ಬೆಂಗಳೂರು : ಮಾನ್ಯ ನ್ಯಾಯಾಲಯದಲ್ಲಿ ಬಿಡುಗಡೆ ಹೊಂದಿದ ಪ್ರಕರಣಗಳಲ್ಲಿ Acquittal Review Committee ಸಮಿತಿಯು ಶಿಫಾರಸ್ಸಿನ ಆಧಾರದ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ತನಿಖೆಯಲ್ಲಿ ಕರ್ತವ್ಯಲೋಪವೆಸಗಿರುವ ಬಗ್ಗೆ ಶಿಸ್ತು ಕ್ರಮ ಜರುಗಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಪೊಲೀಸ್ ಇಲಾಖೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಅಪರಾಧ ಮೊಕದ್ದಮೆಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಅಂತಿಮ ವರದಿಗಳು ಸಲ್ಲಿಸಲ್ಪಟ್ಟ ನಂತರ ಮಾನ್ಯ ನ್ಯಾಯಾಲಯವು ವಿಚಾರಣೆ ನಡೆಸಿ ಹೊರಡಿಸುತ್ತಿರುವ ಅನೇಕ ತೀರ್ಪುಗಳಲ್ಲಿ ವಿವಿಧ ವೃಂದದ ಅಧಿಕಾರಿ/ಸಿಬ್ಬಂದಿಗಳು ಸಮರ್ಪಕವಾಗಿ ತನಿಖೆ ಮಾಡದೇ ಇರುವುದರ ಬಗ್ಗೆ ಅಥವಾ ತನಿಖೆಯಲ್ಲಿನ ಲೋಪದೋಷಗಳ ಬಗ್ಗೆ ಉಲ್ಲೇಖಿಸಲಾಗಿರುತ್ತದೆ ಮತ್ತು ಇದರಿಂದಾಗಿ ಆರೋಪಿತರುಗಳಿಗೆ ಸಂಶಯದ ಲಾಭವನ್ನು ನೀಡಿ ಪ್ರಕರಣಗಳು ಖುಲಾಸೆಯಾಗುತ್ತಿರುತ್ತವೆ.
ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ126/ಸಿಡಬ್ಲೂಪಿ/2014 0:20.10.2014 ಆದೇಶಿಸಿರುವಂತೆ ನ್ಯಾಯಾಲಯದಲ್ಲಿ ಖುಲಾಸೆಗೊಂಡ ಪ್ರಕರಣಗಳನ್ನು ಕೇಸಿನ ಕಡತದೊಂದಿಗೆ ಪರಾಮರ್ಶಿಸುವುದರ ಸಲುವಾಗಿ ರಾಜ್ಯದ ಪ್ರತಿ ವಲಯ ಮತ್ತು ನಗರ ಕಮೀಷನರೇಟ್‌ಗಳಲ್ಲಿ ಹಾಗೂ ಜಿಲ್ಲಾಘಟಕಗಳಲ್ಲಿ ಸರ್ಕಾರಿ ಅಭಿಯೋಜಕರುಗಳನ್ನು ಒಳಗೊಂಡ Acquittal Review Committee ರಚಿಸಲಾದ ಸಮಿತಿಯು ಕಾರ್ಯನಿರ್ವಹಿಸುತ್ತಿರುತ್ತದೆ. ಮಾನ್ಯ ನ್ಯಾಯಾಲಯದಲ್ಲಿ ಖುಲಾಸೆಗೊಂಡ ಪ್ರಕರಣಗಳಲ್ಲಿನ ತನಿಖಾಧಿಕಾರಿಗಳು ನ್ಯಾಯಾಲಯದಲ್ಲಿ ಅಭಿಯೋಜನೆಗೆ ಪೂರಕವಾದ ಸಾಕ್ಷ್ಯ ನುಡಿಯದೆ ಇರುವುದು, ತನಿಖಾ ಪ್ರಕ್ರಿಯಲ್ಲಿ ಲೋಪವೆಸಗಿರುವುದು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸದೇ ಇರುವುದು ಹಾಗೂ ಸಾಕ್ಷಿದಾರರುಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸದೆ ಇರುವ ತನಿಖಾಧಿಕಾರಿಗಳಾದ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ಕರ್ತವ್ಯಲೋಪವೆಸಗಿರುವ ಬಗ್ಗೆ ಶಿಸ್ತು ಕ್ರಮ ಜರುಗಿಸಲು Acquittal Review Committee ಶಿಫಾರಸ್ಸು ಮಾಡಲಾಗುತ್ತಿದೆ. Acquittal Review Committee ತಿಫಾರಸ್ಸಿನಂತೆ, ನ್ಯಾಯಾಲಯದಲ್ಲಿ ಖುಲಾಸೆಗೊಂಡ ಅಪರಾಧ ಮೊಕದ್ದಮೆಗಳ ತನಿಖೆಯಲ್ಲಿ ಕರ್ತವ್ಯಲೋಪ ವೆಸಗಿರುವ ತನಿಖಾಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸುವುದರ ಸಂಬಂಧ ಪ್ರಧಾನ ಕಛೇರಿಯಿಂದ ಉಲ್ಲೇಖಿತದಲ್ಲಿ ಮಾರ್ಗಸೂಚಿಗಳನ್ನು ನೀಡಲಾಗಿತ್ತು.
ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಾ ಮಂಡಳಿ ಅರ್ಜಿ ಸಂಖ್ಯೆ:517/2023 ಪ್ರಕರಣದಲ್ಲಿ ಅದೇಶ 0:19.2.202400, Acquittal Review Committee ಸಮಿತಿಯು ಶಿಫಾರಸ್ಸಿನ ಆಧಾರದ ಮೇಲೆ ತನಿಖಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವ ಪೂರ್ವದಲ್ಲಿ ಪಾಲಿಸಬೇಕಾದ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿರುತ್ತದೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಖುಲಾಸೆಗೊಂಡ ಪ್ರಕರಣಗಳ ತನಿಖೆಯಲ್ಲಿ ಕರ್ತವ್ಯಲೋಪವೆಸಗಿದ ತನಿಖಾಧಿಕಾರಿಗಳ ವಿರುದ್ಧ Acquittal Review Committee ಯ ಶಿಫಾರಸ್ಸಿನ ಆಧಾರದ ಮೇಲೆ ಶಿಸ್ತುಕ್ರಮ ಜರುಗಿಸುವುದರ ಸಂಬಂಧ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸುವುದರ ಸಲುವಾಗಿ ಈ ಹಿಂದೆ ಪ್ರಧಾನ ಕಛೇರಿಯಿಂದ ಹೊರಡಿಸಲಾದ ಉಲ್ಲೇಖಿತ ದಿ:12.2.2021ರ ಸುತ್ತೋಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.
ನ್ಯಾಯಾಲಯದಲ್ಲಿ ಖುಲಾಸೆಗೊಂಡ ಪ್ರಕರಣಗಳ ಪರಾಮರ್ಶಿಸಿದ ನಂತರ ತನಿಖೆಯಲ್ಲಿ ಕರ್ತವ್ಯಲೋಪವೆಸಗಿದ ತನಿಖಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವ ಸಂಬಂಧ ಎಲ್ಲಾ “ಖುಲಾಸೆಗೊಂಡ ಅಪರಾಧ ಪ್ರಕರಣಗಳ ಪರಾಮರ್ಶೆ ಸಮಿತಿಯ ಅಧ್ಯಕ್ಷರು/ ಘಟಕಾಧಿಕಾರಿಗಳು ಶಿಸ್ತುಪ್ರಾಧಿಕಾರಿಗಳಿಗೆ ಈ ಕೆಳಕಂಡ ಮಾರ್ಗಸೂಚಿಯನ್ನು ಅನುಸರಿಸಲು ತಿಳಿಸಲಾಗಿದೆ.
