ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಹೆಸರಾಂತ ಡ್ಯಾನ್ಸ್ ಅಕಾಡೆಮಿಗಳಲ್ಲಿ ಸ್ಟೈಲ್ ಡ್ಯಾನ್ಸ್ ಅಕಾಡೆಮಿ ಕೂಡ ಒಂದಾಗಿದೆ. ಈ ಅಕಾಡೆಮಿಗೆ 16 ವಸಂತಕ್ಕೆ ಕಾಲಿಡುತ್ತಿರುವುದರಿಂದ ಇದರ ಅಂಗವಾಗಿ ನರ್ತನ ಎಂಬ ಹೆಸರಿನಲ್ಲಿ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ.
ಇಂದು ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದಂತ ಡ್ಯಾನ್ಸ್ ಸೂರಜ್ ಅವರು, ಸ್ಟೈಲ್ ಡ್ಯಾನ್ಸ್ ಅಕಾಡೆಮಿ ಆರಂಭಗೊಂಡು 16ನೇ ವರ್ಷಕ್ಕೆ ಕಾಲಿಡುತ್ತಿದೆ. ಇದರ ಸಲುವಾಗಿ ದಿನಾಂಕ 09-11-2024ರಂದು ವಾರ್ಷಿಕೋತ್ಸವವನ್ನು ನರ್ತನ 2ಕೆ24 ಎಂಬುದಾಗಿ ಆಚರಿಸಲಾಗುತ್ತಿದೆ ಎಂದರು.
ಸಾಗರದ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ರವಿಕುಮಾರ್, ರಾಯಲ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಮಾಲೀಕರಾದಂತ ಮಹೇಶ್, ಜಲೀಲ್ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಇನ್ನೂ ರಾಜ್ಯ ವನ್ನಿಕುಲ ಕ್ಷತ್ರಿಯ ಸಂಘದ ರಾಜ್ಯಾಧ್ಯಕ್ಷರಾದಂತ ಶ್ರೀನಿವಾಸ್ ಮೇಸ್ತ್ರಿ, ಶಿರವಾಳದ ಪುನರ್ವಿ ಟಿಂಬರ್ಸ್ ಮಾಲೀಕರಾದಂತ ಗುರುಮೂರ್ತಿ, ಸಾಗರದ ವಿನಾಯಕ ಸಾಮಿಲ್ ಮಾಲೀಕರಾದಂತ ಅಕ್ಷತ್ ಎಸ್ ರಾವ್, ಸಾಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಬೇಳೂರು, ಮಲೆನಾಡ ರಹಸ್ಯ ಕನ್ನಡ ಪತ್ರಿಕೆ ಸಂಪಾದಕ ರಫೀಕ್ ಕೊಪ್ಪ ಕೂಡ ಉಪಸ್ಥಿತರಿರಲಿದ್ದಾರೆ ಎಂದರು.
ಇವರಲ್ಲದೇ ನಗರಸಭೆ ಸದಸ್ಯ ಅರವಿಂದ್ ರಾಯ್ಕರ್, ಸೈಯದ್ ಜಾಕೀರ್, ಕೇಬಲ್ ಆಪರೇಟರ್ ಹಾಗೂ ಹಿರಿಯ ನೃತ್ಯ ಗುರು ಪ್ರವೀಣ್.ಕೆಎಂ, ಶ್ರೀಧರ ಕೃಪಾ ಟ್ರೇಡರ್ಸ್ ಮಾಲೀಕ ಆರ್ ಎಸ್ ಶ್ರೀನಿವಾಸ್, ಹೆಗ್ಗೋಡಿನ ಶ್ರೀ ಗುರುಪ್ರಸಾದ್ ರೈಸ್ ಅಂಡ್ ಪ್ಲೋರ್ ಮಿಲ್ ಮಾಲೀಕ ವಿಟ್ಟಲ್ ಪೈ, ಸ್ಟೈಲ್ ಡ್ಯಾನ್ಸ್ ಅಕಾಡೆಮಿ ಮುಖ್ಯಸ್ಥರಾದ ದಿನಕರ ಸಿ.ವಿ ಹಾಜರಿರಲಿದ್ದಾರೆ ಎಂದು ಹೇಳಿದರು.
