ಬೆಂಗಳೂರು: ಇಂದು ನಟ, ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಪುತ್ರಿಯ ಭವಿಷ್ಯಕ್ಕೆ ನಾನು ನೆರವಾಗುವುದಾಗಿ ನಟ ಜಗ್ಗೇಶ್ ಘೋಷಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಗುರುಪ್ರಸಾದ್ ತಾನು ಮಾಡಿದಂತ ಸಿನಿಮಾದಿಂದ ಬಂದ ಹಣದಿಂದ ಒಳ್ಳೆಯ ಜೀವನ ಕಟ್ಟಿಕೊಳ್ಳಬಹುದಿತ್ತು. ಆದರೇ ಕುಡಿತದ ಚಟಕ್ಕೆ ಬಿದ್ದು ಜೀವನವನ್ನೇ ಹಾಳು ಮಾಡಿಕೊಂಡು ಬಿಟ್ಟ. ಆತನ ಪತ್ನಿ ಗರ್ಭಿಣಿ ಹಾಗೂ ಇರುವ ಪುತ್ರಿಯನ್ನು ನೋಡಿದ್ರೇ ಬೇಜಾರಾಗುತ್ತದೆ. ನಾನು ಗುರುಪ್ರಸಾದ್ ಅವರ ಪುತ್ರಿಯ ಭವಿಷ್ಯಕ್ಕೆ ಸಹಾಯ ಮಾಡುವುದಾಗಿ ತಿಳಿಸಿದರು.
ಎದ್ದೇಳು ಮಂಜುನಾಥ ಚಿತ್ರದ ನಂತ್ರ ರಂಗನಾಯಕಿ ಸಿನಿಮಾ ಮಾಡಿದ್ವಿ. ಈ ಬಳಿಕ ಗುರುಪ್ರಸಾದ್ ಹಾಗೂ ನನ್ನ ನಡುವೆ ಭಿನ್ನಾಭಿಪ್ರಾಯ ಉಟ್ಟಾಗಿತ್ತು. ಆ ಬಳಿಕ ನಾನು ಅವರು ಮಾತನಾಡಿದ್ದು ಅಷ್ಟಕ್ಕೇ ಅಷ್ಟೇ ಆಗಿತ್ತು. ಯಾವುದಾದರೂ ಕಾರ್ಯಕ್ರಮದಲ್ಲಿ ಸಿಕ್ಕಾಗ ಮಾತನಾಡಿಸುತ್ತಿದ್ದೆನು ಎಂದರು.
ನಾನು ಗುರುಪ್ರಸಾದ್ ಎರಡನೇ ಮದುವೆಯಾಗುವ ಸಂದರ್ಭದಲ್ಲೂ ಬುದ್ಧಿ ಹೇಳಿದ್ದೆ. ಅದೂ ಅಲ್ಲದೇ ಸಿನಿಮಾದಲ್ಲಿ ನಟಿಸಲು ಬಂದ ಹುಡುಗಿಯೊಂದಿಗೇ ಗುರುಪ್ರಸಾದ್ ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದರು. ಆ ಬಳಿಕ ಇಬ್ಬರು ಮದುವೆ ಮಾಡಿಕೊಂಡರು. ಆತನ ಹೆಂಡತಿ ಈಗ ಗರ್ಭಿಣಿ, ಅಲ್ಲದೇ ಮತ್ತೊಂದು ಹೆಣ್ಣು ಮಗು ಕೂಡ ಇದೆ. ನಾನು ಹೆಣ್ಣುಮಗುವಿನ ಭವಿಷ್ಯಕ್ಕೆ ನೆರವಾಗುವುದಾಗಿ ತಿಳಿಸಿದರು.
Shocking: ಹೊಟ್ಟೆಯಲ್ಲಿದ್ದವು 65 ಲೋಹದ ವಸ್ತುಗಳು: ಹೊರತೆಗೆದ ತಕ್ಷಣವೇ 14 ವರ್ಷದ ಬಾಲಕ ಸಾವು
Shocking: ಹೊಟ್ಟೆಯಲ್ಲಿದ್ದವು 65 ಲೋಹದ ವಸ್ತುಗಳು: ಹೊರತೆಗೆದ ತಕ್ಷಣವೇ 14 ವರ್ಷದ ಬಾಲಕ ಸಾವು
ಪ್ರಯಾಣಿಕರಿಗೆ ಗುಡ್ ನ್ಯೂಸ್: ಛತ್ ಪೂಜೆ ಹಬ್ಬಕ್ಕೆ ವಿಶೇಷ ರೈಲು ಸಂಚಾರ