ರಾಮನಗರ: ಕನ್ನಡ ಚಿತ್ರರಂಗದ ಹೆಸರಾಂತ ಗುರುಪ್ರಸಾದ್ ಅವರ ಸಾವಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ.
ಚುನಾವಣಾ ಪ್ರಚಾರದ ನಡುವೆ ಚನ್ನಪಟ್ಟಣದ ಚೆಕ್ಕರೆ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು; ಗುರು ಪ್ರಸಾದ್ ಒಬ್ಬ ಪ್ರತಿಭಾನ್ವಿತ ನಿರ್ದೇಶಕ. ಅವರು ಉತ್ತಮ ಚಿತ್ರಗಳನ್ನು ನೀಡಿದ ಪ್ರತಿಭಾನ್ವಿತ ನಿರ್ದೇಶಕ. ಅವರ ಸಾವಿನ ವಿಷಯ ಕೇಳಿ ಬಹಳ ನೋವಾಯಿತು. ಅವರ ಅತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸಿದರು.
ಚಿತ್ರರಂಗದಲ್ಲಿ ಲಾಭ ನಷ್ಟ ಸೋಲು ಗೆಲುವು ಸಾಮಾನ್ಯ. ಚಿತ್ರರಂಗದವರು ಸಮಾಜಕ್ಕೆ ಸಂದೇಶ ಕೊಡುವವರು. ಅಂತವರು ಸೋಲಿನಿಂದ ಧೃತಿಗೆಡಬಾರದು. ಅದು ಜನರ ಆತ್ಮವಿಶ್ವಾಸ ಕಡಿಮೆ ಮಾಡುತ್ತದೆ. ಯಾವುದೇ ಸಮಸ್ಯೆ ಬಂದರೂ ಧೃತಿಗೆಡಬೇಡಿ, ಮುಂದೆ ಹೆಜ್ಜೆ ಇಡಿ. ನಾವು ನಿಮ್ಮ ಜೊತೆಗಿರುತ್ತೇವೆ. ಎಲ್ಲವನ್ನೂ ಎದುರಿಸಿ ಎಂದು ಕೇಂದ್ರ ಸಚಿವರು ಮನವಿ ಮಾಡಿದರು.