ಬೆಂಗಳೂರು : ಶಿಕ್ಷಣ ಇಲಾಖೆ ಸೇರಿದಂತೆ ಜಿಲ್ಲಾ ವಲಯ ಕಾರ್ಯಕ್ರಮಗಳಿಗೆ 2025-26 ನೇ ಸಾಲಿಗೆ ಅನುದಾನ ಹಂಚಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
1. ವಿವಿಧ ಲೆಕ್ಕಶೀರ್ಷಿಕೆ/ವಿವಿಧ ಕಾರ್ಯಕ್ರಮಗಳಡಿ ಬರುವ ಅಧಿಕಾರಿ/ಸಿಬ್ಬಂದಿಗಳ ವೇತನವನ್ನು ಭರ್ತಿ ಮಾಡಿರುವ ಹುದ್ದೆಗಳಿಗೆ 2024-25ನೇ ಸಾಲಿನಲ್ಲಿ ಲೆಕ್ಕಶೀರ್ಷಿಕವಾರು ಪೂರಕ ಅಂದಾಜಿನಲ್ಲಿ ಒದಗಿಸಿರುವ ಅನುದಾನವನ್ನು ಸೇರಿಸಿಕೊಂಡು ಮುಂದಿನ ವರ್ಷದಲ್ಲಿ ಅಗತ್ಯವಿರುವ ಅನುದಾನವನ್ನು ನಿಗದಿಪಡಿಸುವುದು.
2. ವಲಯವಾರು/ಪ್ರಧಾನ ಲೆಕ್ಕ ಶೀರ್ಷಿಕವಾರು ಕಾರ್ಯಕ್ರಮಗಳ ಮೊತ್ತವನ್ನು Calculation Sheet ನಲ್ಲಿ ರೂ. ಲಕ್ಷಗಳಲ್ಲಿ ನಮೂದಿಸುವುದು.
3. ಭೌತಿಕ ಮಾಹಿತಿಯನ್ನೊಳಗೊಂಡ ನಮೂನೆ-1 ರಲ್ಲಿ ಎಲ್ಲಾ ಮಾಹಿತಿಯನ್ನು ಜಿಲ್ಲೆಯ ಒಟ್ಟಾರೆ ಬೇಡಿಕೆಗನುಗುಣವಾಗಿ ನೀಡುವುದು.
4. 2024-25ನೇ ಸಾಲಿನ ಬಿಡುಗಡೆ ಮತ್ತು ವೆಚ್ಚಗಳನ್ನೊಳಗೊಂಡ ಎಂಪಿಕ್ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಪ್ರಗತಿ ವರದಿಯನ್ನು ಅಕ್ಟೋಬರ್ 2024ರ ಅಂತ್ಯದವರೆಗೆ ಮಾಹಿತಿಯನ್ನು ಸಂಗ್ರಹಿಸಿ ಅಂತಿಮ ಪರಿಶೀಲನಾ ಸಭೆಯ ನಿಗದಿತ ದಿನಾಂಕದೊಳಗೆ ಕಳುಹಿಸಿಕೊಡಲು ಹಾಗೂ ವರ್ಕ್ ಶೀಟ್ 2 มี (Spiral binding, Portrait format, Font: Unicode, Size: 10) 8 -3 8 2 ಪ್ರತಿಗಳನ್ನು ಅಂತಿಮ ಪರಿಶೀಲನಾ ಸಭೆಯ ದಿನಾಂಕಕ್ಕಿಂತ ಮೊದಲು ಆಯಾ ಜಿಲ್ಲೆಗಳಿಗೆ ನಿಗದಿಪಡಿಸಿದ ದಿನಾಂಕಗಳಂದು ತಪ್ಪದೇ ಕಳುಹಿಸಿಕೊಡುವುದು. ಬೇರೆ ರೂಪದಲ್ಲಿ ಸಲ್ಲಿಸಿದಲ್ಲಿ ಸ್ವೀಕರಿಸುವುದಿಲ್ಲ.
5. ಕಳೆದ 5 ವರ್ಷಗಳಲ್ಲಿ ಇಲಾಖೆಯಿಂದ ಅನುಮೋದಿತ ಕ್ರಿಯಾ ಯೋಜನೆಯ ಪ್ರಮುಖ ಇಲಾಖೆಗಳ ನಕ್ಷೆಯ ವಿವರಗಳನ್ನು ಒದಗಿಸುವುದು.
