ಬೆಂಗಳೂರು: ಬಿಬಿಎಂಪಿಯಲ್ಲಿ ಕಾಮಗಾರಿಯನ್ನು ನಿರ್ವಹಿಸಿರುವ ಗುತ್ತಿಗೆದಾರರಿಗೆ ಈಗಾಗಲೇ ಪಾವತಿ ಮಾಡಿರುವ ಬಿಲ್ಲುಗಳಲ್ಲಿ ತಡೆ ಹಿಡಿದಿರುವ ಶೇ.25ರಷ್ಟು ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು ಆದೇಶಿಸಿದೆ. ಈ ಮೂಲಕ ಪಾವತಿಸಲು ಬಾಕಿಯಿರುವ ಕಾಮಗಾರಿ ಬಿಲ್ಲುಗಳನ್ನು ಶೇ.100ರಷ್ಟು ಪಾವತಿ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲಕ್ಷ್ಮೀ ಸಾಗರ್ ಎನ್.ಕೆ ಅವರು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 2019-20 ರಿಂದ 2022-23 ರವರೆಗೆ ಪ್ರಮುಖವಾಗಿ ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳು, ರಸ್ತೆ ಅಭಿವೃದ್ಧಿ, ಓಎಫ್‌ಸಿ ಕೇಬಲ್ ಅಳವಡಿಕೆ, ಬೃಹತ್ ನೀರುಗಾಲುವೆ ಕಾಮಗಾರಿಗಳು, ಕೇಂದ್ರ/ವಲಯ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರಾತಿ | ಸ್ವಾಧೀನಾನುಭವ ಪತ್ರ ನೀಡುವಿಕೆ, ಕೆರೆಗಳ ಅಭಿವೃದ್ಧಿ ಕಾಮಗಾರಿಗಳು, ಯೋಜನೆಯಡಿಯಲ್ಲಿನ ಕಾಮಗಾರಿಗಳು ಮತ್ತು ವಾರ್ಡ್ ಮಟ್ಟದ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವಿವರವಾದ ತನಿಖೆಯನ್ನು ನಡೆಸಲು 4 ವಿಶೇಷ ತನಿಖಾ ತಜ್ಞರ | ಪರಿಣಿತರ ನೇತೃತ್ವದಲ್ಲಿ 4 ಪ್ರತ್ಯೇಖ ತನಿಖಾ ಸಂಸ್ಥೆಗಳನ್ನು ರಚಿಸಿ ಆದೇಶಿಸಲಾಗಿತ್ತು ಎಂದಿದ್ದಾರೆ.
ತನಿಖಾ ವರದಿಗಳು ಬರುವ ವರೆಗೂ ಕಾಮಗಾರಿಗಳ ಬಿಲ್ ಪಾವತಿಯಲ್ಲಿ ಶೇ..75% ರಷ್ಟನ್ನು ಪಾವತಿಸಿ ಶೇ.25 ರಷ್ಟನ್ನುತಡೆಹಿಡಿಯಲು ಆದೇಶಿಸಲಾಗಿರುತ್ತದೆ.
ಏತನ್ಮಧ್ಯೆ, ಒಳಾಡಳಿತ ಇಲಾಖೆಯ ಮೇಲೆ ಓದಲಾದ ಕ್ರಮ ಸಂಖ್ಯೆ (4)ರ ದಿನಾಂಕ: 25-08-2023ರ ಅಧಿಸೂಚನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿಗಳನ್ನು ನಡೆಸುವ ಇಲಾಖೆಗಳಾದ ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಗಳಲ್ಲಿ ಟೆಂಡರ್ ಪ್ರಕ್ರಿಯೆ ಪ್ಯಾಕೇಜ್ ಪದ್ಧತಿ ಪನರ್ ಅಂದಾಜು (Revised Estimate) ಬಾಕಿ ಮೊತ್ತ ಬಿಡುಗಡೆ, ಇತ್ಯಾದಿ ವಿಷಯಗಳಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರದ ಕುರಿತು ಸ್ಥಳ ಹಾಗೂ ದಾಖಲೆಗಳ ಪರಿಶೀಲನೆಯೊಂದಿಗೆ ವಿವರವಾದ ತನಿಖೆಯನ್ನು ನಡೆಸಿ, ಲೋಪದೋಷಗಳ ಮಾಹಿತಿ ಹಾಗೂ ತತ್ಸಂಬಂಧಿತ ಆರೋಪಿತರ ಸ್ಪಷ್ಟ ಗುರುತಿಸುವಿಕೆಯ ಸಹಿಯ ಪರಿಪೂರ್ಣ ತನಿಖೆ ನಡೆಸಲು ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಶ್ರೀ ಹೆಚ್.ಎನ್. ನಾಗಮೋಹನ್ ದಾಸ್ ರವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿ ಆದೇಶಿಸಲಾಗಿರುತ್ತದೆ.
