ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಲೊಟ್ಟೆಗೊಲ್ಲ ಹಳ್ಳಿ ಭೂ ಪ್ರಕರಣದಲ್ಲಿ ಮಾಡಿರಬಹುದಾದ ವಂಚನೆ, ಅವರ ಶಿಕ್ಷಣ ಸಂಸ್ಥೆಗೆ ಪಡೆದಿರುವ ಅಕ್ರಮ ಭೂಮಿ, ಕಂದಾಯ ಸಚಿವರಾಗಿ ಅಕ್ರಮವಾಗಿ ಹಂಚಿರುವ ಭೂಮಿಯ ಆರೋಪಗಳಿಗೆ ಸಾರ್ವಜನಿಕವಾಗಿ ಇಲ್ಲಿಯವರೆಗೆ ಉತ್ತರ ನೀಡದೆ ಪಲಾಯನ ಮಾಡುತ್ತಿರುವ ಆರ್. ಅಶೋಕ್ ರವರು, ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಮೇಲೆ ಮಾತನಾಡುವ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂಬುದಾಗಿ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ವಾಗ್ಧಾಳಿ ನಡೆಸಿದ್ದಾರೆ.
ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕರ್ನಾಟಕದ ನವರಂಗಿ ವಿರೋಧ ಪಕ್ಷದ ನಾಯಕ ಶ್ರೀ ಆರ್ ಅಶೋಕ್ ರವರು ಚನ್ನಪಟ್ಟಣದ ಉಪಚುನಾವಣೆಯಲ್ಲಿ ಮಾತನಾಡುವಾಗ ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧ ಉಪಚುನಾವಣೆ ನಡೆಯುತ್ತಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಅಥವಾ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಉಪಚುನಾವಣೆಗಳನ್ನು ದುರಾಡಳಿತದ ಮೇಲೆ ನಡೆಸುವ ಅವಶ್ಯಕತೆ ಇರುವುದಿಲ್ಲ. ಅಂತಹ ಅವಶ್ಯಕತೆ ಏನಾದರೂ ಇದ್ದರೆ ಅದು ಭಾರತೀಯ ಜನತಾ ಪಕ್ಷದ ನಾಯಕರಿಗೆ ಮತ್ತು ಅವರ ಪಕ್ಷಕ್ಕೆ ಇರುತ್ತದೆ. ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಿರುವುದು ಅವರ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಉಳಿಸಿಕೊಳ್ಳುವ ಹತಾಶ ಪ್ರಯತ್ನ. ಕರ್ನಾಟಕದ ನವರಂಗಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಮಾತನಾಡುವಾಗ ಕಾಂಗ್ರೆಸ್ ಪಕ್ಷದ ದುರಳಿತದ ವಿರುದ್ಧ ಉಪಚುನಾವಣೆ ನಡೆಯುತ್ತಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಅಥವಾ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಉಪಚುನಾವಣೆಗಳನ್ನು ದುರಡಳಿತದ ಮೇಲೆ ನಡೆಸುವ ಅವಶ್ಯಕತೆ ಇರುವುದಿಲ್ಲ ಅಂತಹ ಅವಶ್ಯಕತ್ತೆ ಏನಾದರೂ ಇದ್ದರೆ ಅದು ಭಾರತೀಯ ಜನತಾ ಪಕ್ಷದ ನಾಯಕರಿಗೆ ಮತ್ತು ಅವರ ಪಕ್ಷಕ್ಕೆ ಇರುತ್ತದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ನಾಯಕರಾದ ಯತ್ನಾಳ್ ಅವರು ಆರ್. ಅಶೋಕ್ ರವರು ಅಡ್ಜಸ್ಟ್ಮೆಂಟ್ ಗಿರಾಕಿ ಎನ್ನುವ ವಿಷಯವನ್ನು ಹಲವಾರು ಬಾರಿ ಪ್ರಸ್ತಾಪ ಮಾಡಿರುತ್ತಾರೆ. ಇದರ ಜೊತೆಗೆ ಕರ್ನಾಟಕದ ಪದ್ಮನಾಭನಗರದ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಬಾರಿ ಜೆಡಿಎಸ್ ನಾಯಕರು ಜೊತೆ ಹೊಂದಾಣಿಕೆ ಮಾಡಿಕೊಂಡು ಗೆಲ್ಲುವ ಆರ್ ಅಶೋಕ್ ಅವರು, ತಾವು ಸಮರ್ಥ ವಿರೋಧ ಪಕ್ಷದ ನಾಯಕರು ಎಂಬುದನ್ನ ಇದುವರೆಗೆ ರುಜುವಾತು ಮಾಡಲು ಸಾಧ್ಯವಾಗಿಲ್ಲ. ಬೆಂಗಳೂರು ದಕ್ಷಿಣ ತಾಲೂಕಿನ ಬಿ.ಎಮ್. ಕಾವಲು ಗ್ರಾಮದಲ್ಲಿ 2500 ಎಕರೆ ಅಕ್ರಮ ಮಂಜೂರಾತಿಗೆ ಸಂಬಂಧ ಪಟ್ಟಂತೆ ಗುರುತರವಾದ ಆರೋಪವನ್ನು ಎದುರಿಸುತ್ತಿರುವ ಅಶೋಕ್ ರವರು, ಈ ಪ್ರಕರಣದ ಮಾಹಿತಿಯನ್ನು ತಮ್ಮ ಚುನಾವಣಾ ಪ್ರಮಾಣ ಪತ್ರದಲ್ಲಿ ನೀಡದೆ ಪ್ರಮಾದವನ್ನು ಎಸಗಿರುತ್ತಾರೆ ಎಂದಿದ್ದಾರೆ.
ಇದರ ಜೊತೆಗೆ ಅವರು ಕರ್ನಾಟಕದ ಕಂದಾಯ ಸಚಿವರಾಗಿ ಬಿಜೆಪಿ ಸರ್ಕಾರದಲ್ಲಿ ಅನೇಕ ವೈಫಲ್ಯಗಳನ್ನು ಕಂಡಿರುತ್ತಾರೆ ಉದಾಹರಣೆಗೆ ಅವರ ಅವಧಿಯಲ್ಲಿ ಸುಮಾರು 5 ಲಕ್ಷ ಪೋಡಿ ಪ್ರಕರಣಗಳು ಬಾಕಿ ಇದ್ದು, ಇದರಿಂದ ಇಡೀ ರಾಜ್ಯದ ರೈತರು ಸಂಕಷ್ಟ ಅನುಭವಿಸಿದರು. ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವರಾಗಿ ವೈಫಲ್ಯ ಕಂಡ ಇವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಿಲ್ಲ. ಬೆಂಗಳೂರು ಜಯನಗರದ ಡಬಲ್ ಕೊಲೆ ಇದುವರೆಗೂ ಪತ್ತೆ ಆಗಲಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಲೊಟ್ಟೆಗೊಲ್ಲ ಹಳ್ಳಿ ಭೂ ಪ್ರಕರಣದಲ್ಲಿ ಮಾಡಿರಬಹುದಾದ ವಂಚನೆ, ಅವರ ಶಿಕ್ಷಣ ಸಂಸ್ಥೆಗೆ ಪಡೆದಿರುವ ಅಕ್ರಮ ಭೂಮಿ, ಕಂದಾಯ ಸಚಿವರಾಗಿ ಅಕ್ರಮವಾಗಿ ಹಂಚಿರುವ ಭೂಮಿಯ ಆರೋಪಗಳಿಗೆ ಸಾರ್ವಜನಿಕವಾಗಿ ಇಲ್ಲಿಯವರೆಗೆ ಉತ್ತರ ನೀಡದೆ ಪಲಾಯನ ಮಾಡುತ್ತಿರುವ ಆರ್. ಅಶೋಕ್ ರವರು, ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಮೇಲೆ ಮಾತನಾಡುವ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದು ವಾಗ್ಧಾಳಿ ನಡೆಸಿದ್ದಾರೆ.
