ಯಾದಗಿರಿ: ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಮಹಾಯಡವಟ್ಟು ಮಾಡಲಾಗಿದೆ. ರೌಡಿ ಶೀಟರ್ ಪಟ್ಟಿಯಲ್ಲಿದ್ದಂತವನನ್ನೇ ಸರ್ಕಾರಿ ಶಾಲೆಗೆ ಅತಿಥಿ ಶಿಕ್ಷಕನನ್ನಾಗಿನ ನೇಮಕ ಮಾಡಲಾಗಿದೆ. ಇಂತಹ ರೌಡಿ ಶೀಟರ್ ಉಪಟಳಕ್ಕೆ ಬೇಸತ್ತು ಆ ಶಾಲೆಯಿಂದ ಅನೇಕ ಶಿಕ್ಷಕರು ಬೇರೆಡೆಗೆ ವರ್ಗಾವಣೆ ಮಾಡಿಕೊಂಡು ಹೋಗಿರೋದಾಗಿ ಹೇಳಲಾಗುತ್ತಿದೆ.
ಯಾದಗರಿ ಜಿಲ್ಲೆಯ ಶಹಾಪುರ ತಾಲ್ಲೂಕು ರಸ್ತಾಪುರದಲ್ಲಿನ ಸರ್ಕಾರಿ ಶಾಲೆಗೆ ರೌಡಿ ಶೀಟರ್ ಭಾಗಪ್ಪ ಎಂಬುವರನ್ನೇ ಅತಿಥಿ ಶಿಕ್ಷಕರನ್ನಾಗಿ ನೇಮಿಸಲಾಗಿದೆ. ಕಳೆದ ಐದು ವರ್ಷಗಳಿಂದ ಹಿಂದಿ ಭಾಷಾ ಅತಿಥಿ ಶಿಕ್ಷಕನಾಗಿ ರೌಡಿ ಶೀಟರ್ ಭಾಗಪ್ಪ ಕೆಲಸ ಮಾಡುತ್ತಿದ್ದಾರೆ.
2017ರಲ್ಲಿ ಭಾಗಪ್ಪ ಅವರ ವಿರುದ್ಧ ರೌಡಿ ಶೀಟರ್ ಓಪನ್ ಮಾಡಲಾಗಿತ್ತು. ಈ ವಿಷಯ ಗೊತ್ತಿದ್ದರೂ, ಶಾಲಾ ಶಿಕ್ಷಣ ಇಲಾಖೆ ಮಾತ್ರ ಹಿಂದಿ ಭಾಷಾ ಅತಿಥಿ ಶಿಕ್ಷಕರನ್ನಾಗಿ ಭಾಗಪ್ಪ ಅವರನ್ನು ನೇಮಕ ಮಾಡಿ ಮಹಾ ಎಡವಟ್ಟು ಮಾಡಿದೆ.
ಕುಡಿದು ಬಂದು ಶಿಕ್ಷಕರಿಗೆ, ವಿದ್ಯಾರ್ಥಿಗಳ ಜೊತೆಗೆ ರೌಡಿ ಶೀಟರ್ ಭಾಗಪ್ಪ ಅಸಭ್ಯ ವರ್ತನೆ ಕೂಡ ತೋರುತ್ತಿದ್ದಾರಂತೆ ಅಂತೆ. ಇದೇ ಕಾರಣಕ್ಕಾಗಿ ಅವರನ್ನು ಅತಿಥಿ ಶಿಕ್ಷಕರ ಹುದ್ದೆಯಿಂದ ವಜಾಗೊಳಿಸುವಂತೆ ಯಾದಗಿರಿ ಡಿಸಿಗೂ ದೂರು ನೀಡಲಾಗಿದೆ.