ಬೆಂಗಳೂರು: ವಕೀಲ ಜಗದೀಶ್ ಕನ್ನಡದ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಕೊಲೆ ಬೆದರಿಕೆ ಬಂದಿರುವುದಾಗಿ ಆರೋಪ ಮಾಡಿದ್ದು, ಈ ಸಂಬಂಧ ನಟ ದರ್ಶನ್, ಅಭಿಮಾನಿ ವಿರುದ್ಧ ದೂರು ದಾಖಲಿಸಿದ್ದಾರೆ.
ರಿಷಿ ಎನ್ನುವವನು ದರ್ಶನ್ ಬಗ್ಗೆ ಮರ್ಯಾದೆ ಕೊಟ್ಟು ಮಾತನಾಡು ತುಂಬಾ ಜಾಸ್ತಿ ಆಯಿತು ಎಂದೇಳಿ ಕೊಲೆ ಬೆದರಿಕೆ ಹಾಕಿದ್ದಾನೆ. ನಿನ್ನೆಯಿಂದ ನಿರಂತರವಾಗಿ 10 ಸಾವಿರ ಕಾಲ್ ಬಂದಿದೆ. ನಾವೇನು ಕೇರ್ ಮಾಡೋಕೆ ಹೋಗಿಲ್ಲ. ದರ್ಶನ್ ಹಾಗೂ ರಿಷಿ ಮೇಲೆ ದೂರು ದಾಖಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಕೊಲೆ ಬೆದರಿಕೆ ಸಂಬಂಧ ನಟ ದರ್ಶನ್ ಅಭಿಮಾನಿ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ವಕೀಲ ಜಗದೀಶ್ ಅವರು ದಾಖಲಿಸಿದ್ದಾರೆ.
ಕನ್ನಡ ಇಂಡಸ್ಟ್ರಿ ಬಾಸ್ ದರ್ಶನ್ ಅಂತೆ. ಅವನು ಮೆಡಿಕಲ್ ಬೇಲ್ ಮೇಲೆ ಆಚೆ ಇದ್ದಾನೆ. ಇದನ್ನು ಅವನೇ ಮಾಡಿಸುತ್ತಿದ್ದಾನಾ ಅಥವಾ ಅವನ ಹೆಸರಿನಲ್ಲಿ ಬೇರೆ ಅವರು ಮಾಡುತ್ತಿದ್ದಾರೋ. ಒಟ್ಟಿನಲ್ಲಿ ನಾನು ಬಿಗ್ಬಾಸ್ ಅಲ್ಲಿ ಹೆಸರು ಮಾಡಿರುವುದು ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಕಾಲಿಡುತ್ತಿರುವುದು ದರ್ಶನ್ ಮತ್ತೆ ಅವನ ಪಟಾಲಂಗೆ ಇಷ್ಟ ಇಲ್ಲ ಅನ್ನಿಸುತ್ತದೆ ಎಂದು ಹೇಳಿದ್ದಾರೆ.