸರ್ಕಾರದ ಆದೇಶದಂತೆ ನಿಲಯಾರ್ಥಿಗಳಿಗೆ ಮೈಸೂರು ಪಾಕ್, ಹೋಳಿಗೆ, ಫಲಾವು, ವಾಂಗಿಬಾತ್, ಚಪಾತಿ, ಬೀನ್ಸ್ ಪಲ್ಯ, ಕೋಸಂಬರಿ, ಹೋಳಿಗೆ ಸಾಂಬಾರ್, ಅನ್ನ, ಮಜ್ಜಿಗೆ, ಬಾಳೇಹಣ್ಣು ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕಲ್ಯಾಣಧಿಕಾರಿ ರಾಜೇಶ್ವರಿ ಹಾಗೂ ವಿಸ್ತರಾಧಿಕಾರಿ ಅನುಸೂಯ ತಳವಾರ್ ಹಾಜರಿದ್ದು, ವಿದ್ಯಾರ್ಥಿಗಳೊಂದಿಗೆ ವಿಶೇಷ ಭೋಜನದ ಸವಿಯನ್ನು ಸವಿದರು.
ಇದೇ ಸಂದರ್ಭದಲ್ಲಿ ವಿಶೇಷ ಭೋಜನದ ಊಟವನ್ನು ತಯಾರಿಸಿ ಸುರೇಶ್.ಹೆಚ್.ಕೆ, ಮೋಹನ್, ಜಯಂತ್, ದಿನೇಶ್, ರಮೇಶ್, ರವಿ ನಿಲಯಾರ್ಥಿಗಳಿಗೆ ಬಡಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ರೈತರಿಗೆ ನೋಟಿಸ್ ಕೊಟ್ರೆ ಸುಮ್ಮನಿರಲ್ಲ: ಅರಣ್ಯ ಅಧಿಕಾರಿಗಳಿಗೆ ‘ಶಾಸಕ ಬೇಳೂರು ಗೋಪಾಲಕೃಷ್ಣ’ ವಾರ್ನಿಂಗ್
`ಹೃದಯಾಘಾತ’ದಿಂದ ನಿಮ್ಮ ಜೀವ ಉಳಿಸುತ್ತದೆ : ಈ 7 ರೂಪಾಯಿ `RAM ಕಿಟ್’ ಇಟ್ಟುಕೊಳ್ಳಿ!