ಡಿಕೆಡಿ ಖ್ಯಾತಿಯ ಪವನ್ ಮಾಸ್ಟರ್ ವಿಶೇಷ ಆಹ್ವಾನಿತರಾಗಿ ಭಾಗಿಯಾಗುತ್ತಿದ್ದಾರೆ. ನವೆಂಬರ್.9ರ ನರ್ತನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿಶೇಷವಾಗಿ ರೈನ್ ಡ್ಯಾನ್ಸ್ ಒಂದನ್ನು ಕೂಡ ಪ್ರದರ್ಶನ ಮಾಡಲಾಗುತ್ತಿದೆ ಎಂದು ತಿಳಿಸಿದರು.
‘ಸ್ಟೈಲ್ ಡ್ಯಾನ್ಸ್ ಅಕಾಡೆಮಿ’ ಬಗ್ಗೆ ಕಿರುಪರಿಚಯ
ಸೂರಜ್ ಅವರ ನೇತೃತ್ವದಲ್ಲಿ ಸ್ಟೈಲ್ ಡ್ಯಾನ್ಸ್ ಅಕಾಡೆಮಿಯು 2009 ಆಗಸ್ಟ್ 20ರಂದು ಆರಂಭವಾಗುತ್ತದೆ. ಕೇವಲ ಆರು ಜನರಷ್ಟೇ ಇದ್ದಂತ ನೃತ್ಯ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ನೀಡಿ ಸಾಗರದ ಮನೆ ಮಾತಾಗುತ್ತಾ ಬಂದಿತ್ತು. ಕೇವಲ ಆರು ಜನರ ತಂಡವು ರಾಜ್ಯದ ಹಲವಾರು ಕಡೆ ಕಾರ್ಯಕ್ರಮಗಳನ್ನು ನೀಡುತ್ತಾ ಉತ್ತಮ ತಂಡವಾಗಿ ಹೊರ ಹೊಮ್ಮಿತ್ತು, ನಂತರದ ದಿನಗಳಲ್ಲಿ ತಂಡಕ್ಕೆ ಇನ್ನಷ್ಟು ವಿದ್ಯಾರ್ಥಿಗಳ ಆಗಮನವಾಯಿತು.
ಸಾಗರದಲ್ಲಿ ಅದ್ದೂರಿಯಾಗಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆಗಳನ್ನು ಐದು ಬಾರಿ ನಡೆಸಿದ ಹೆಮ್ಮೆ ನಮ್ಮ ಸ್ಟೈಲ್ ಡ್ಯಾನ್ಸ್ ಅಕಾಡೆಮಿಗೆ ಸಲ್ಲುತ್ತದೆ. ಸಾಗರದ ಹಾಗೂ ಹೊರ ಊರುಗಳ ಗಣಪತಿ ಕಾರ್ಯಕ್ರಮಗಳು ಜಾತ್ರಾ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿ, ನೃತ್ಯ ಸ್ಪರ್ಧೆಗಳು, ಟಿವಿ ಶೋಗಳು, ಚಲನಚಿತ್ರಗಳಲ್ಲಿ ಹಿಂಬದಿ ನೃತ್ಯಗಾರರಾಗಿ, ಶಾಲಾ ಕಾಲೇಜುಗಳ ನೃತ್ಯ ಕಾರ್ಯಕ್ರಮಗಳಲ್ಲಿ ಹಾಗೂ ಇನ್ನಿತರ ಕಾರ್ಯಕ್ರಮಗಳು ಸೇರಿ ಸಾವಿರಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮ ಮಾಡಿದ ಹೆಮ್ಮೆ ನಮ್ಮ ಸ್ಟೈಲ್ ಡ್ಯಾನ್ಸ್ ಅಕಾಡೆಮಿಗೆ ಸಲ್ಲುತ್ತದೆ.
