ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಆತ್ಮಹತ್ಯೆ ಬಳಿಕ, ಅವರ ಪತ್ನಿ ಸುಮಿತ್ರಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇಂದು ಮಾದನಾಯಕನಹಳ್ಳಿ ಠಾಣಗೆ ತೆರಳಿರುವಂತ ಗುರುಪ್ರಸಾದ್ 2ನೇ ಪತ್ನಿ ಸುಮಿತ್ರಾ ಅವರು, ನನ್ನ ಪತಿಯನ್ನು ಅಕ್ಟೋಬರ್.25ರಂದು ಸಂಪರ್ಕಿಸಲು ಪ್ರಯತ್ನಿಸಿದ್ದೆ. ಆದರೇ ಅವರು ಕರೆ ಸ್ವೀಕರಿಸಲಿಲ್ಲ. ಬ್ಯುಸಿ ಇರಬಹುದು ಎಂಬುದಾಗಿ ಸುಮ್ಮನಾಗಿದ್ದೆ ಎಂಬುದಾಗಿ ತಿಳಿಸಿದ್ದಾರೆ.
ಅನಾರೋಗ್ಯದ ಕಾರಣ ನನ್ನನ್ನು ಪತಿ ಗುರುಪ್ರಸಾದ್ ತವರು ಮನೆಗೆ ಕಳುಹಿಸಿದ್ದರು. ಅವರು ಕರೆ ಸ್ವೀಕರಿಸದ ಕಾರಣ ಅಪಾರ್ಮೆಂಟ್ ನಿವಾಸಿ ಜಯರಾಮ್ ಸಂಪರ್ಕಿಸಿದ್ದೆ. ಅವರು ಪತಿ ಗುರುಪ್ರಸಾದ್ ಮನೆಗೆ ತೆರಳಿ ಬಾಗಿಲು ಬಿಡಿದ್ರೂ ತೆಗೆದಿರಲಿಲ್ಲ ಎಂದರು.
ಇಂದು ಬೆಳಿಗ್ಗೆ 11 ಗಂಟೆಗೆ ಅಪಾರ್ಮೆಂಟ್ ನಿವಾಸಿ ಜಯರಾಮ್ ಗುರು ಪ್ರಸಾದ್ ಮನೆಗೆ ತೆರಳಿ ನೋಡಿದ್ದಾರೆ. ಆಗ ಏನೋ ಮನೆಯ ಒಳಗಿನಿಂದ ವಾಸನೆ ಬರುತ್ತಿರುವುದಾಗಿ ತಿಳಿಸಿದರು. ಆ ನಂತ್ರವೇ ನನಗೆ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರುವಂತ ವಿಷಯ ತಿಳಿದು ಬಂದಿರುವುದಾಗಿ ದೂರಿನಲ್ಲಿ ಹೇಳಿದ್ದಾರೆ.
ಮುಸ್ಲಿಮರ ಓಲೈಕೆಗಾಗಿ ಜಮೀನು ಕಬಳಿಕೆ, ಇದರ ವಿರುದ್ಧ ಬಿಜೆಪಿ ಬೃಹತ್ ಹೋರಾಟ: ಆರ್.ಅಶೋಕ್
ಪ್ರಯಾಣಿಕರಿಗೆ ಗುಡ್ ನ್ಯೂಸ್: ಛತ್ ಪೂಜೆ ಹಬ್ಬಕ್ಕೆ ವಿಶೇಷ ರೈಲು ಸಂಚಾರ