1. ರಾಜ್ಯದ ವಲಯ, ಕಮೀಷನರೇಟ್ ಹಾಗೂ ಜಿಲ್ಲಾ ಮಟ್ಟದಲ್ಲಿ ನ್ಯಾಯಾಲಯಗಳಲ್ಲಿ ಖುಲಾಸೆಗೊಂಡ ಕ್ರಿಮಿನಲ್ ಪ್ರಕರಣಗಳನ್ನು Acquittal Review Committee ನಲ್ಲಿ ಪರಾಮರ್ಶಿಸಿದಾಗ ತನಿಖಾಧಿಕಾರಿಗಳು ಸದರಿ ಕ್ರಿಮಿನಲ್ ಪ್ರಕರಣಗಳಲ್ಲಿ ತನಿಖಾಲೋಪವೆಸಗಿರುವ ಬಗ್ಗೆ ಕಮಿಟಿಯು ಗಮನಿಸಿ ತನಿಖಾಧಿಕಾರಿಯ ವಿರುದ್ಧ ಶಿಸ್ತುಕ್ರಮ ಜರುಗಿಸಲು ತೀರ್ಮಾನಿಸಿ ಶಿಫಾರಸ್ಸು ಮಾಡುತ್ತಿರುತ್ತಾರೆ. ಕಮಿಟಿಯ ಶಿಫಾರಸ್ಸಿನಂತೆ, ಪರಾಮರ್ಶೆಗೊಳಗಾದ ಕ್ರಿಮಿನಲ್ ಪ್ರಕರಣಗಳು ದಾಖಲಾದ ಘಟಕಗಳಲ್ಲಿನ ಜಿಲ್ಲಾ ಘಟಕಾಧಿಕಾರಿಗಳು/ವಿಭಾಗದ ಉಪ ಪೊಲೀಸ್ ಆಯುಕ್ತರುಗಳು ಆಯಾ ತನಿಖಾಧಿಕಾರಿಗೆ * ತನಿಖಾ ಲೋಪದ ಬಗ್ಗೆ ವಿವರಣೆಯನ್ನು ಪಡೆಯವುದರ ಸಲುವಾಗಿ ನೋಟೀಸ್ ಹೊರಡಿಸಿ ಜಾರಿ ಮಾಡುವುದು’ ಸದರಿ ನೋಟೀಸ್‌ನೊಂದಿಗೆ ತನಿಖಾಲೋಪದ ಬಗ್ಗೆ ನಿರ್ಧಿಷ್ಟ ಮಾಹಿತಿ, ಕೇಸಿನಲ್ಲಿರುವ ಪೂರಕ ದಾಖಲೆ, ಪ್ರಕರಣದ ನ್ಯಾಯಾಲಯದ ತೀರ್ಪಿನ ಪ್ರತಿ, ಖುಲಾಸೆಗೊಂಡ ಪ್ರಕರಣಗಳ ಪರಾಮರ್ಶೆ ಸಭೆಯ ನಡವಳಿಯ ಪ್ರತಿಯನ್ನು ಒದಗಿಸತಕ್ಕದ್ದು. ಸದರಿ ನೋಟೀಸ್‌ಗೆ ತನಿಖಾಧಿಕಾರಿಗಳು ನೀಡಲಾಗುವ ಸಮಜಾಯಿಷಿಯನ್ನು ಪಡೆದುಕೊಂಡು, ಸಮಜಾಯಿಷಿಯಲ್ಲಿನ ಅಂಶಗಳ ಬಗ್ಗೆ ಪರಿಶೀಲಿಸಿಕೊಂಡು ತನಿಖಾಧಿಕಾರಿಗಳು ಅಪರಾಧ ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪವೆಸಗಿರುವುದು ಧೃಡಪಟ್ಟಲ್ಲಿ ಸೂಕ್ತ ಶಿಸ್ತಿನ ಕ್ರಮ ಜರುಗಿಸುವ ಸಲುವಾಗಿ ಆಯಾ ವಲಯಾಧಿಕಾರಿಗಳ/ಪೊಲೀಸ್ ಆಯುಕ್ತರುಗಳ ಮುಖಾಂತರವಾಗಿ ಸದರಿ ತನಿಖಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಸಂಬಂಧಟ್ಟ ಘಟಕಾಧಿಕಾರಿಗಳಿಗೆ/ ಶಿಸ್ತುಪ್ರಾಧಿಕಾರಿಗಳಿಗೆ ಕೆ.ಎಸ್.ಪಿ. (ಡಿಪಿ) ನಿಯಮಾವಳಿ 1965/89 ಮತ್ತು ತಿದ್ದುಪಡಿ 2022ರ ರೀತ್ಯಾ ಲಘು ಶಿಸ್ತು ಕ್ರಮ(ನಿಯಮ7) ಅಥವಾ ಕ್ರಮಬದ್ಧವಾದ ಇಲಾಖಾ ವಿಚಾರಣೆಗಾಗಿ (ನಿಯಮ 6, 648) ಶಿಫಾರಸ್ಸು ಮಾಡತಕ್ಕದ್ದು,
2. ಕ್ರಿಮಿನಲ್ ಪ್ರಕರಣ ದಾಖಲಾದ ಘಟಕದಲ್ಲಿನ ಘಟಕಾಧಿಕಾರಿಗಳು ಸಂಬಂಧಪಟ್ಟ ಶಿಸ್ತುಪ್ರಾಧಿಕಾರಿಗಳಿಗೆ/ ನಿಯಂತ್ರಣಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸುವ ಪೂರ್ವದಲ್ಲಿ, ಕರಡು ದೋಷಾರೋಪಣಾ (ಅನುಬಂಧ 1 ರಿಂದ 4)ಯೊಂದಿಗೆ ಒದಗಿಸುವುದು.
