ವಿಜಯಪುರ: ಜಿಲ್ಲೆಯಲ್ಲಿ ರೈಲ್ವೆ ಸಿಬ್ಬಂದಿಗಳು ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ಈ ಮೂಲಕ ಕನ್ನಡಮ್ಮನ ಡಿಂಢಿಮದ ಕಹಳೆ ಮೊಳಗಿಸಿದರು.
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ವಿಜಯಪುರ ರೈಲ್ವೆ ನಿಲ್ದಾಣದಲ್ಲಿ ವಿಜಯಪುರ ರೈಲ್ವೆ ಸಿಂಬ್ಬಂದಿಗಳಿಂದ ತಾಯಿ ಭುವನೇಶ್ವರಿಯ 69ನೇ ಕನ್ನಡ ರಾಜೋತ್ಸವವನ್ನು ಸಡಗರ, ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಲಾಯಿತು.
ಎಲ್ಲರೂ ಒಗ್ಗಟಾಗಿ ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಕನ್ನಡವೇ ಜಾತಿ, ಕನ್ನಡವೇ ಧರ್ಮ ಹೀಗೆ ಹಲವಾರು ಘೋಷಣೆಯನ್ನು ಕೂಗುವ ಮೂಲಕ ಇಡೀ ನಿಲ್ದಾಣಕ್ಕೆ ಕಳೆಗಟ್ಟುವಂತೆ ಮಾಡಿದರು.
ಈ ಸಂದರ್ಭದಲ್ಲಿ ನಿಲ್ದಾಣದ ವ್ಯವಸ್ಥಾಪಕರಾದ ಎಂ. ವೈ. ಪಾಟೀಲ, ಸಹಾಯಕ ವಿಭಾಗೀಯ ಇಂಜಿನಿಯರ್ ಚಂದನ್ ಕುಮಾರ್ ಝಾ, ಹಿರಿಯ ಸೆಕ್ಷನ್ ಎಂಜಿನಿಯರ್ ರಾಜಕುಮಾರ್ ಜಾಧವ್, ಆರ್ ಪಿಎಫ್ ಪುಟ್ಟಸ್ವಾಮಿ ಗೌಡ, ನೈಋತ್ಯ ರೈಲ್ವೆ ಮಜ್ದೂರ್ ಸಂಘದ ಕಾರ್ಯದರ್ಶಿ ಎಂ. ಡಿ. ಆತ್ತಾರ್, ಗೂಡ್ಸ್ ಟ್ರೈನ್ ಮ್ಯಾನೇಜರ್ ಪರಶುರಾಮ ಚವ್ಹಾಣ ಹಾಗೂ ಇತರರು ಭಾಗವಹಿಸಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಜಯಪುರ ರೈಲ್ವೆ ಕನ್ನಡ ಬಳಗದ ವತಿಯಿಂದ ಸತತವಾಗಿ ಐದು ದಿನಗಳ ಕಾಲ ಕ್ರಿಕೆಟ್, ಚೆಸ್, ವಾಲಿಬಾಲ್, ಕೇರಂ ಮತ್ತು ರಂಗೋಲಿ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಎಲ್ಲರ ಗಮನ ಸೆಳೆಯಲಾಗಿತ್ತು. ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
BREAKING: ಗೋಕುಂಟೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಧಾರುಣವಾಗಿ ಸಾವು
ಮುಸ್ಲಿಮರ ಓಲೈಕೆಗಾಗಿ ಜಮೀನು ಕಬಳಿಕೆ, ಇದರ ವಿರುದ್ಧ ಬಿಜೆಪಿ ಬೃಹತ್ ಹೋರಾಟ: ಆರ್.ಅಶೋಕ್