ನವದೆಹಲಿ : ಎಟಿಎಂ ವಹಿವಾಟಿನ ವೈಫಲ್ಯದ ಹೊರತಾಗಿಯೂ, ನಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸುವುದು ಆಗಾಗ್ಗೆ ಸಂಭವಿಸುತ್ತೆ. ಅಂತಹ ಪರಿಸ್ಥಿತಿಯಲ್ಲಿ, ಈಗ ಏನು ಮಾಡಬೇಕು ಮತ್ತು ಎಲ್ಲಿ ದೂರು ನೀಡಬೇಕೆಂದು ಅನೇಕರಿಗೆ ಗೊತ್ತಾಗೋದಿಲ್ಲ. ಬ್ಯಾಂಕ್ ಕಸ್ಟಮರ್ ಕೇರ್’ನ್ನ ಸಂಪರ್ಕಿಸಿದಾಗ, 24 ಗಂಟೆಗಳ ಒಳಗೆ ನಿಮ್ಮ ಖಾತೆಗೆ ಹಣ ಬರುತ್ತದೆ ಎಂದು ಬ್ಯಾಂಕ್ ನಿಮಗೆ ಭರವಸೆ ನೀಡುತ್ತದೆ. ಆದ್ರೆ, ಅದರ ನಂತ್ರವೂ ಹಣ ಹಿಂತಿರುಗದಿರುವುದು ಹಲವು ಬಾರಿ ನಡೆದಿದೆ. ನಿಮ್ಗು ಈ ರೀತಿ ಸಂಭವಿಸಿದ್ರೆ, ಭಯಪಡಬೇಡಿ.
ಆರ್ಬಿಐ ಹೇಳುವಂತೆ, ವಹಿವಾಟು ವಿಫಲವಾದ್ರೆ ಕಡಿತಗೊಳಿಸಿದ ಹಣವನ್ನ ನಿಮ್ಮ ಖಾತೆಗೆ ಹಾಕುವುದು ಬ್ಯಾಂಕ್ನ ಜವಾಬ್ದಾರಿಯಾಗಿದೆ. ನೀವು ಶೀಘ್ರದಲ್ಲೇ ನಿಮ್ಮ ಹಣವನ್ನ ಮರಳಿ ಪಡೆಯಬಹುದು. ಒಂದ್ವೇಳೆ ಹಣ ನಿಮ್ಮ ಖಾತೆಗೆ ತಲುಪುವುದು ವಿಳಂಬವಾದ್ರೆ, ಬ್ಯಾಂಕ್ ನಿಮಗೆ ಪರಿಹಾರವನ್ನ ನೀಡುತ್ತೆ.
ತಾಂತ್ರಿಕ ಸಮಸ್ಯೆ: ಬ್ಯಾಂಕ್‌ಗಳು ನಿಯಮಿತವಾಗಿ ಎಟಿಎಂಗಳನ್ನು ಪರಿಶೀಲಿಸುತ್ತವೆ. ತಾಂತ್ರಿಕ ಸಮಸ್ಯೆಗಳನ್ನು ಸಾಮಾನ್ಯವಾಗಿ ತ್ವರಿತವಾಗಿ ಪರಿಹರಿಸಲಾಗುತ್ತದೆ ಮತ್ತು ಅಂತಹ ಸಂದರ್ಭಗಳಲ್ಲಿ ನಿಮ್ಮ ಹಣವನ್ನು ಮರುಪಾವತಿಸಲಾಗುತ್ತದೆ.
ವ್ಯವಸ್ಥಾಪನಾ ಸಮಸ್ಯೆಗಳು: ಎಟಿಎಂಗಳಲ್ಲಿ ನಗದು ಖಾಲಿಯಾಗಿರಬಹುದು. ಈ ಸಂದೇಶ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ ಮತ್ತು ಡೆಬಿಟ್ ಮಾಡಿದ ಮೊತ್ತವನ್ನು ಸಾಮಾನ್ಯವಾಗಿ ತಕ್ಷಣವೇ ಮರುಪಾವತಿಸಲಾಗುತ್ತದೆ.
ವಂಚನೆ: ನಿಮ್ಮ ಕಾರ್ಡ್ ಅನ್ನು ಸೇರಿಸುವ ಮೊದಲು ಸ್ಕಿಮ್ಮರ್‌ಗಳಿಗಾಗಿ ಕಾರ್ಡ್ ಸ್ಲಾಟ್ ಅನ್ನು ಪರಿಶೀಲಿಸಿ. ಸ್ಕಿಮ್ಮರ್‌ಗಳು ಕಾರ್ಡ್ ಡೇಟಾವನ್ನು ಕದಿಯುತ್ತಾರೆ.
ಕಡಿತಗೊಂಡ ಹಣವನ್ನು ಮರಳಿ ಪಡೆಯುವುದು ಹೇಗೆ ?
ಕಸ್ಟಮರ್ ಕೇರ್‌ಗೆ ಕರೆ ಮಾಡಿ: ವಹಿವಾಟಿನ ಉಲ್ಲೇಖ ಸಂಖ್ಯೆಯನ್ನು ಒದಗಿಸುವ ಮೂಲಕ ನಿಮ್ಮ ಬ್ಯಾಂಕ್‌ನ 24/7 ಗ್ರಾಹಕ ಸೇವೆಗೆ ವಿಫಲ ವಹಿವಾಟನ್ನು ವರದಿ ಮಾಡಿ. ಆರ್‌ಬಿಐ 5 ದಿನಗಳಲ್ಲಿ ಮರುಪಾವತಿಯನ್ನು ಕಡ್ಡಾಯಗೊಳಿಸಿದ್ದು, ವಿಫಲವಾದರೆ ಬ್ಯಾಂಕ್‌ಗಳು ದಂಡವನ್ನು ಪಾವತಿಸುತ್ತವೆ.
ನಿಮ್ಮ ಬ್ಯಾಂಕ್‌ಗೆ ಭೇಟಿ ನೀಡಿ: ನಿಮ್ಮ ಶಾಖೆಗೆ ಭೇಟಿ ನೀಡಿ, ದೂರು ಟ್ರ್ಯಾಕಿಂಗ್ ಸಂಖ್ಯೆಯನ್ನು ಪಡೆದುಕೊಳ್ಳಿ ಮತ್ತು ಬ್ಯಾಂಕ್ ಪ್ರತಿನಿಧಿಯ ಸಂಪರ್ಕ ವಿವರಗಳನ್ನು ಗಮನಿಸಿ. ನೀವು ಬ್ಯಾಂಕಿನ ವೆಬ್‌ಸೈಟ್‌ನಲ್ಲಿಯೂ ದೂರು ಸಲ್ಲಿಸಬಹುದು. ಪರಿಹಾರವಾಗದಿದ್ದರೆ, 30 ದಿನಗಳ ನಂತರ ಆರ್‌ಬಿಐ ಅಥವಾ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ನೀಡಿ.
ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (NCDRC): 1986 ರ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಸ್ಥಾಪಿಸಲಾದ NCDRC, ಗ್ರಾಹಕರ ದೂರುಗಳನ್ನು ಪರಿಹರಿಸುತ್ತದೆದೆ.
ಕಾನೂನು ನೆರವು: ನಿಮ್ಮ ಮರುಪಾವತಿ ಒಂದು ತಿಂಗಳಿಗಿಂತ ಹೆಚ್ಚು ವಿಳಂಬವಾಗಿದ್ದರೆ, ಕಾನೂನು ಸಲಹೆಗಾರರನ್ನು ಸಂಪರ್ಕಿಸಿ.