ಆದ್ದರಿಂದ, ನಗರಾಭಿವೃದ್ಧಿ ಇಲಾಖೆಯಿಂದ ರಚಿಸಲಾದ 4 ಹಿರಿಯ IAS ಅಧಿಕಾರಿಗಳ ನೇತೃತ್ವದ ತನಿಖಾ ಸಮಿತಿಗಳ ವಸ್ತು ವಿಷಯದ ವ್ಯಾಪ್ತಿ ಹಾಗೂ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ರವರ ನೇತೃತ್ವದಲ್ಲಿ ತನಿಖಾ ಆಯೋಗದ ವಸ್ತು ವಿಷಯದ ವ್ಯಾಪ್ತಿ ಒಂದೇ ಆಗಿದ್ದರಿಂದ ಮಾನ್ಯ ಉಚ್ಚ ನ್ಯಾಯಾಲಯವು ಈ ಕುರಿತು ಪರಿಶೀಲಿಸಿ ನಿಲುವು ತಿಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ, ಮೇಲೆ ಓದಲಾದ ಕ್ರಮ ಸಂಖ್ಯೆ (5)ರ ದಿನಾಂಕ: 15-12- 2023ರ ಆದೇಶದಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ರಚಿಸಲಾದ 4 ಹಿರಿಯ IAS ಅಧಿಕಾರಿಗಳ ನೇತೃತ್ವದಲ್ಲಿ ರಚಿಸಲಾದ ತನಿಖಾ ಸಮಿತಿಗಳನ್ನು ಹಿಂಪಡೆದು, ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಶ್ರೀ ಹೆಚ್.ಎನ್. ನಾಗಮೋಹನ್ ದಾಸ್ ರವರ ನೇತೃತ್ವದಲ್ಲಿ ತನಿಖಾ ಆಯೋಗವು ಬಿಬಿಎಂಪಿ ಸೇರಿದಂತೆ ಎಲ್ಲಾ ಇಲಾಖೆಗಳ ತನಿಖೆಯನ್ನು ಮುಂದುವರೆಸಲಾಗಿರುತ್ತದೆ.
ಮುಖ್ಯ ಆಯುಕ್ತರು, ಬಿಬಿಎಂಪಿ ಇವರು ಮೇಲೆ ಓದಲಾದ ಕ್ರಮ ಸಂಖ್ಯೆ (6)ರ ದಿನಾಂಕ: 01-06-2024ರ ಪತ್ರದಲ್ಲಿ ದಿನಾಂಕ: 18-01-2024 ಮತ್ತು 07-05-2024 ರಂದು ಗುತ್ತಿಗೆದಾರರ ಸಂಘದವರು ಬಿಬಿಎಂಪಿಗೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಕೋರಿ ಮನವಿ ಸಲ್ಲಿಸಿರುತ್ತಾರೆ. ಈ ಸಂಬಂಧ ದಿನಾಂಕ: 07-05-2024ರಂದು ಸಂಘದ ಪದಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ, ಚರ್ಚಿಸಿದಂತೆ ಈ ಕೆಳಕಂಡ ಪ್ರಮುಖ ಬೇಡಿಕೆಗಳನ್ನು ತುರ್ತಾಗಿ ಈಡೇರಿಸಲು ಒತ್ತಾಯಿಸಿರುತ್ತಾರೆ.