ಕರ್ನಾಟಕದ ಹೊಂದಾಣಿಕೆ ರಾಜಕಾರಣದ ಪಿತಾಮಹ ಖ್ಯಾತಿಯ ಆರ್ ಅಶೋಕ್ ರವರು 2013ರ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಹೊಂದಾಣಿಕೆ ಮಾಡಿಸಿ ಅನಿತಾ ಕುಮಾರಸ್ವಾಮಿ ಮತ್ತು ಪುಟ್ಟರಾಜು ಅವರಿಗೆ ಕೈಕೊಟ್ಟು ದೇವೇಗೌಡರಿಂದ ಚೀಮಾರಿ ಹಾಕಿಸಿಕೊಂಡ ಘಟನೆ ಮಾಸುವ ಮುನ್ನವೇ ಚೆನ್ನಪಟ್ಟಣ ದಲ್ಲಿ ಹೊಸ ನಾಟಕ ಆರಂಭಿಸಿದ್ದಾರೆ. ಉಪ ಚುನಾವಣೆ ಪೂರ್ವದಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡುವಂತೆ ಯೋಗೀಶ್ವರ್ ಅವರಿಗೆ ಚಿತಾವಣೆ ಮಾಡಿದ ಅಶೋಕ್, ಪ್ರತಿದಿನ ಒಂದೊಂದು ವೇಷ ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯಲ್ಲಿ ಅನೇಕ ಹಿರಿಯರ ತುಳಿದು ವಿರೋಧ ಪಕ್ಷದ ಸ್ಥಾನ ಪಡೆದಿರುವ ಇವರು, ರಾಜ್ಯದ ಸಮಸ್ಯೆಗಳ ಮೇಲೆ ಬೆಳುಕು ಚೆಲ್ಲುವ ಬದಲು, ರಾಜಕೀಯ ಭಾಷಣ ಮಾಡಿಕೊಂಡು ಅಲೆದಾಡುತ್ತಿದ್ದಾರೆ. ಇದು ಈ ರಾಜ್ಯದ ದುರಂತ ಮತ್ತು ಬಿಜೆಪಿ ಅಧೋಗತಿ ಎಂಬುದಾಗಿ ಗುಡುಗಿದ್ದಾರೆ.
ಅತ್ಯಂತ ಹಿರಿಯರು ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ ಸದನದ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಆರ್. ಅಶೋಕ್ ಸಾದ್ಯವಾದರೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಗೌರವ ತುಂಬಲಿ. ಇಲ್ಲದೇ ಹೋದರೆ ರಾಜೀನಾಮೆ ನೀಡಿ ಮನೆ ಸೇರಲಿ. ಒಬ್ಬ ವಿರೋಧ ಪಕ್ಷದ ನಾಯಕರಾಗಿ ವೈಫಲ್ಯದಿಂದ ಸೋತಿರುವ ಆರ್. ಅಶೋಕ್, ಕಾಂಗ್ರೆಸ್ ಟೀಕೆಗೆ ಮುನ್ನ ಅವರ ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂಬುದಾಗಿ ತಿಳಿಸಿದ್ದಾರೆ.
BREAKING: ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ: ಪೊಲೀಸರಿಗೆ ದೂರು ನೀಡಿದ 2ನೇ ಪತ್ನಿ ಸುಮಿತ್ರಾ
ಮುಸ್ಲಿಮರ ಓಲೈಕೆಗಾಗಿ ಜಮೀನು ಕಬಳಿಕೆ, ಇದರ ವಿರುದ್ಧ ಬಿಜೆಪಿ ಬೃಹತ್ ಹೋರಾಟ: ಆರ್.ಅಶೋಕ್