ಚಿತ್ರದುರ್ಗ: ಜಿಲ್ಲೆಯ ಪೊಲೀಸರಿಂದ ಜೂಜಾಟದಲ್ಲಿ ತೊಡಗಿದ್ದವರ ವಿರುದ್ಧ ಭರ್ಜರಿ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಇಸ್ಪಿಟ್ ಆಟದಲ್ಲಿ ತೊಡಗಿದ್ದಂತ 9 ಮಂದಿಯನ್ನು ಬಂಧಿಸಲಾಗಿದೆ.
ಈ ಕುರಿತಂತೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ಗುಡ್ಡವೊಂದರಲ್ಲಿ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಎಸ್ ಪಿ ರಂಜಿತ್ ಕುಮಾರ್ ಬಂಡಾರು ಮಾರ್ಗದರ್ಶನದಲ್ಲಿ ಐಮಂಗಲ ವೃತ್ತ ನಿರೀಕ್ಷಕರು ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ವಿಶೇಷ ವಿಭಾಗದ ಪ್ರಭಾರ ಪೊಲೀಸ್ ನಿರೀಕ್ಷಕರಾದ ಗುಡ್ಡಪ್ಪ ಎನ್ ನೇತೃತ್ವದಲ್ಲಿ, ಪಿಎಸ್ಐ ದಾದಪೀರ್, ಎಎಸ್ಐ ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ಪ್ರದೀಪ್, ಮಧು, ಐಮಂಗಲ ಠಾಣೆಯ ಎಹೆಚ್ ಸಿ ಪ್ರವೀಣ್, ಖದರ್ ಬಾಷಾ, ಎಪಿಸಿ ಹರ್ಷ, ಭೀಮಣ್ಣ ತಂಡದಿಂದ ದಾಳಿಯನ್ನು ನಡೆಸಲಾಗಿತ್ತು.
ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಂತ ದೀಪು @ ದೀಪಕ್ ತಂದೆ ಗಂಗಾಧರ, ಮಲ್ಲಿಕಾರ್ಜನ ಮತ್ತು ಇತರರು ಸೇರಿದಂತೆ 7 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳಿಂದ 5,30,160 ನಗದು, 11 ಮೊಬೈಲ್ ಪೋನ್, 11 ಮೋಟಾರ್ ಬೈಕ್, 52 ಇಸ್ಪೀಟ್ ಎಲೆ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದೆ.
ಇನ್ನೂ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪಿಐ ಗುಡ್ಡಪ್ಪ, ಪಿಎಸ್ಐ ದಾದಪೀರ್, ಎಎಸ್ಐ ತಿಪ್ಪೇಸ್ವಾಮಿ ಹಾಗೂ ಸಿಬ್ಬಂದಿಗಳಾದ ಮಧು, ಪ್ರದೀಪ್, ಹರ್ಷ, ಖದರ್ ಬಾಷ್, ಭೀಮಣ್ಣ ಮತ್ತು ಪ್ರದೀಪ್ ಅವರುಗಳನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದಂತ ರಂಜಿತ್ ಕುಮಾರ್ ಬಂಡಗಾರು ಶ್ಲಾಘಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಜಿಲ್ಲಾ ಪೊಲೀಸ್ ಕಛೇರಿಯ ವಿಶೇಷ ವಿಭಾಗದ ಅಧಿಕಾರಿ & ಸಿಬ್ಬಂದಿಗಳಿಂದ ಅಕ್ರಮವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ 9 ಜನರ ಬಂಧನ, 5,32,750/-ನಗದು ಹಣ, 11 ಬೈಕ್ ಮತ್ತು 11 ಮೋಬೈಲ್ ಪೋನ್‌ಗಳ ವಶಪಡಿಸಿಕೊಂಡಿರುತ್ತಾರೆ.@DgpKarnataka @KarnatakaCops @112chitradurga pic.twitter.com/XplDscxKVG
— Chitradurga District Police (@spchitradurga) November 3, 2024
BIG NEWS: ಬೆಳಗಾವಿಯ ಅಥಣಿ ತಾಲೂಕಿನ ರೈತರಿಗೂ ಶಾಕ್: 7 ಎಕರೆ ಜಾಗ ತನ್ನದೆಂದು ವಕ್ಫ್ ಬೋರ್ಡ್ ನೋಟಿಸ್
ಮುಸ್ಲಿಮರ ಓಲೈಕೆಗಾಗಿ ಜಮೀನು ಕಬಳಿಕೆ, ಇದರ ವಿರುದ್ಧ ಬಿಜೆಪಿ ಬೃಹತ್ ಹೋರಾಟ: ಆರ್.ಅಶೋಕ್