6. ಪ್ರಮುಖ ಯೋಜನೆಗಳಡಿ ಜಿಲ್ಲೆಯ ದತ್ತಾಂಶವನ್ನು ಕಾರ್ಯಕ್ರಮದ ಮೇಲಿನ ROW ನಲ್ಲಿ ಸ್ಪಷ್ಟವಾಗಿ (BOLD Letter) ನಮೂದಿಸುವುದು. (ಉದಾ: ವಿದ್ಯಾರ್ಥಿಗಳ ಸಂಖ್ಯೆ, ವಸತಿ ನಿಲಯಗಳ ಸಂಖ್ಯೆ, ಇತ್ಯಾದಿ)
7. ಹೊಸ ವಾಹನದ ಪ್ರಸ್ತಾವನೆಗೆ ಅವಕಾಶವಿರುವುದಿಲ್ಲ.
8. ಹಿಂದಿನ/ ಪ್ರಸಕ್ತ ಸಾಲಿನಲ್ಲಿ ಅಗತ್ಯವಿರುವ ಇತರೆ ಭತ್ಯೆಗಳಾದ TA/DA, ವೈದ್ಯಕೀಯ ವೆಚ್ಚ ಮರುಪಾವತಿ, ಮುಂತಾದವುಗಳನ್ನು ಪ್ರಸಕ್ತ ಸಾಲಿನಲ್ಲಿಯೇ ಆಯಾಯ ಇಲಾಖೆಗಳ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಿ ಆರ್ಥಿಕ ಇಲಾಖೆಯಿಂದ ಅನುದಾನವನ್ನು ಪಡೆಯಲು ಕ್ರಮವಹಿಸುವುದು. (ಬಾಕಿ ಅನುದಾನವನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಪುಸ್ತಾಪಿಸಲು ಅವಕಾಶವಿರುವುದಿಲ್ಲ)
9. ನಿವೃತ್ತಿ ಹೊಂದುವ ದಿನಗೂಲಿ ನೌಕರರಿಗೆ ಒಂದು ಬಾರಿ ಮಾತ್ರ ಉಪಧನವನ್ನು ಪ್ರಸ್ತಾಪಿಸುವುದು.
10. ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುವ ಸಿಬ್ಬಂದಿಗಳನ್ನು ಮಂಜೂರಾದ ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೇ.80 ರಷ್ಟು ಮಾತ್ರ ತೆಗೆದುಕೊಳ್ಳುವ ಅವಕಾಶವಿರುತ್ತದೆ. ಒಂದು ವೇಳ ಮಂಜೂರಾದ ಹುದ್ದೆಗಳಿಗಿಂತಲೂ ಹೆಚ್ಚಿನ ಸಿಬ್ಬಂದಿಗಳನ್ನು ತೆಗೆದುಕೊಂಡಿದ್ದಲ್ಲಿ ಅವುಗಳಿಗೆ ಕಡ್ಡಾಯವಾಗಿ ಸಂಬಂಧಪಟ್ಟ ಇಲಾಖೆಗಳು ಆರ್ಥಿಕ ಇಲಾಖೆಯ ಸಹಮತಿ ಪಡೆದಿದ್ದಲ್ಲಿ (ಆದೇಶದ ಪ್ರತಿ ಒದಗಿಸುವುದು) ಮಾತ್ರ ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು. ಇಲ್ಲದಿದ್ದಲ್ಲಿ ಅಂತಹ ಹುದ್ದೆಗಳನ್ನು ತಮ್ಮ ಹಂತದಲ್ಲಿಯೇ ಪರಿಶೀಲಿಸಿ ಕ್ರಮ ವಹಿಸುವುದು.
11. ಪುಸಕ್ತ ಸಾಲಿನಲ್ಲಿ ಯಾವುದಾದರು ಕಾರ್ಯಕ್ರಮಗಳಿಗೆ ಹೆಚ್ಚುವರಿ ಅನುದಾನವನ್ನು ಕೋರಿ ಸಂಬಂಧಪಟ್ಟ ಇಲಾಖೆ/ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದ ಪಕ್ಷದಲ್ಲಿ ಅವುಗಳ ಪ್ರತಿಯನ್ನು ತಪ್ಪದೇ ಸಭೆಯಲ್ಲಿ ಹಾಜರುಪಡಿಸುವುದು. ಮುಂದುವರೆದು ಆರ್ಥಿಕ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಯಾವುದಾದರು ಕಾರ್ಯಕ್ರಮಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆಯಾಗಿದ್ದರೆ ಆದೇಶದ ಪ್ರತಿಯನ್ನು ತಪ್ಪದೇ ಸಲ್ಲಿಸುವುದು. (ಇಲ್ಲದಿದ್ದ ಪಕ್ಷದಲ್ಲಿ ಆ ಮೊತ್ತವನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