ಬೆಂಗಳೂರು: ವಕ್ಫ್ (ತಿದ್ದುಪಡಿ) ವಿಧೇಯಕದ ಕುರಿತ ಕೇಂದ್ರ ಸರಕಾರದ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅಧ್ಯಕ್ಷ ಜಗದಾಂಬಿಕಾ ಪಾಲ್ ಮತ್ತು ಸದಸ್ಯ- ಸಂಸದ ತೇಜಸ್ವಿ ಸೂರ್ಯ ಅವರನ್ನು ಕರ್ನಾಟಕ ವಕ್ಫ್ ಸತ್ಯಶೋಧನಾ ಸಮಿತಿ ಇಂದು ಭೇಟಿ ಮಾಡಿತು.
ಸಮಿತಿಯ ನೇತೃತ್ವ ವಹಿಸಿದ ಮಾಜಿ-ಉಪಮುಖ್ಯಮಂತ್ರಿ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಜಗದಾಂಬಿಕಾ ಪಾಲ್ ಅವರನ್ನು ಭೇಟಿ ಮಾಡಿ ವಕ್ಫ್ ಅನ್ಯಾಯದ ಕುರಿತು ವರದಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರು ಮತ್ತು ಶಾಸಕರಾದ ಹರೀಶ್ ಪೂಂಜ, ಮಹೇಶ್ ಟೆಂಗಿನಕಾಯಿ, ಮಾಜಿ ಶಾಸಕ ಅರುಣ ಶಹಾಪುರ, ನ್ಯಾಯವಾದಿ ಎಂ.ಬಿ.ಜಿರಲಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮುರುಡಪ್ಪ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಅವರು ಇದ್ದರು.
BREAKING: ನ.20ರಂದು ರಾಜ್ಯಾದ್ಯಂತ ‘ಮದ್ಯ ಮಾರಾಟ ಬಂದ್’ ಫಿಕ್ಸ್ : ಅಧ್ಯಕ್ಷ ಗುರುಸ್ವಾಮಿ ಹೇಳಿಕೆ
`ಹೃದಯಾಘಾತ’ದಿಂದ ನಿಮ್ಮ ಜೀವ ಉಳಿಸುತ್ತದೆ : ಈ 7 ರೂಪಾಯಿ `RAM ಕಿಟ್’ ಇಟ್ಟುಕೊಳ್ಳಿ!