ನವದೆಹಲಿ : ವಿಶ್ವದ ಮೊದಲ ಸುಂದರಿ ಕಿಕಿ ಹಾಕಾನ್ಸನ್ ನಿಧನರಾಗಿದ್ದಾರೆ. ಕಿಕಿ ಅವರಿಗೆ 95 ವರ್ಷ ವಯಸ್ಸಾಗಿದ್ದು, ನವೆಂಬರ್ 4, ಸೋಮವಾರ ಕ್ಯಾಲಿಫೋರ್ನಿಯಾದ ತಮ್ಮ ಮನೆಯಲ್ಲಿ ನಿದ್ರೆಯಲ್ಲಿಯೇ ಚಿರನಿದ್ರೆಗೆ ಜಾರಿದ್ದಾರೆ.
ಅಧಿಕೃತ ಮಿಸ್ ವರ್ಲ್ಡ್ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಈ ಘೋಷಣೆ ಮಾಡಲಾಗಿದೆ. ಸ್ವೀಡನ್ನಲ್ಲಿ ಜನಿಸಿದ ಕಿಕಿ ಹಕಾನ್ಸನ್ 1951ರಲ್ಲಿ ಲಂಡನ್ನಲ್ಲಿ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದಾಗ ಇತಿಹಾಸ ನಿರ್ಮಿಸಿದರು.
ಜುಲೈ 29, 1951 ರಂದು ಲೈಸಿಯಮ್ ಬಾಲ್ ರೂಮ್’ನಲ್ಲಿ ನಡೆದ ಈ ಸ್ಪರ್ಧೆಯನ್ನು ಆರಂಭದಲ್ಲಿ ಫೆಸ್ಟಿವಲ್ ಆಫ್ ಬ್ರಿಟನ್’ಗೆ ಸಂಬಂಧಿಸಿದ ಒಂದು ಬಾರಿಯ ಘಟನೆಯಾಗಿ ಉದ್ದೇಶಿಸಲಾಗಿತ್ತು. ಆದಾಗ್ಯೂ, ಸ್ಪರ್ಧೆಯು ಜಾಗತಿಕ ಸಂಸ್ಥೆಯಾಯಿತು ಮತ್ತು ಕಿಕಿಯ ಗೆಲುವು ವಿಶ್ವ ಸುಂದರಿ ಪರಂಪರೆಯ ಆರಂಭವನ್ನ ಗುರುತಿಸಿತು. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಭಾವನಾತ್ಮಕ ಶ್ರದ್ಧಾಂಜಲಿಯಲ್ಲಿ, ಮಿಸ್ ವರ್ಲ್ಡ್ ಸ್ಪರ್ಧೆಯ ಅಧಿಕೃತ ಪುಟವು ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದೆ. ಅಧಿಕೃತ ಪೋಸ್ಟ್ನಲ್ಲಿ, “ಕಿಕಿ ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಪ್ರೀತಿ ಮತ್ತು ಪ್ರಾರ್ಥನೆಗಳನ್ನು ಕಳುಹಿಸುತ್ತಿದ್ದೇವೆ” ಎಂದು ಬರೆಯಲಾಗಿದೆ.
BREAKING: ಲೋಕಾಯುಕ್ತ ಎಡಿಜಿಪಿಗೆ ಬೆದರಿಕೆ ಆರೋಪ: FIR ರದ್ದು ಕೋರಿ ‘ಹೈಕೋರ್ಟ್’ಗೆ HDK, ನಿಖಿಲ್ ಅರ್ಜಿ
ನೀವು ಈ ಸ್ಥಳಕ್ಕೆ ಹೋದ್ರೆ ‘ಅಮರ’ರಾಗ್ತೀರಾ.! ‘ವಯಸ್ಸು, ಸಮಯ’ ನಿಂತೇ ಬಿಡುತ್ತೆ.!