1. ಗೌರವಾನ್ವಿತ ನ್ಯಾಯಮೂರ್ತಿರವರ ಸಮಿತಿಯೊಳಗೆ ತನಿಖೆಗೆ ಒಳಪಟ್ಟಿರುವ ಸರ್ಕಾರದ ಬೇರೆ ಇಲಾಖೆಗಳಲ್ಲಿ ಕಾಮಗಾರಿ ಬಿಲ್ಲುಗಳ ಮೊತ್ತವನ್ನು ಶೇ.100ರಷ್ಟು ಪಾವತಿಸಿದ್ದು, ಆದರೆ, ಬಿಬಿಎಂಪಿಯಲ್ಲಿ ಮಾತ್ರ ಕಾಮಗಾರಿ ಬಿಲ್ಲುಗಳ ಮೊತ್ತ ಶೇ.75ರಷ್ಟುನ್ನು ಪಾವತಿಸಲಾಗುತ್ತಿದೆ. ಸರ್ಕಾರದ ಬೇರೆ ಇಲಾಖೆಗಳ ರೀತಿಯಲ್ಲಿಯೇ ಕಾಮಗಾರಿ ಬಿಲ್ಲುಗಳ ಮೊತ್ತವನ್ನು ಶೇ.100ರಷ್ಟು ಪಾವತಿಸಲು ಕ್ರಮವಹಿಸುವಂತೆ ಕೋರಿದರು.
2. ಏಪ್ರಿಲ್ -2021 ರಿಂದ ಇಲ್ಲಿಯವರೆವಿಗೂ ಪಾವತಿಸಬೇಕಾದ ಎಲ್ಲಾ ಕಾಮಗಾರಿ ಬಿಲ್ಲುಗಳಲ್ಲಿ ಶೇ.25ರಷ್ಟು ಹಣವನ್ನು ತಡೆಹಿಡಿದ್ದು, ಶೇ.75ರಷ್ಟು ಹಣವನ್ನು ಮಾತ್ರ ಪಾವತಿ ಮಾಡಲಾಗುತ್ತಿರುತ್ತದೆ. ಬಿಲ್ ಸಲ್ಲಿಸಿ 3 ವರ್ಷಗಳಾದರೂ ಸಹ ಬಿಲ್ಲಿನ ಸಂಪೂರ್ಣ ಹಣ ಗುತ್ತಿಗೆದಾರರಿಗೆ ಪಾವತಿಯಾಗುತ್ತಿರುವುದಿಲ್ಲ. ಆದ ಕಾರಣ ತಡೆಹಿಡಿಯಲಾಗಿರುವ ಬಾಕಿ ಶೇ.25ರಷ್ಟು ಹಣವನ್ನು ಬಿಡುಗಡೆ ಮಾಡುವಂತೆ ಕೋರಿದರು.
3. ಶೇ.75ರಷ್ಟು ಪಾವತಿ ಮಾಡಿರುವ ಕಾಮಗಾರಿ ಬಿಲ್ಲುಗಳಿಗೆ ಶೇ.18% ರಂತೆ ಸಂಪೂರ್ಣ ಬಿಲ್ಲಿನ ಮೊತ್ತಕ್ಕೆ GST ಮೊತ್ತವನ್ನು ಪಾವತಿಸಬೇಕಾಗಿರುವುದರಿಂದ ಗುತ್ತಿಗೆದಾರರು ತುಂಬಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ತಿಳಿಸಿರುತ್ತಾರೆ.
ಈ ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ, ಗುತ್ತಿಗೆದಾರರಿಗೆ ಈಗಾಗಲೇ ಪಾವತಿ ಮಾಡಿರುವ ಬಿಲ್ಲುಗಳಲ್ಲಿ ತಡೆಹಿಡಿದಿರುವ ಶೇ.25 ರಷ್ಟು ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು ಹಾಗೂ ಪಾವತಿಸಲು ಬಾಕಿಯಿರುವ ಕಾಮಗಾರಿ ಬಿಲ್ಲುಗಳನ್ನು ಶೇ.100 ರಷ್ಟು ಪಾವತಿ ಮಾಡುವ ಸಂಬಂಧ ಸರ್ಕಾರದ ಆದೇಶವನ್ನು ಕೋರಿರುತ್ತಾರೆ.
ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ರವರ ನೇತೃತ್ವದ ಆಯೋಗಕ್ಕೆ ಒಳಪಟ್ಟಿರುವ ಸರ್ಕಾರದ ಇತರೆ ಇಲಾಖೆಗಳಾದ ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇತರೆ ಮಹಾನಗರ ಪಾಲಿಕೆಗಳು ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿಯೂ ಕಾಮಗಾರಿಗಳ ಬಿಲ್‌ಗಳ ಮೊತ್ತವನ್ನು ಶೇ.100 ರಷ್ಟು ಪಾವತಿಸುತ್ತಿರುವುದು ಗಮನಕ್ಕೆ ಬಂದಿದ್ದು ಹಾಗೂ ರಾಜ್ಯದ ಎಲ್ಲಾ ಇಲಾಖೆಗಳ ಬಿಲ್ ಪಾವತಿಯಲ್ಲಿ ಏಕರೂಪತೆ ಕಾಯ್ದುಕೊಳ್ಳಬೇಕಾಗಿರುವುದರಿಂದ ದಿನಾಂಕ: 01-06-2024ರ ಮುಖ್ಯ ಆಯುಕ್ತರು, ಬಿಬಿಎಂಪಿ ರವರು ಕೋರಿರುವಂತೆ “ಗುತ್ತಿಗೆದಾರರಿಗೆ ಈಗಾಗಲೇ ಪಾವತಿ ಮಾಡಿರುವ ಬಿಲ್ಲುಗಳಲ್ಲಿ ತಡೆಹಿಡಿದಿರುವ ಶೇ.25% ರಷ್ಟು ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು ಹಾಗೂ ಪಾವತಿಸಲು ಬಾಕಿಯಿರುವ ಕಾಮಗಾರಿ ಬಿಲ್ಲುಗಳನ್ನು ಶೇ.100 ರಷ್ಟು ಪಾವತಿ ಮಾಡುವ ಸಂಬಂಧ” ಮಾನ್ಯ ಆಯೋಗದ ಅಮೂಲ್ಯ ಅಭಿಪ್ರಾಯವನ್ನು ನೀಡುವಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (7)ರ ದಿನಾಂಕ: 20-09-2024ರಲ್ಲಿ ಆಯೋಗಕ್ಕೆ ಪತ್ರವನ್ನು ಬರೆಯಲಾಗಿತ್ತು.
ಅದರಂತೆ, ಸದಸ್ಯ ಕಾರ್ಯದರ್ಶಿಗಳು, ಗೌರವಾನ್ವಿತ ಹೆಚ್.ಎನ್. ನಾಗಮೋಹನ್ ದಾಸ್ ವಿಚಾರಣಾ ಆಯೋಗ, ಬೆಂಗಳೂರು ಇವರು ಮೇಲೆ ಓದಲಾದ ಕ್ರಮ ಸಂಖ್ಯೆ (8)ರ ದಿನಾಂಕ: 30-09-2024ರ ಪತ್ರದಲ್ಲಿ ಈ ಕೆಳಕಂಡಂತೆ ಅಭಿಪ್ರಾಯವನ್ನು ನೀಡಿರುತ್ತಾರೆ.
ಈ ಆಯೋಗವು ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಗಳಲ್ಲಿ ಕಾಮಗಾರಿಗಳ ಅನುಷ್ಟಾನದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಭ್ರಷ್ಟಚಾರದ ಕುರಿತು ತನಿಖೆಯನ್ನು ನಡೆಸಿ ವರದಿ ನೀಡಬೇಕೆಂದು ಸರ್ಕಾರ ಆದೇಶಿಸಿದೆ. ಆದರಂತೆ ಆಯೋಗ ಕಾರ್ಯನಿರ್ವಹಿಸುತ್ತಿದೆ ಇಲ್ಲಿಯವರೆಗೂ ಈ ಆಯೋಗ ಯಾವ ಇಲಾಖೆಯ ಗುತ್ತಿಗೆದಾರರ ಬಿಲ್ಲುಗಳನ್ನು ತಡೆಹಿಡಿಯಬೇಕೆಂದು ಸೂಚಿಸಿಲ್ಲ ಮತ್ತು ಈ ವಿಚಾರ ಆಯೋಗದ ತನಿಖಾ ವ್ಯಾಪ್ತಿಗೆ ಒಳಪಟ್ಟಿಲ್ಲ.
