ಚಿಕ್ಕಮಗಳೂರು: ದತ್ತಮಾಲಾ ಅಭಿಯಾನವನ್ನು ನಡೆಸುತ್ತಿರುವ ಹಿನ್ನಲೆಯಲ್ಲಿ ನವೆಂಬರ್.9ರಿದಂ 11ರವರೆಗೆ ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣಗಳಾದಂತ ಮುಳ್ಳಯ್ಯನಗಿರಿ, ಮಾಣಿಕ್ಯಧಾರಾ, ಸೀತಾಳಯ್ಯನಗಿರಿ, ಗಾಳಿಕೆರೆ ಸೇರಿದಂತೆ ಚಂದ್ರದ್ರೋಣ ಪರ್ವತ ಶ್ರೇಣಿಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶಿಸಿದೆ.
ಈ ಸಂಬಂಧ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ದತ್ತ ಮಾಲಾಧಾರಿಗಳು 7 ದಿನಗಳ ಕಾಲ ವ್ರತ ಮಾಡಿ, ನವೆಂಬರ್.1ರಂದು ದತ್ತ ಪೀಠಕ್ಕೆ ಆಗಮಿಸುತ್ತಾರೆ. ಈ ಕಾರಣದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನವೆಂಬರ್.9ರ ಬೆಳಿಗ್ಗೆ 6ರಿಂದ ನವೆಂಬರ್.11ರ ಬೆಳಿಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ನವೆಂಬರ್.10ರಂದು ದತ್ತಪೀಠದಲ್ಲಿ ದತ್ತಮಾಲಾಧಾರಿಗಳಿಂದ ವಿಶೇಷ ಪೂಜೆ, ಹೋಮ ಹವನದಂತ ಕೈಂಕರ್ಯಗಳು ನಡೆಸಲಾಗುತ್ತಿದೆ. ಈ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ ಹಾಗೂ ಗಾಳಿಕೆರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಿ ಆದೇಶಿಸಲಾಗಿದೆ.
BREAKING : ತುಮಕೂರಲ್ಲಿ ಘೋರ ದುರಂತ : ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ದಾರುಣ ಸಾವು!
BREAKING: ರಾಜ್ಯ ‘ಅಬಕಾರಿ ಇಲಾಖೆ’ ಭ್ರಷ್ಟಾಚಾರ ಖಂಡಿಸಿ ಮುಷ್ಕರ: ನ.20ರಂದು ರಾಜ್ಯಾಧ್ಯಂತ ‘ಮದ್ಯ ಮಾರಾಟ’ ಬಂದ್