ಜೈಪುರ: ಸುಕ್ಮಾ ಜಿಲ್ಲೆಯ ಜಗರ್ಗುಂಡಾದ ಸಾಪ್ತಾಹಿಕ ಮಾರುಕಟ್ಟೆಯಾದ ಹಾತ್ ಬಜಾರ್ ನಲ್ಲಿ ಭಾನುವಾರ ಮಾವೋವಾದಿಗಳು ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ
ನಿಷೇಧಿತ ಸಂಘಟನೆ ಸಿಪಿಐ (ಮಾವೋವಾದಿ) ಹರಿತವಾದ ಆಯುಧಗಳೊಂದಿಗೆ ಈ ದಾಳಿಯನ್ನು ನಡೆಸಿದ್ದು, ಇದು ಇಲ್ಲಿನ ಗೊಂದಲಮಯ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಬಸ್ತಾರ್ ಪೊಲೀಸರು ತಿಳಿಸಿದ್ದಾರೆ.
“ಅನಿರೀಕ್ಷಿತ ದಾಳಿಯಲ್ಲಿ, ಇಬ್ಬರು ಭದ್ರತಾ ಸಿಬ್ಬಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ. ಈ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದು, ಈ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಘರ್ಷ ಪೀಡಿತ ಬಸ್ತಾರ್ ವಲಯದಲ್ಲಿ ಸುಕ್ಮಾ ಅತ್ಯಂತ ಮಾವೋವಾದಿ ಪೀಡಿತ ಜಿಲ್ಲೆಗಳಲ್ಲಿ ಒಂದಾಗಿದೆ ಮತ್ತು ಈ ವರ್ಷ ಎಡಪಂಥೀಯ ಉಗ್ರಗಾಮಿಗಳ ವಿರುದ್ಧ ಸರಣಿ ಎನ್ಕೌಂಟರ್ಗಳಿಗೆ ಸಾಕ್ಷಿಯಾಗಿದೆ.
ಈ ವರ್ಷ, ಸಂಘರ್ಷ ಪೀಡಿತ ಬಸ್ತಾರ್ ವಲಯದಲ್ಲಿ ಇದುವರೆಗೆ 17 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 38 ಜವಾನರು ಗಾಯಗೊಂಡಿದ್ದಾರೆ ಎಂದು ಬಸ್ತಾರ್ ಪೊಲೀಸರು ಹಂಚಿಕೊಂಡ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