ಬೆಂಗಳೂರು: ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಈ ಬಳಿಕ ಇಂದು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜೊತೆಗೆ ಮೂಲ ದಾಖಲೆಗಳ ಪರಿಶೀಲನೆಗೂ ದಿನಾಂಕ ನಿಗದಿಗೊಳಿಸಲಾಗಿದೆ.
ಇಂದು ರಾಜ್ಯ ಆಹಾರ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಈ ಕೆಳಕಂಡ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಸಾಮಾನ್ಯ ಪತ್ರಿಕೆ, ನಿರ್ದಿಷ್ಟ ಪತ್ರಿಕೆ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್ ಕಂಪ್ಯೂಟರ್ ಜ್ಞಾನ ಮುಂತಾದ ವಿಷಯಗಳಲ್ಲಿ ಸ್ಮರ್ಧಾತ್ಮಕ ಪರೀಕ್ಷೆಯನ್ನು ಅಕ್ಟೋಬರ್- 2023 ಮತ್ತು ನವೆಂಬರ್-2023ರ ಮಾಹೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿರುತ್ತದೆ ಎಂದಿದೆ.
- ಸಹಾಯಕ ವ್ಯವಸ್ಥಾಪಕರು – 10
- ಗುಣಮಟ್ಟ ನಿರೀಕ್ಷಕರು – 23
- ಹಿರಿಯ ಸಹಾಯಕರು (ಲೆಕ್ಕ) – 33
- ಹಿರಿಯ ಸಹಾಯಕರು -57
- ಕಿರಿಯ ಸಹಾಯಕರು – 263
- ಒಟ್ಟು ಹುದ್ದೆಗಳು -386
ಸ್ಮರ್ಧಾತ್ಮಕ ಪರೀಕ್ಷೆಯನ್ನು ನಡೆಸಿದ ತರುವಾಯ, ತಾತ್ಕಾಲಿಕ ಸರಿ ಉತ್ತರಗಳನ್ನು (ಕೀ ಉತ್ತರಗಳು) ದಿನಾಂಕ:04-12-2023 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಿಸಿ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿ, ಆಕ್ಷೇಪಿತ ಕೀ ಉತ್ತರಗಳನ್ನು ವಿಷಯ ತಜ್ಞರ ಸಮಿತಿಯ ಮೂಲಕ ಪರಿಶೀಲಿಸಿ ಅಂತಿಮ ಕೀ ಉತ್ತರಗಳನ್ನು ದಿನಾಂಕ:15-02-2024 ರಂದು ಪುಕಟಿಸಿರುತ್ತದೆ.
ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಅಂಕಪಟ್ಟಿಯನ್ನು ಅಭ್ಯರ್ಥಿಗಳ/ಹುದ್ದೆವಾರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ದಿನಾಂಕ: 20.06.2024 ರಂದು ಪ್ರಕಟಿಸಲಾಗಿರುತ್ತದೆ.
ಮುಂದುವರೆದು, ದಾಖಲಾತಿಗಳ ಪರಿಶೀಲನೆಗಾಗಿ, ಸೂಚಿತ ರಿಕ್ತ ಸ್ಥಾನಗಳ ಆಧಾರದ ಮೇಲೆ ಹುದ್ದೆವಾರು ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ವೆಬ್‌ಸೈಟ್ https://kfcsc.karnataka.gov.in ರಲ್ಲಿ 1:3 ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸದರಿ ಪಟ್ಟಿಯು ಆಯ್ಕೆ ಪಟ್ಟಿಯಾಗಿರುವುದಿಲ್ಲ ದಾಖಲಾತಿ ಪರಿಶೀಲನೆಗೆ ಸಂಬಂಧಿಸಿದಂತೆ ದಿನಾಂಕವನ್ನು ಮತ್ತು ಇತರೆ ಹೆಚ್ಚಿನ ಮಾಹಿತಿಯನ್ನು ನಂತರದಲ್ಲಿ https://kfcsc.karnataka.gov.in ರ ವೆಬ್ ಸೈಟ್‌ನಲ್ಲಿ ಪಕಟಿಸಲಾಗುವುದು ಎಂದು ತಿಳಿಸಿದೆ.
BREAKING: ಗದಗದಲ್ಲಿ ಹೃದಯ ವಿದ್ರಾವಕ ಘಟನೆ: ಮೂವರು ಮಕ್ಕಳನ್ನು ನದಿಗೆ ಎಸೆದು ತಂದೆ ಆತ್ಮಹತ್ಯೆ
ರೈತರಿಗೆ ಸಿಹಿ ಸುದ್ದಿ ; ಕೇಂದ್ರ ಸರ್ಕಾರದ ಈ ಯೋಜನೆಯಡಿ ‘2 ಲಕ್ಷ ಸಾಲ’ ಲಭ್ಯ, ನೀವೂ ಅರ್ಜಿ ಸಲ್ಲಿಸಿ