ಈ ಆಯೋಗವು ಬಿಬಿಎಂಪಿ ವ್ಯಾಪ್ತಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳ ಬ್ಯಾಂಡಮ್ ಸೆಲೆಕ್ಷನ್ ಆಧಾರದ ಮೇಲೆ ಕೆಲವು ಕಾಮಗಾರಿಗಳ ಕಡತಗಳನ್ನು ಪರಿಶೀಲಿಸುತ್ತಿದೆ ಇದರ ಜೊತೆಗೆ ಸರ್ಕಾರ ರಚಿಸಲಾಗಿದ್ದ 04 ತನಿಖಾ ಸಮಿತಿಗಳನ್ನು ರದ್ದುಪಡಿಸಿ ಆ ಕಾರ್ಯವನ್ನೂ ಆಯೋಗಕ್ಕೆ ವಹಿಸಲಾಗಿದೆ. ಈ ವಿಚಾರದಲ್ಲಿ ಬಿ.ಬಿ.ಎಂ.ಪಿ.ಯಿಂದ ಸಂಬಂಧಪಟ್ಟ ಕಡತಗಳನ್ನು ಮತ್ತು ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಈ ಹಂತದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳ ಲೋಪದೋಷವನ್ನು ಸಂಬಂಧಪಟ್ಟ ಅಧಿಕಾರಿಗಳು ಯಾರು ಗುತ್ತಿಗೆದಾರರು ಯಾರು ಮತ್ತು ಆರ್ಥಿಕ ಹೊರೆ ಏನೂ ಎಂಬುದನ್ನು ಸ್ಪಷ್ಟವಾಗಿ ತಿಳಿಯಪಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಶೇ. 25 ರಷ್ಟು ಗುತ್ತಿಗೆದಾರರ ತಡೆಹಿಡಿದಿರುವ ಬಿಲ್ಲುಗಳನ್ನು ಸೂಕ್ತ ಬ್ಯಾಂಕ್ ಗ್ಯಾರಂಟಿಯನ್ನು ಪಡೆದು ನೀಡಬಹುದಾಗಿದೆ.
ಬಿಬಿಎಂಪಿ ಯ ಕೆಲವು ಗುತ್ತಿಗೆದಾರರು ತಾವು ನಿರ್ವಹಿಸಿದ ಕಾಮಗಾರಿಗಳ ಬಿಲ್ಲುಗಳನ್ನು ವಿನಾಕಾರಣ ತಡೆಹಿಡಿಯಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಘಕ 27053/2023 ಪ್ರಕರಣವನ್ನು ದಾಖಲಿಸಿ ಬಾಕಿ ಬಿಲ್ಲುಗಳನ್ನು ಪಾವತಿಸಬೇಕೆಂದು ಕೋರಿರುತ್ತಾರೆ.
ನ್ಯಾಯಲಯದ ಮುಂದೆ ದಿನಾಂಕ 13.02.2024 ರಂದು ಅಡ್ವಕೇಟ್ ಜನರಲ್ ರವರು ಹಾಜರಾಗಿ ಈ ಕೆಳಕಂಡಂತೆ ಹೇಳಿಕೆಯನ್ನು ನೀಡಿರುತ್ತಾರೆ.
The learned advocate general would further submit that the continuation of the enquiry before the commission has nothing to do, for any payment to be made interms of the order Dated 13.12.2023.
ಮೇಲೆ ತಿಳಿಯಪಡಿಸಿದಂತೆ ಸರ್ಕಾರವು ಗುತ್ತಿಗೆದಾರರಿಗೆ ಬಾಕಿ ಇರುವ ಶೇ.25 ರಷ್ಟು ಬಿಲ್ಲುಗಳನ್ನು ಬ್ಯಾಂಕ್ ಗ್ಯಾರೆಂಟಿ ಪಡೆದು ಪಾವತಿಸಿಬಹುದಾಗಿದೆ ಎಂಬ ವಿಷಯದಲ್ಲಿ ಸರ್ಕಾರ ತನ್ನ ವಿವೇಚನೆಯಂತೆ ತಿರ್ಮಾನಿಸುವುದು.