ಪ್ರತಿ ವರ್ಷದ ಏಪ್ರಿಲ್ ತಿಂಗಳಿನಲ್ಲಿ ನಮ್ಮತಂಡದಿಂದ ಸಮ್ಮರ್ ಕ್ಯಾಂಪ್‌ಗಳನ್ನು ನಡೆಸಿ ಮಕ್ಕಳಿಗೆ ಡ್ರಾಯಿಂಗ್ ನಾಟಕ ಅಭಿನಯ ಹಾಗೂ ನೃತ್ಯಗಳನ್ನು ಕಲಿಸುವ ಮೂಲಕ ಮಕ್ಕಳಲ್ಲಿ ಕಲಾಸಕ್ತಿಗಳನ್ನು ಹೆಚ್ಚು ಮಾಡುವ ಕೆಲಸ ನಮ್ಮ ತಂಡವು ಮಾಡುತ್ತಿದೆ. 2020 ಮಾರ್ಚ್ ನಲ್ಲಿ ಸ್ಟೈಲ್ ಡ್ಯಾನ್ಸ್ ಅಕಾಡೆಮಿಯು ತನ್ನ ಹೊಸ ಸ್ಟುಡಿಯೋದೊಂದಿಗೆ ಆರಂಭವಾಯಿತು. ಪ್ರತಿ ವರ್ಷದ ವಾರ್ಷಿಕೋತ್ಸವಕ್ಕೆ ನರ್ತನ ಎಂಬ ನಮ್ಮದೇ ಮಕ್ಕಳ ನೃತ್ಯ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ. ಸತತ 16 ವರ್ಷಗಳಿಂದ ಸಾಗರದಲ್ಲಿ ನಟರಾಜನ ಆಶೀರ್ವಾದ ಹಾಗೂ ಸಾಗರದ ಜನತೆಯ ಆಶೀರ್ವಾದದಿಂದ ನಮ್ಮ ತಂಡವು ಇಂದಿಗೂ ನೂರಾರು ಮಕ್ಕಳಿಗೆ ನೃತ್ಯವನ್ನು ಕಲಿಸುತ್ತಾ ತನ್ನ ನೃತ್ಯಸೇವೆಯನ್ನು ಮುಂದುವರಿಸುತ್ತಿದೆ.
2021ರ ಆಗಸ್ಟ್ 14ನೇ ತಾರೀಕಿಗೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಮ್ಮತಂಡದ ಸಣ್ಣಮಕ್ಕಳಿಂದ ಹಿಡಿದು ಪೋಷಕರು ಹಾಗೂ ಏರೋಬಿಕ್ ತಂಡದ ಸದಸ್ಯರು ಸಹ ಸೇರಿ ಸಾಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸಾಗರದಲ್ಲೇ ಪ್ರಪ್ರಥಮ ಬಾರಿಗೆ ದೊಡ್ಡ ದೊಡ್ಡ ಊರುಗಳಲ್ಲಿ ನಡೆಸುವಂತಹ Open Flash Mob ಅಂದರೆ ಜನ ಸಮೂಹದ ನಡುವೆಯೇ ನೃತ್ಯ ಮಾಡಿದ್ದು, ನಮ್ಮ ತಂಡದ ಮತ್ತೊಂದು ಸಾಧನೆಯಾಗಿದೆ. ಇದರ ಜೊತೆ ಜೊತೆಯಲಿ ತಂಡವು ಕೆಲವು ಸಮಾಜಮುಖಿ ಕೆಲಸಗಳಲ್ಲಿಯೂ ನಮ್ಮ ಸಂಸ್ಥೆ ತೊಡಗಿದೆ. ರಕ್ತದಾನ ಶಿಬಿರ, ಬಡ ಮಕ್ಕಳಿಗೆ ಉಚಿತ ನೃತ್ಯ ತರಬೇತಿ, ಸರ್ಕಾರಿ ಶಾಲೆಗಳಿಗೆ ದೇಣಿಗೆ ನೀಡುವುದನ್ನು ನಮ್ಮ ಸಂಸ್ಥೆ ಮಾಡಿಕೊಂಡು ಬರುತ್ತಿದೆ. ಇಂದಿಗೂ ನಮ್ಮ ಸಂಸ್ಥೆಯಲ್ಲಿ ನೂರಾರು ಮಕ್ಕಳಿಗೆ ನೃತ್ಯ ತರಬೇತಿ ನೀಡುತ್ತಿದ್ದೇವೆ. ಇದರ ಜೊತೆ ಜೊತೆಯಲ್ಲಿ ಆರೋಗ್ಯದ ದೃಷ್ಟಿಯಿಂದ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಬ್ಯಾಚ್ ಗಳನ್ನು ಮಾಡಿ ಏರೋಬಿಕ್ ವ್ಯಾಯಾಮವನ್ನು ಹೇಳಿಕೊಡಲಾಗುತ್ತಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
‘KAS ಪರೀಕ್ಷಾ ಆಕಾಂಕ್ಷಿ’ಗಳಿಗೆ ಗುಡ್ ನ್ಯೂಸ್: ’30 ದಿನಗಳ ತರಬೇತಿ’ಗೆ ಅರ್ಜಿ ಆಹ್ವಾನ
`ಹೃದಯಾಘಾತ’ದಿಂದ ನಿಮ್ಮ ಜೀವ ಉಳಿಸುತ್ತದೆ : ಈ 7 ರೂಪಾಯಿ `RAM ಕಿಟ್’ ಇಟ್ಟುಕೊಳ್ಳಿ!