3. ಕರಡು ದೋಷಾರೋಪಣಾ ಸಿದ್ಧಪಡಿಸಿ ಕಳುಹಿಸುವಾಗ ನ್ಯಾಯಾಲಯದ ಆದೇಶದಲ್ಲಿ ನಮೂದಿಸಲಾದ ಆರೋಪಗಳ ಅಂಶಗಳಿಗೆ ಸಂಬಂಧಪಟ್ಟಂತೆ, ನ್ಯಾಯಾಲಯದ ಆದೇಶದ ಭಾಗವನ್ನು ಅಂದರೆ ತನಿಖಾಧಿಕಾರಿಗಳು ಲೋಪವೆಸಗಿರುವ ಬಗ್ಗೆ ಗಮನಿಸಿರುವ ಅಂಶವನ್ನು /ಕಟುಟೀಕೆಯನ್ನು ವ್ಯಕ್ತಪಡಿಸಿದ್ದಲ್ಲಿ ಯಥಾವತ್ತಾಗಿ ನಮೂದಿಸಿ ಅದಕ್ಕೆ ಪೂರಕವಾಗಿ ಘಟಣಾವಳಿಯನ್ನು ಸಂಕ್ಷಿಪ್ತವಾಗಿ ವಿವರಿಸಿ, ನ್ಯಾಯಾಲಯದ ಆದೇಶದ ಭಾಗವನ್ನು /ಕಟುಟೀಕೆಯಲ್ಲಿ ನಮೂದಿಸಿರುವ ಅಂಶಗಳಿಗೆ ಪೂರಕವಾದ ಅಭಿಯೋಗ ಸಾಕ್ಷಿದಾರರ(ಪಿಡಬ/ಸಿಡಬ್ಲ್ಯೂ) ಹೆಸರನ್ನು ಹಾಗೂ ಆಪಾದಿತ ಅಧಿಕಾರಿಯು ಎಸಗಿರುವ ನಿರ್ದಿಷ್ಟ ಆರೋಪಗಳನ್ನು (ಅಸ್ಪಷ್ಟವಾಗಿರದೇ (vague)/ಜಾಳುಜಾಳಾಗಿರದೇ) ನಮೂದಿಸತಕ್ಕದ್ದು, ಅದಕ್ಕೆ ಪೂರಕವಾಗಿರುವಂತಹ ತನಿಖಾ ದಾಖಲಾತಿಗಳ ಪತ್ರ, ಸಂಖ್ಯೆ, ದಿನಾಂಕದೊಂದಿಗಿನ ಮಾಹಿತಿ, ಪ್ರಕರಣದ ವಿವರ/ಹಿನ್ನೆಲೆಯನ್ನು ಸ್ಪಷ್ಟವಾಗಿ ನಮೂದಿಸಿ ಸಂಬಂಧಪಟ್ಟ ಎಲ್ಲಾ ದಾಖಲಾತಿ ಅಂದರೆ, ಎಫ್‌ಐಆರ್. ಅಭಿಯೋಗ ದಾಖಲಾತಿ, ಅಭಿಯೋಗ ಸಾಕ್ಷಿಗಳ ಪಟ್ಟಿ, ತೀರ್ಪಿನ ಪ್ರತಿ, ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದ ಹೇಳಿಕೆಯ ಪ್ರತಿಗಳು ಹಾಗೂ ಪ್ರಕರಣದ ಕಡತದಲ್ಲಿ (ಕೇಸ್ ಫೈಲ್)ಇನ್ನಿತರೆ ಅವಶ್ಯ ದಾಖಲೆಗಳನ್ನು ಒದಗಿಸತಕ್ಕದ್ದು.