ಈ ಬಗ್ಗೆ ಪರಿಶೀಲಿಸಿ, ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಶ್ರೀ ಹೆಚ್.ಎನ್. ನಾಗಮೋಹನ್ ರವರ ನೇತೃತ್ವದ ಆಯೋಗಕ್ಕೆ ಒಳಪಟ್ಟಿರುವ ಸರ್ಕಾರದ ಇತರೆ ಇಲಾಖೆಗಳಾದ ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇತರೆ ಮಹಾನಗರ ಪಾಲಿಕೆಗಳು ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿಯೂ ಕಾಮಗಾರಿಗಳ ಬಿಲ್‌ಗಳ ಮೊತ್ತವನ್ನು ಶೇ.100 ರಷ್ಟು ಪಾವತಿಸುತ್ತಿರುವುದು ಗಮನಕ್ಕೆ ಬಂದಿದ್ದು ಹಾಗೂ ರಾಜ್ಯದ ಎಲ್ಲಾ ಇಲಾಖೆಗಳ ಬಿಲ್ ಪಾವತಿಯಲ್ಲಿ ಏಕರೂಪತೆ ಕಾಯ್ದುಕೊಳ್ಳಬೇಕಾಗಿರುವುದರಿಂದ ದಿನಾಂಕ: 01-06-2024ರ ಪತ್ರದಲ್ಲಿ ಮುಖ್ಯ ಆಯುಕ್ತರು, ಬಿಬಿಎಂಪಿ ರವರು ಕೋರಿರುವಂತೆ ಹಾಗೂ ಮಾನ್ಯ ಆಯೋಗದ ಅಭಿಪ್ರಾಯದನುಸಾರ ಗುತ್ತಿಗೆದಾರರಿಗೆ ಈಗಾಗಲೇ ಪಾವತಿ ಮಾಡಿರುವ ಬಿಲ್ಲುಗಳಲ್ಲಿ ತಡೆಹಿಡಿದಿರುವ ಶೇ.25% ರಷ್ಟು ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು ಹಾಗೂ ಪಾವತಿಸಲು ಬಾಕಿಯಿರುವ ಕಾಮಗಾರಿ ಬಿಲ್ಲುಗಳನ್ನು ಶೇ.100 ರಷ್ಟು ಪಾವತಿ ಮಾಡುವ ಸಂಬಂಧ ಈ ಕೆಳಕಂಡಂತೆ ತೀರ್ಮಾನಿಸಿ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಮುಖ್ಯ ಆಯುಕ್ತರು ಬಿಬಿಎಂಪಿ ಇವರ ದಿನಾಂಕ: 01-06-2024ರ ಪ್ರಸ್ತಾವನೆಯನ್ನು ಪರಿಗಣಿಸಿ, ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಶ್ರೀ ಹೆಚ್.ಎನ್. ನಾಗಮೋಹನ್ ದಾಸ್ ವಿಚಾರಣಾ ಆಯೋಗದ ಅಂತಿಮ ವರದಿಯ ತೀರ್ಮಾನಕ್ಕೆ ಒಳಪಟ್ಟು, ಗುತ್ತಿಗೆದಾರರಿಗೆ ಈಗಾಗಲೇ ಪಾವತಿ ಮಾಡಿರುವ ಬಿಲ್ಲುಗಳಲ್ಲಿ ತಡೆಹಿಡಿದಿರುವ ಶೇ.25% ರಷ್ಟು ಬಾಕಿ ಮೊತ್ತವನ್ನು ಪಾವತಿಸಲು ಹಾಗೂ ಪಾವತಿಸಲು ಬಾಕಿಯಿರುವ ಕಾಮಗಾರಿ ಬಿಲ್ಲುಗಳಲ್ಲಿ ಈ ಕೆಳಕಂಡ ಷರತ್ತಿಗೊಳಪಟ್ಟು ಶೇ.100 ರಷ್ಟು ಪಾವತಿಸುವಂತೆ ಆದೇಶಿಸಿದೆ.
1. Besides 5% of the cost of the work (performance guarantee) which is already taken by BBMP another 5% of the cost of work shall be kept as further security against any defect found by the Justice Nagmohan Das Committee either in the form of additional bank guarantee or withholding of equivalent amount in the bill and remaining of the 25% of the bill amount may be paid.
2. In any case where the original 5% performance guarantee has been returned the money shall be withheld to an amount of 10% of the work cost or a bank guarantee of the same amount.
3. In short the BBMP shall keep a total of 10% of the work cost as security deposit either in the form of Bank guarantee or in the form of partial money deposit and partial bank guarantee.
ಅಮೇರಿಕಾ ಅಧ್ಯಕ್ಷೀಯ ಚುನಾವಣೆ: ಇವು ಕಮಲಾ ಹ್ಯಾರಿಸ್- ಟ್ರಂಪ್ ಹಣೆಬರಹ ಬದಲಾಯಿಸುವ 7 ರಾಜ್ಯಗಳು
BREAKING : ತುಮಕೂರಲ್ಲಿ ಘೋರ ದುರಂತ : ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ದಾರುಣ ಸಾವು!